ದಾವಣಗೆರೆ ( ನ.21 ): ಆರು ತಿಂಗಳ ಗರ್ಭಿಣಿಯನ್ನು ಕೊಲೆ ಮಾಡಿ ಕಾಡಿನಲ್ಲಿ ಮೃತದೇಹ ಹೂತು ಹಾಕಿದ ಬರ್ಬರ ಘಟನೆ ದಾವಣಗೆರೆ ಜಿಲ್ಲೆಯಲ್ಲಿ ನಡೆದಿದೆ. ಚಂದ್ರಕಲಾ ಅಲಿಯಾಸ್ ರಶ್ಮಿ (20) ಕಳೆದ 43 ದಿನದ ಹಿಂದೆ ನಾಪತ್ತೆಯಾಗಿದ್ದಳು. ಈ ಬಗ್ಗೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಾಗಿತ್ತು. ಪ್ರಕರಣ ವಿಚಾರಣೆ ನಡೆಸಿದಾಗ ಗಂಡ ಮೋಹನ್ ಕುಮಾರ್ ಅಲಿಯಾಸ್ ಮನು (24) ಕೊಲೆ ಮಾಡಿ ಅರಣ್ಯದಲ್ಲಿ ಹೂತು ಹಾಕಿರುವ ಸತ್ಯ ಬಾಯ್ಬಿಟ್ಟಿದ್ದಾನೆ.
ದಾವಣಗೆರೆ ಜಿಲ್ಲೆ ಐಗೂರು ಗ್ರಾಮದ ಯುವತಿ ಚಂದ್ರಕಲಾ ಆಲಿಯಾಸ್ ರಶ್ಮಿಯನ್ನು (Rashmi) ಚನ್ನಗಿರಿ ತಾಲ್ಲೂಕಿನ ಗಂಗಗೊಂಡನಹಳ್ಳಿಯ ಮನು ಆಲಿಯಾಸ್ ಮೋಹನ್ (Mohan) ಅವರಿಗೆ ಕೊಟ್ಟು ಇದೇ ವರ್ಷ ಏಪ್ರೀಲ್ 13ರಂದು ಮದುವೆ ಮಾಡಿಕೊಡಲಾಗಿತ್ತು. ಮದುವೆ ಆದ ಹೊಸದರಲ್ಲಿ ಎಲ್ಲವು ಚೆನ್ನಾಗಿತ್ತು. ಆ ನಂತರ ಒಂದು ತಿಂಗಳಿಗೆ ರಶ್ಮಿ ಗರ್ಭಿಣಿಯಾಗಿದ್ದಳು. ನಂತರ ಐದು ತಿಂಗಳಿಗೆ ಮನೆಯವರು ಹಬ್ಬದ ಊಟ ಮಾಡಿ ಬೀಳ್ಕೊಟ್ಟಿದ್ದಾರೆ. ಗರ್ಭಣಿಯಾದ ನಂತರ ಅವಳಿಗೆ ಇಲ್ಲಸಲ್ಲದ ಮಾತುಗಳನ್ನಾಡುತ್ತಾ ಹಿಂಸೆ ನೀಡಿದ್ದಾರೆ. ನಂತರ 43 ದಿನಗಳ ಹಿಂದೆ ಮನೆಯಿಂದ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಾಳೆ.
ತಿಂಗಳ ಹಿಂದೆಯೇ ಹತ್ಯೆಗೆ ಪ್ಲಾನ್:
ರಶ್ಮಿಯನ್ನು ಕೊಲೆ ಮಾಡೋದಕ್ಕೆ ಫಿಕ್ಸ್ ಆಗಿದ್ದ ಮೋಹನ್ ತಿಂಗಳ ಮೊದಲೇ ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ತಾಲೂಕು ಸಮೀಪದ ಶಿರಗಲಿಪುರ ಕಣಿವೆ ಬಳಿ ಗುಂಡಿ ತೋಡಿ ಗುರುತು ಮಾಡಿ ಹೋಗಿದ್ದ. ಅಕ್ಟೋಬರ್ 8 ರಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ರಶ್ಮಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಮಧ್ಯರಾತ್ರಿ ಕಾರಿನಲ್ಲಿ ಮೃತ ದೇಹ ಕೊಂಡೊಯ್ದು ತಾನು ತೆಗೆದಿದ್ದ ಗುಂಡಿಯಲ್ಲಿ ಹೂತಿಟ್ಟು ಬಂದಿದ್ದ. ಅಂದೇ ರಾತ್ರಿ 2 ಗಂಟೆ ಸುಮಾರಿಗೆ ಆಕೆಯ ಮನೆಯವರಿಗೆ ಕರೆ ಮಾಡಿ ರಶ್ಮಿ ಕಾಣಿಸುತ್ತಿಲ್ಲ. ಎಲ್ಲಿ ಹೋಗಿದ್ದಾಳೋ ಗೊತ್ತಿಲ್ಲ ಎಂದು ನಾಟಕವಾಡಿದ್ದಾನೆ.
ತವರು ಮನೆಯವರು ಬಂದಾಗ ನಿಮ್ಮ ಮಗಳು ಯಾರ ಜೊತೆಯಲ್ಲೋ ಓಡಿ ಹೋಗಿದ್ದಾಳೆ ಎಂದು ಮೋಹನ್ ಮತ್ತೆ ನಾಟಕ ಶುರು ಮಾಡಿದ್ದ. ಅಲ್ಲದೆ ಗ್ರಾಮ ದೇವರ ಮೂರ್ತಿ ತಲೆ ಮೇಲೆ ಪ್ರಮಾಣ ಮಾಡಿ ನಾನು ಕೊಲೆ ಮಾಡಿಲ್ಲ, ಅವಳು ಎಲ್ಲಿ ಹೋಗಿದ್ದಾಳೋ ಗೊತ್ತಿಲ್ಲ ಎಂದು ಹೇಳಿದ್ದಾನೆ. ಕೊನೆಗೆ ರಶ್ಮಿ ಸಂಬಂಧಿಕರ ಒತ್ತಾಯದ ಮೇರೆಗೆ ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಪತ್ನಿ ಕಾಣೆಯಾಗಿದ್ದಾಳೆ ಎಂದು ದೂರು ಕೊಟ್ಟಿದ್ದಾನೆ. ಆದರೆ ರಶ್ಮಿ ಪಾಲಕರಿಗೆ ಮೋಹನ್ ಮೇಲೆ ಅನುಮಾನವಿದ್ದ ಕಾರಣ ಅವನ ಮೇಲೆ ದೂರು ದಾಖಲು ಮಾಡಿದ್ದಾರೆ.
ಪೊಲೀಸರು ತನಿಖೆ ನಡೆಸಿದ ವೇಳೆ ಮೋಹನ್ ಕೃತ್ಯ ಬಯಲಾಗಿದೆ. ಮೋಹನ್ ಪತ್ನಿಯ ಶವವನ್ನು ಎಲ್ಲಿ ಹೂತಿಟ್ಟಿದ್ದ ಎಂಬುದನ್ನು ಖಚಿತ ಪಡಿಸಿಕೊಂಡ ಪೊಲೀಸರು ಇಂದು ಮೃತ ದೇಹ ಹೊರ ತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಸ್ಥಳಕ್ಕೆ ಅಜ್ಜಂಪುರ ತಾಹಶೀಲ್ದಾರ್ ಸೇರಿದಂತೆ ಆರೋಗ್ಯ ಇಲಾಖೆ ಅಧಿಕಾರಿಗಳು ಕೂಡ ಆಗಮಿಸಿದ್ದಾರೆ.
ಮಗಳನ್ನು ಇಷ್ಟು ಬೇಗ ಮದುವೆ ಮಾಡಿಕೊಟ್ಟು ಸ್ಮಾಶಾನಕ್ಕೆ ಕಳುಹಿಸಿದೆವು ಎಂದು ರಶ್ಮಿ ಕುಟುಂಬಸ್ಥರು ಆಕ್ರಂದಿಸಿದ್ದಾರೆ. ಹೊಟ್ಟೆ ಬಟ್ಟೆ ಕಟ್ಟಿ ಸಾಕಿ ಸಲಹಿದ್ದ ಮುದ್ದಾದ ಮಗಳು ಕಟುಕನ ಕೈಯಲ್ಲಿ ಬಲಿಯಾಗಿದ್ದು, ಮೋಹನ್ಗೆ ಕಠಿಣ ಶಿಕ್ಷೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist