ಭಾನುವಾರ, ಮೇ 12, 2024
ಕಾಂಗ್ರೆಸ್ ಶಾಸಕರೇ ಸರ್ಕಾರವನ್ನು ಪತನಗೊಳಿಸುತ್ತಾರೆ: ಆರ್ ಅಶೋಕ್--ಹುಣಸೂರು : ಕಲುಷಿತ ನೀರು ಸೇವಿಸಿ ಹಲವಾರು ಜನರು ಅಸ್ವಸ್ಥ-ವಕೀಲ ಜೆ. ದೇವರಾಜೇಗೌಡಗೆ 14 ದಿನಗಳ ನ್ಯಾಯಾಂಗ ಬಂಧನ-ಶತಕ ಸಿಡಿಸಿ ಐಪಿಎಲ್ ನಲ್ಲಿ ವೇಗವಾಗಿ 1000 ರನ್ ಪೂರೈಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಸಾಯಿ ಸುದರ್ಶನ್..!-ಕಾಂಗ್ರೆಸ್ ಗೆ ಮತ ಹಾಕಿದರೆ ಪಾಕಿಸ್ತಾನಕ್ಕೆ ಮತ ಹಾಕಿದಂತೆ; ಬಿಜೆಪಿ ನಾಯಕಿ ನವನೀತ್ ರಾಣಾ ವಿರುದ್ಧ ಪ್ರಕರಣ ದಾಖಲು..!-ಜೈಲಿನಿಂದ ಬಿಡುಗಡೆಯಾದ ಬಳಿಕ ಅರವಿಂದ್ ಕೇಜ್ರಿವಾಲ್ ಗೆ ಕಾರ್ಯಕರ್ತರಿಂದ ಅದ್ದೂರಿ ಸ್ವಾಗತ; ಸುಪ್ರೀಂನಿಂದ ಷರತ್ತುಗಳೇನು.?-ಇದು ನಾಚಿಕೆಗೇಡಿನ ಸಂಗತಿ; ಕೆಎಲ್ ರಾಹುಲ್ ಗೆ ನಿಂದಿಸಿದ್ದ ಸಂಜೀವ್ ಗೋಯೆಂಕಾ ವಿರುದ್ಧ ಮೊಹಮ್ಮದ್ ಶಮಿ ವಾಗ್ದಾಳಿ..!-ಫೋನಿನಲ್ಲಿ ಮಾತಾಡುತ್ತಾ ಅಂಗಳದಲ್ಲಿ ಬೆಳೆದ ಹೂ ತಿಂದ ಯುವತಿ ಸಾವು-ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ ; ವಕೀಲ ದೇವರಾಜೆಗೌಡ ಪೊಲೀಸ್ ವಶಕ್ಕೆ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಅಹಮದಾಬಾದ್​ನಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಮೂರನೇ ಟಿ-20 ನಿರ್ಣಾಯಕ ಪಂದ್ಯ

Twitter
Facebook
LinkedIn
WhatsApp
Hardik Pandya

ಭಾರತ ಹಾಗೂ ನ್ಯೂಜಿಲೆಂಡ್ (IND vs NZ) ನಡುವಣ ಮೂರನೇ ಟಿ-20 ಪಂದ್ಯ ಇಂದು (ಫೆಬ್ರವರಿ 1) ಅಹಮದಾಬಾದ್​​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿದೆ. ರಾತ್ರಿ 7 ಗಂಟೆಗೆ ಪಂದ್ಯ ಆರಂಭ ಆಗಲಿದೆ. ಮೊದಲ ಪಂದ್ಯವನ್ನು 21 ರನ್​ಗಳಿಂದ ನ್ಯೂಜಿಲೆಂಡ್ ಗೆದ್ದರೆ ಎರಡನೇ ಪಂದ್ಯವನ್ನು ಭಾರತ ತನ್ನ ತೆಕ್ಕೆಗೆ ಪಡೆದಿದೆ. ಹೀಗಾಗಿ ಇಂದಿನ ಪಂದ್ಯ ನಿರ್ಣಾಯಕವಾಗಿದೆ. ಇಂದು ಗೆದ್ದವರಿಗೆ ಸರಣಿ ಒಲಿಯಲಿದೆ.

ಪಿಚ್​ ಯಾರಿಗೆ ಸಹಕಾರಿ?

ಈವರೆಗೆ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಒಟ್ಟೂ ಒಂಭತ್ತು ಅಂತಾರಾಷ್ಟ್ರೀಯ ಟಿ-20 ಪಂದ್ಯಗಳು ನಡೆದಿವೆ. ಆ ಪೈಕಿ ಮೊದಲು ಬ್ಯಾಟಿಂಗ್ ಮಾಡಿದವರು ಐದು ಹಾಗೂ ಮೊದಲು ಬೌಲ್ ಮಾಡಿದವರು ನಾಲ್ಕು ಪಂದ್ಯ ಗೆದ್ದಿದ್ದಾರೆ. ಹೀಗಾಗಿ ಫಲಿತಾಂಶ ಬಹುತೇಕ ಸಮಬಲದಲ್ಲಿವೆ ಎನ್ನಬಹುದು. ರಾತ್ರಿ ಇಬ್ಬನಿ ಇರುವುದರಿಂದ ಟಾಸ್ ಗೆದ್ದವರು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು.

ಗರಿಷ್ಟ ಹಾಗೂ ಕನಿಷ್ಠ ರನ್​

ಅಹಮದಾಬಾದ್ ಸ್ಟೇಡಿಯಂ ತುಂಬಾನೇ ದೊಡ್ಡದಾಗಿದೆ. ಹೀಗಾಗಿ ಫೋರ್ ಹಾಗೂ ಸಿಕ್ಸರ್​ಗಳ ನಿರೀಕ್ಷೆ ಇಲ್ಲಿ ಕಡಿಮೆ.

ಗರಿಷ್ಟ ರನ್​ 224/2 ಭಾರತ vs ಇಂಗ್ಲೆಂಡ್​

ಗರಿಷ್ಟ ರನ್ ಚೇಸ್​ 166/3 ಭಾರತ vs ಇಂಗ್ಲೆಂಡ್

ಕನಿಷ್ಠ ಮೊತ್ತ: 107/7 ವೆಸ್ಟ್ ಇಂಡೀಸ್​ vs ಇಂಡಿಯಾ ಮಹಿಳಾ ತಂಡ

ಪಿಚ್ ರಿಪೋರ್ಟ್​

ಈ ಪಿಚ್ ದೊಡ್ಡದಿರುವುದರಿಂದ ಹೆಚ್ಚು ಸ್ಕೋರ್ ಗಳಿಕೆ ಮಾಡುವುದು ಸವಾಲಿನ ಸಂಗತಿ. ಮೊದಲ ಇನ್ನಿಂಗ್ಸ್​ ಆಡಿದವರು ಸರಾಸರಿ 152 ರನ್​, ಎರಡನೇ ಇನ್ನಿಂಗ್ಸ್ ಆಡಿದವರು ಸರಾಸರಿ 145 ರನ್ ಕಲೆಹಾಕಿದ್ದಾರೆ. ಪಿಚ್​ನಲ್ಲಿ ಸೆಟ್​​​ ಆದ ಬ್ಯಾಟ್ಸಮನ್​ಗಳು ಮಾತ್ರ ಇಲ್ಲಿ ಆಡಬಹುದು. ಹೊಸ ಆಟಗಾರರು ಬಂದು ಏಕಾಏಕಿ ಹೊಡಿಬಡಿ ಆಟ ಆಡಲು ಸಾಧ್ಯವಿಲ್ಲ. ವೇಗಿಗಳಿಗಿಂತ ಸ್ಪಿನ್ನರ್ ಹಾಗೂ ನಿಧಾನಗತಿಯ ಬೌಲರ್​​​ಗಳಿಗೆ ಪಿಚ್ ಸಹಕಾರಿ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ