ಶುಕ್ರವಾರ, ಮೇ 3, 2024
ವಿಪರೀತ ಸೆಖೆ ಎಂದು ರಾತ್ರಿ ಟೆರೇಸ್ ಮೇಲೆ ಮಲಗಿದ್ದ ಶಿಕ್ಷಕ ಕೆಳಗೆ ಬಿದ್ದು ಸಾವು..!-ಅಮೇಥಿಯಲ್ಲಿ ರಾಹುಲ್ ಗಾಂಧಿ ಬದಲಿಗೆ ಸ್ಮೃತಿ ಇರಾನಿ ವಿರುದ್ಧ ಸ್ಪರ್ಧಿಸುತ್ತಿರುವ ಕಾಂಗ್ರೆಸ್ ಅಭ್ಯರ್ಥಿ ಕಿಶೋರಿ ಲಾಲ್ ಶರ್ಮಾ ಹಿನ್ನೆಲೆ ಏನು?-ಲಕ್ಷ್ಮಿ ಹೆಬ್ಬಾಳ್ಕರ್ ಪುತ್ರ ಮೃಣಾಲ್‌ ಹೆಬ್ಬಾಳ್ಕರ್‌ ಬೆಂಬಲಿಸುವಂತೆ ನೇಹಾ ತಂದೆ ನಿರಂಜನ ಹಿರೇಮಠ ಮನವಿ..!-ಬಂಟ್ವಾಳ :ನೇತ್ರಾವತಿ ಸೇತುವೆ ಬಳಿ ಟಿಪ್ಪರ್ ಹಾಗೂ ಸ್ಕೂಟರ್ ಮಧ್ಯೆ ಅಪಘಾತ ; ಸವಾರ ಮೃತ್ಯು.!-ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಬ್ರಿಜ್ ಭೂಷಣ್ ಗೆ ಕೈ ತಪ್ಪಿದ ಟಿಕೆಟ್ ; ಆದರೂ ಮಗನಿಗೆ ಬಿಜೆಪಿ ಟಿಕೆಟ್ ಘೋಷಣೆ.!-ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಪ್ರಕರಣವು ಚುನಾವಣೆ ಮೇಲೆ ಪರೋಕ್ಷವಾಗಿ ಪ್ರಭಾವ ಬೀರುತ್ತದೆ ; ಸಿ.ಟಿ ರವಿ-ಉಪ್ಪಿನಂಗಡಿ : ತೀವ್ರ ಜ್ವರ ಬಾಧೆಯಿಂದ ಅರ್ಚಕ ಸಾವು.!-ಶ್ರೀ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನೇಮಕವಾಗಿರುವ ಏಸುರಾಜ್ ಕ್ರಿಶ್ಚಿಯನ್ ಎಂಬ ಆರೋಪ ಸುಳ್ಳು; ರಾಮಲಿಂಗಾ ರೆಡ್ಡಿ-ರಾಮಲಿಂಗೇಶ್ವರ ದೇವರ ಮೇಲೆ ಆಣೆ ಮಾಡಿ ಹೇಳುತ್ತೇನೆ ನಾವು ಸಂವಿಧಾನ ಬದಲಾವಣೆ ಮಾಡುವುದಿಲ್ಲ; ಬಿಜೆಪಿ ಶಾಸಕ ಶಿವರಾಜ್​ ಪಾಟೀಲ್-ಅಮೇಠಿ ಬದಲು ರಾಯ್ ಬರೇಲಿಯಿಂದ ರಾಹುಲ್ ಗಾಂಧಿ ಸ್ಪರ್ಧೆ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಅಕ್ಕನ ಮನೆಗೆ ನುಗ್ಗಿ ಬಾಮೈದನ ಅಟ್ಟಹಾಸ; ಕಲ್ಲಿನಿಂದಲೇ ಜಜ್ಜಿ ಇಬ್ಬರ ಕೊಲೆ

Twitter
Facebook
LinkedIn
WhatsApp
bagalkote murder

ಬಾಗಲಕೋಟೆ: ರಕ್ತ ನೀರಿನಂತೆ ಹರಿದಿದೆ. ಮನೆ ಮುಂದೆಯೇ ನೆತ್ತರ ಓಕುಳಿಯಾಗಿದೆ. ಅಲ್ಲಿನ ಘನಘೋರ ಕಂಡು ಊರವರೆಲ್ಲಾ ಬೆದರಿ ನಿಂತಿದ್ದರು. ಸ್ಪಾಟ್‌ಗೆ ಬಂದಿದ್ದ ಪೊಲೀಸರು ಸಂಜೆ ಹೊತ್ತಲ್ಲೇ ಬೆವತು ಹೋಗಿದ್ರು. ಹೌದು ಮನೆಗೆ ಬರಬೇಡ ಎಂದ ಬಾವನ ಸಹೋದರಿಯರನ್ನ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರುವ ಘಟನೆ ಜಿಲ್ಲೆಯ ಬನಹಟ್ಟಿ ನಗರದ ಶನಿವಾರಪೇಟೆಯಲ್ಲಿ ನಿನ್ನೆ(ಮಾ.13) ನಡೆದಿದೆ. ಕಾಡಪ್ಪ ಭುಜಂಗ ಎಂಬುವವನೇ ಕೊಲೆ ಮಾಡಿರುವ ಆರೋಪಿ, ಬೋರವ್ವ ಮಿರ್ಜಿ (40), ಯಲ್ಲವ್ವ ಪೂಜಾರ (48) ಮೃತರು. ಬಾಮೈದನ ಅಟ್ಟಹಾಸಕ್ಕೆ ಮಹಿಳೆಯರಿಬ್ಬರು ಹೆಣವಾಗಿದ್ದಾರೆ. 

ಬೆಳಗಿನಿಂದ ಸಂಜೆವರೆಗೂ ರಣರಣ ಬಿಸಿಲು, ಸಂಜೆಯಾಗುತ್ತಿದ್ದಂತೆ ಸ್ವಲ್ಪ ತಣ್ಣನೆ ಗಾಳಿ ಬೀಸಿತ್ತು. ಹೀಗೆ ತಂಪಿನ ವಾತಾವರಣದಲ್ಲಿ ಬಾಗಲಕೋಟೆ ಜಿಲ್ಲೆ ಬನಹಟ್ಟಿ ಶಾಂತವಾಗಿತ್ತು. ಆದರೆ ಅದೇ ಹೊತ್ತಲ್ಲೇ ನುಗ್ಗಿದ್ದ ಹಂತಕ ರಕ್ತದ ಕೋಡಿ ಹರಿಸಿದ್ದಾನೆ.

ಅಂದಹಾಗೆ ಬನಹಟ್ಟಿಯ ಲಕ್ಷ್ಮೀನಗರ ನಿವಾಸಿ ಕಾಡಪ್ಪ ಭುಜಂಗ ಎಂಬಾತ ತನ್ನ ಸಹೋದರಿ ಬಂದವ್ವಳನ್ನ ಇದೇ ಊರಿನ ಶನಿವಾರ ಪೇಟೆಯಲ್ಲಿ ವಾಸವಾಗಿರುವ ಮಿರ್ಜಿ ಫ್ಯಾಮಿಲಿಗೆ ಕೊಟ್ಟು ಮದುವೆ ಮಾಡಿದ್ದ. ಇನ್ನು ಕಾಡಪ್ಪನ ಸಹೋದರಿಯ ಗಂಡ ಸಾವಿನ ಮನೆ ಸೇರಿದ್ದ. ವಿಷ್ಯ ಅಂದರೆ ಕಾಡಪ್ಪನ ಭಾವ ಸಾವಿನ ಮನೆ ಸೇರುತ್ತಿದ್ದಂತೆ ಆಸ್ತಿ ಕಲಹ ಶುರುವಾಗಿತ್ತು. 

ಎಲ್ಲಾ ಆಸ್ತಿ ನನಗೇ ಸೇರಬೇಕು ಎಂದು ಬಂದವ್ವ ಅಂದುಕೊಂಡಿದ್ರೆ, ಆಕೆಯ ಗಂಡನ ಸಹೋದರಿಯರು ಇದಕ್ಕೆ ಅಡ್ಡಿಯಾಗಿದ್ರು. ಒಂದು ವರ್ಷದಿಂದಲೂ ಹೀಗೆ ಜಗಳ ನಡೆದಿತ್ತು. ಆದರೆ ನಿನ್ನೆ ಸಂಜೆ ಮಾತ್ರ ತನ್ನ ಸಹೋದರಿಯ ಮನೆಗೆ ಬಂದಿದ್ದ ಕಾಡಪ್ಪ ಮತ್ತೆ ಆಸ್ತಿ ಜಗಳ ತೆಗೆದಿದ್ದ. ಈ ವೇಳೆ ಮನೆಯಲ್ಲಿದ್ದ ಬೋರವ್ವ ಹಾಗೂ ಯಲ್ಲವ್ವ, ನಮ್ಮ ಮನೆಗೆ ನೀನು ಬರಬೇಡ ಅಂದಿದ್ದಾರೆ ಅಷ್ಟೇ. ಅಷ್ಟಕ್ಕೆ ಕಾಡಪ್ಪ ಇಬ್ಬರನ್ನು ಕಲ್ಲಿನಿಂದಲೇ ಜಜ್ಜಿ ಕೊಲೆ ಮಾಡಿದ್ದ.

ಇನ್ನು ಬಂದವ್ವನ ನಾದಿನಿಯಾದ ಯಲ್ಲವ್ವನ ಗಂಡ ಕೂಡ ತೀರಿಕೊಂಡಿದ್ದ. ಹೀಗಾಗಿ ಆಕೆ ತವರು ಮನೆ ಸೇರಿದ್ದಳು. ಇನ್ನು ಬೋರವ್ವನಿಗೆ ಮದುವೆ ಆಗಿರಲಿಲ್ಲ. ಹೀಗಾಗಿ ಅವರು ಕೂಡ ಈ ಆಸ್ತಿಯಲ್ಲಿ ನಮಗೂ ಪಾಲು ಬೇಕು ಅಂದಿದ್ರು. ಆದರೆ ಬಂದವ್ವ ಮಾತ್ರ ನಾದಿನಿಯರಿಗೆ ಆಸ್ತಿಪಾಲು ಕೊಡಲು ಒಪ್ಪಿರಲಿಲ್ಲ. ಬಂದವ್ವನಿಗೆ ಸಹೋದರ ಕಾಡಪ್ಪ ಬೆಂಬಲವಾಗಿ ನಿಂತಿದ್ದ. ಆದರೆ ನಿನ್ನೆ ಇಬ್ಬರ ಹೆಣ ಉರುಳಿಸಿದ್ದಾನೆ. ಈ ಡಬಲ್‌ ಮರ್ಡರ್‌ ಸಂಬಂಧ ಕೇಸ್‌ ದಾಖಲಿಸಿಕೊಂಡಿರುವ ಬನಹಟ್ಟಿ ಪೊಲೀಸರು ಹಂತಕ ಕಾಡಪ್ಪನನ್ನ ಅರೆಸ್ಟ್ ಮಾಡಿದ್ದಾರೆ. ಈ ಮರ್ಡರ್‌ಗೆ ಅಸಲಿ ಕಾರಣ ಏನು ಅನ್ನೋದ್ರ ತನಿಖೆಗೆ ಇಳಿದಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ