ಸ್ಯಾಂಡಲ್‌ವುಡ್ (Sandalwood) ನಟಿ ನೀತಾ ಅಶೋಕ್ (Neetha Ashok) ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ತಮ್ಮ ಬಹುಕಾಲದ ಗೆಳೆಯನ ಜೊತೆ ಹೊಸ ಬಾಳಿಗೆ ಕಾಲಿಡಲು ರೆಡಿಯಾಗಿದ್ದಾರೆ.
ಖಾಸಗಿ ವಾಹಿನಿಯ `ಯಶೋದೆ’ (Yashode) ಸೀರಿಯಲ್ ಮೂಲಕ ನಟನಾ ಕ್ಷೇತ್ರಕ್ಕೆ ಕಾಲಿಟ್ಟ ಕರಾವಳಿ ಚೆಲುವೆ ನೀತಾ ಅಶೋಕ್, ತುಳುವಿನ `ಜಬರ್‌ದಸ್ತ್ ಶಂಕರ’ ಸಿನಿಮಾಗೆ ನಾಯಕಿಯಾದ್ರು. ಬಳಿಕ ಸುದೀಪ್ (Sudeep) ನಟನೆಯ `ವಿಕ್ರಾಂತ್ ರೋಣ’ (Vikant Rona) ಚಿತ್ರದಲ್ಲಿ ನಾಯಕಿಯಾಗಿ ಮಿಂಚಿದ್ದರು. ವರ್ಲ್ಡ್ ವೈಡ್ ನಾಯಕಿಯಾಗಿ ರೀಚ್ ಆಗಿದ್ದರು. ಈ ಚಿತ್ರದ ನಂತರ ಮುಂದೆ ಯಾವ ಸಿನಿಮಾದಲ್ಲಿ ನಟಿಸುತ್ತಾರೆ ಎಂದು ಕಾದು ಕೂತಿದ್ದ ಫ್ಯಾನ್ಸ್‌ಗೆ ಮದುವೆಯ ಸುದ್ದಿ ಮೂಲಕ ಗುಡ್ ನ್ಯೂಸ್ ಕೊಟ್ಟಿದ್ದಾರೆ.
ತಮ್ಮ ಬಹುಕಾಲದ ಗೆಳೆಯ ಸತೀಶ್ (Satish) ಜೊತೆ ಇತ್ತೀಚೆಗೆ ನೀತಾ ಎಂಗೇಜ್‌ಮೆಂಟ್ ಮಾಡಿಕೊಂಡಿದ್ದಾರೆ. ಕ್ಲಾಸ್‌ಮೇಟ್ ಟು ಸೋಲ್‌ಮೇಟ್ ಎಂಬ ಪೋಸ್ಟ್ ಹಾಕುವ ಮೂಲಕ ತಾವು ಎಂಗೇಜ್ ಆಗಿರುವ ಬಗ್ಗೆ ನಟಿ ಸೋಷಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ.
ನಿಶ್ಚಿತಾರ್ಥದಲ್ಲಿ (Engagement) ಕುಟುಂಬದವರು, ಆಪ್ತರು ಅಷ್ಟೇ ಈ ಸಂಭ್ರಮದಲ್ಲಿ ಭಾಗಿಯಾಗಿದ್ದಾರೆ. ಸದ್ಯದಲ್ಲೇ ಈ ಜೋಡಿ ಹಸೆಮಣೆ ಏರಲಿದ್ದಾರೆ. ಹಲವಾರು ವರ್ಷಗಳ ಪ್ರೀತಿಗೆ ಮದುವೆಯ ಮುದ್ರೆ ಒತ್ತಲು ರೆಡಿಯಾಗಿದ್ದಾರೆ.
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist