ಸೋಮವಾರ, ಏಪ್ರಿಲ್ 29, 2024
ಮೇ 1ರಂದು ನೇಹಾ ಮನೆಗೆ ಅಮಿತ್ ಶಾ ಭೇಟಿ ; ಮುರುಗೇಶ್ ನಿರಾಣಿ.!-ಲೈಂಗಿಕ ಹಗರಣ ಪ್ರಕರಣ; ಶಾಸಕ ಪ್ರಜ್ವಲ್ ರೇವಣ್ಣ ವಿರುದ್ಧ ಎಸ್‌ಐಟಿ ತನಿಖೆ ಆರಂಭ-ಪುತ್ತೂರು: ತಾಳಿ ಕಟ್ಟುವ ವೇಳೆ ಮದುವೆ ನಿರಾಕರಿಸಿದ ವಧು.!-ಸ್ವಾಭಿಮಾನಿ ರಾಜಕಾರಣಿ, ಬಿಜೆಪಿ ಸಂಸದ ವಿ. ಶ್ರೀನಿವಾಸ್‌ ಪ್ರಸಾದ್‌ ಇನ್ನಿಲ್ಲ-ಅಶ್ಲೀಲ ವಿಡಿಯೋ ಹಂಚಿಕೆ ಪ್ರಕರಣ; ಪ್ರಜ್ವಲ್ ರೇವಣ್ಣ ಜೊತೆಗೆ ಹೆಚ್​​ಡಿ ರೇವಣ್ಣ ವಿರುದ್ಧವೂ ಎಫ್ಐಆರ್‌ ದಾಖಲು..!-ಮಂಗಳೂರು ಲೋಕಸಭೆ 2024: ಎಲ್ಲರ ಚಿತ್ತ ಬೆಳ್ತಂಗಡಿ-ಮೂಡಬಿದ್ರಿ ಬಿಲ್ಲವ ಮತಗಳ ಕಡೆಗೆ . ಚುನಾವಣಾ ದಿಕ್ಕನ್ನು ನಿರ್ಧರಿಸಲಿದೆ ಬೆಳ್ತಂಗಡಿ -ಮೂಡಬಿದ್ರಿ !.-ಎಸ್.ಐ.ಟಿ ತನಿಖೆ ನಡೆಸುವಂತೆ ಮಹಿಳಾ ಆಯೋಗದಿಂದ ಸರ್ಕಾರಕ್ಕೆ ಪತ್ರ; ಜರ್ಮನಿಗೆ ಹಾರಿದ ಪ್ರಜ್ವಲ್‌ ರೇವಣ್ಣ!-ಮದುವೆ ಆಮಂತ್ರಣದಲ್ಲಿ ಚುನಾವಣಾ ಪ್ರಚಾರ : ನೀತಿ ಸಂಹಿತೆಯಡಿ ಪ್ರಕರಣ ದಾಖಲು-ನೋಟಾ, ಅತಿ ಹೆಚ್ಚು ಅಲ್ಪಸಂಖ್ಯಾತರ ಮತದಾನ, ಮೂಡಬಿದ್ರೆ- ಬೆಳ್ತಂಗಡಿಯಲ್ಲಿ ಬಿಲ್ಲವರ ಅತಿ ಹೆಚ್ಚು ಮತದ ಬಗ್ಗೆ ಕಾಂಗ್ರೆಸ್ ನಿರೀಕ್ಷೆ.ಆ ಮೂಲಕ ಗೆಲುವಿನ ಭರವಸೆ!-ಬಿಜೆಪಿಯ ಬಣ ರಾಜಕೀಯ, ನೋಟಾ, ಸತ್ಯಜಿತ್ , ಗ್ಯಾರೆಂಟಿ, ಬಿಲ್ಲವ ಟ್ರಂಪ್ ಕಾರ್ಡ್ , ಅಲ್ಪಸಂಖ್ಯಾತರ ಬೂತುಗಳ ಹೆಚ್ಚಿನ ಮತದಾನ ಸಹಾಯ ಪಡೆದು ಮಂಗಳೂರು ಲೋಕಸಭೆಯಲ್ಲಿ ಪದ್ಮರಾಜ್ ವಿಜಯ ಪತಾಕೆ ಹಾರಿಸಬಹುದೇ?
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ತಮಿಳುನಾಡಿನಲ್ಲಿ ಅಧ್ಯಾಪಕರಿಗೂ ಡ್ರೆಸ್ ಕೋಡ್!

Twitter
Facebook
LinkedIn
WhatsApp
ತಮಿಳುನಾಡಿನಲ್ಲಿ ಅಧ್ಯಾಪಕರಿಗೂ ಡ್ರೆಸ್ ಕೋಡ್!

ಶಾಲೆಗಳು ಹಾಗೂ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸಮವಸ್ತ್ರ ಇರೋದು ಸಾಮಾನ್ಯ. ಅದೇ ರೀತಿ ಶಿಕ್ಷಕರಿಗೂ ಡ್ರೆಸ್ ಕೋಡ್ (Dress Code) ಇದ್ದರೆ ಹೇಗೆ..? ಇಂಥದೊಂದು ಆಲೋಚನೆ ಬಂದಿದ್ದೇ ತಡ ತಮಿಳುನಾಡು ಸರ್ಕಾರ (Tamil Nadu Government) ಹೊಸ ನಿಯಮವೊಂದನ್ನು ಜಾರಿ ಮಾಡಿದೆ. ಭೋದಕ ಸಿಬ್ಬಂದಿಗೂ ಡ್ರೆಸ್ ಕೋಡ್ ಜಾರಿಗೆ ಮುಂದಾಗಿದೆ. ತಮಿಳುನಾಡಿನ ಕಾಲೇಜುಗಳಲ್ಲಿ  ಅಧ್ಯಾಪಕರು (Lecturers) ತಮ್ಮ ದೇಹ ಕಾಣದಂತೆ  ‘ಓವರ್ ಕೋಟ್’ (over coat) ಧರಿಸುವಂತೆ ಉನ್ನತ ಶಿಕ್ಷಣ ಇಲಾಖೆಯು ಆದೇಶಿಸಿದೆ. ತಮಿಳುನಾಡಿನ ಉನ್ನತ ಶಿಕ್ಷಣ ಇಲಾಖೆಯು ಕಾಲೇಜು ಶಿಕ್ಷಣ ನಿರ್ದೇಶನಾಲಯಕ್ಕೆ (ಡಿಸಿಇ) ಪತ್ರ ಬರೆದಿದ್ದು, ತಮಿಳುನಾಡಿನ ಎಲ್ಲಾ ಕಾಲೇಜುಗಳ ಪ್ರಾಧ್ಯಾಪಕರು ಓವರ್ ಕೋಟ್ ಧರಿಸುವಂತೆ ಕೇಳಿಕೊಂಡಿದ್ದಾರೆ. ಉನ್ನತ ಶಿಕ್ಷಣ ಇಲಾಖೆಯು, ಪತ್ರವನ್ನು ಕಾಲೇಜು ಶಿಕ್ಷಣ ನಿರ್ದೇಶನಾಲಯ, ತಾಂತ್ರಿಕ ಶಿಕ್ಷಣ ನಿರ್ದೇಶನಾಲಯ ಮತ್ತು ಎಲ್ಲಾ ಉನ್ನತ ಶಿಕ್ಷಣ ಸಂಸ್ಥೆಗಳ ರಿಜಿಸ್ಟ್ರಾರ್‌ಗಳಿಗೆ ಕಳುಹಿಸಿದೆ. ವಿದ್ಯಾರ್ಥಿಗಳಿಂದ ತಮ್ಮನ್ನು ಪ್ರತ್ಯೇಕಗೊಳಿಸಲು ಡ್ರೆಸ್ ಕೋಡ್ ಅನುಸರಿಸುವಂತೆ ಸಲಹೆ ನೀಡಿದೆ.  ಈಗಾಗಲೇ ತಮಿಳುನಾಡಿನ ಅನೇಕ ಸ್ವಾಯತ್ತ ಕಾಲೇಜುಗಳಲ್ಲಿ ಮಹಿಳಾ ಸಿಬ್ಬಂದಿಗೆ ವಸ್ತ್ರ ಸಂಹಿತೆಯನ್ನು ಜಾರಿಗೊಳಿಸಲಾಗಿದೆ. ಓವರ್ ಕೋಟ್ ಧರಿಸಿದಾಗ ಮಹಿಳಾ ಸಿಬ್ಬಂದಿಗೆ ತರಗತಿಯಲ್ಲಿ ಬಹಳ ಆರಾಮದಾಯಕ ಎನ್ನಿಸುತ್ತದೆ. ಸಂಸ್ಥೆಯ ಒಳಗಡೆ ಮಹಿಳಾ ಸಿಬ್ಬಂದಿಯಲ್ಲಿಯೂ ಸಮಾನತೆಯ ಭಾವನೆ ಮೂಡುತ್ತದೆ ಎಂಬ ಮಾತುಗಳು ಕೇಳಿ ಬರುತ್ತಿವೆ. 

ತಮಿಳುನಾಡು ಸರ್ಕಾರ ಬರೆದ ಪತ್ರದಲ್ಲಿ ‘ಸಭ್ಯ ವಸ್ತ್ರ ಸಂಹಿತೆ’ ಎಂಬ ಪದವನ್ನು ಮಾತ್ರ ಬಳಸಲಾಗಿದೆ. ಪ್ರತ್ಯೇಕ ಮಾರ್ಗಸೂಚಿಗಳಿಲ್ಲ. ಮಹಿಳಾ ಸಿಬ್ಬಂದಿ ಸೀರೆ ಧರಿಸಿ ತರಗತಿಗಳನ್ನು ತೆಗೆದುಕೊಳ್ಳುವಾಗ, ಅವರು ಕಿರಿಕಿರಿ ಅನುಭವಿಸಬಹುದು. ಕೆಲವು ವಿದ್ಯಾರ್ಥಿಗಳು ಅವರನ್ನು ಚುಡಾಯಿಸಬಹುದು. ಇದನ್ನು ತಪ್ಪಿಸಲು, ನಿಲುವಂಗಿ ಅಥವಾ ಓವರ್ ಕೋಟ್ ಗಳನ್ನು ಧರಿಸುವುದು ಒಳ್ಳೆಯದು ಎಂಬ ಅಭಿಪ್ರಾಯವು ಕೆಲವು ಅಧ್ಯಾಪಕರಿಂದ ವ್ಯಕ್ತವಾಗಿದೆ.

ಮೊದಲು ಶಿಕ್ಷಣ ಇಲಾಖೆ , ಬೋಧಕ ಸಿಬ್ಬಂದಿ ಡ್ರೆಸ್ ಕೋಡ್ ಗೆ ನೀತಿ ಸಂಹಿತೆಯನ್ನು ಬಿಡುಗಡೆ ಮಾಡಬೇಕು. ಟೈ ಧರಿಸದಿದ್ದಕ್ಕೆ ಎರಡು ವರ್ಷಗಳ ಹಿಂದೆ ರೂ. 500 ದಂಡ ಪಾವತಿಸಬೇಕಾಗುತ್ತಿತ್ತು. ಇಂತಹ ನೀತಿ ರೂಪಿಸುವಾಗ ಮೊದಲಿಗೆ ವಸ್ತ್ರ ಸಂಹಿತೆಯ ನಿಯಮಗಳನ್ನು ಇಲಾಖೆ ರೂಪಿಸಬೇಕು ಎಂಬ ಅಭಿಪ್ರಾಯವಾಗಿದೆ.  ಸರ್ಕಾರಿ ಕಾಲೇಜುಗಳಲ್ಲಿ ಆಯಾಯ ವಿಭಾಗಗಳ ನಿರ್ದೇಶಕರು ಈ ಡ್ರೆಸ್ ಕೋಡ್  ಬಗ್ಗೆ ನಿರ್ಧರಿಸಲಿದ್ದಾರೆ ಎನ್ನಲಾಗುತ್ತಿದೆ. 

ಇನ್ನು ಶಿಕ್ಷಣ ಇಲಾಖೆಯ ಈ ಸೂಚನೆಗೆ ಭಿನ್ನಾಭಿಪ್ರಾಯವೂ  ವ್ಯಕ್ತವಾಗುತ್ತಿದೆ. ವಯಸ್ಕರಿಗೆ ಡ್ರೆಸ್ ಕೋಡ್‌ನ ಕಲ್ಪನೆಯು ಅವರನ್ನು ಮಕ್ಕಳನ್ನಾಗಿಸುತ್ತದೆ. ಮಹಿಳಾ ಪ್ರೊಫೆಸರ್‌ಗಳು ತಮ್ಮ ಆಕೃತಿಗಳನ್ನು (‘ದೇಹದ ರೂಪ’) ಮುಚ್ಚಿಕೊಳ್ಳಲು ಓವರ್‌ಕೋಟ್ ಧರಿಸಲು ಹೇಳುವುದು ಅವಮಾನಕರವಾಗಿದೆ. ಕ್ಲಾಸ್‌ರೂಮಿನಲ್ಲಿ ಅವರ ಉಪಸ್ಥಿತಿಯು ಕೇವಲ ಒಂದು ರೂಪದಲ್ಲಿ ಅಥವಾ ಅಪಹಾಸ್ಯಕ್ಕೆ ಎಂಬಂತೆ  ಪರಿಗಣಿಸಲಾಗುತ್ತಿದೆ ಎಂಬ ಭಾವನೆ ಮೂಡಬಹುದು ಎನ್ನುತ್ತಿದ್ದಾರೆ ಶಿಕ್ಷಣ ತಜ್ಞರು. ಒಟ್ಟಾರೆಯಾಗಿ ತಮಿಳುನಾಡು‌ ಶಿಕ್ಷಣ ಇಲಾಖೆಯ ಶಿಕ್ಷಕರಿಗೆ ಡ್ರೆಸ್ ಕೋಡ್ ನಿಯಮಕ್ಕೆ ಪರ-ವಿರೋಧ ವ್ಯಕ್ತವಾಗುತ್ತಿದೆ. ಮಹಿಳಾ ಅಧ್ಯಾಪಕರು ಓವರ್‌ಕೋಟ್ ಧರಿಸುವುದು ಅವಮಾನಕರವೋ? ಅನಿವಾರ್ಯವೋ? ಆದೇಶ ಪಾಲನೆಯ ಒತ್ತಡವೋ?.. ಎಷ್ಟರ ಮಟ್ಟಿಗೆ ಇದು ಜಾರಿಗೆ ಬರುತ್ತೆ ಅನ್ನೋ ಕುತೂಹಲ ಮೂಡಿದೆ.

ತಮಿಳುನಾಡಿನ ಈ ಆದೇಶವು ಸಾರ್ವಜನಿಕವಾಗಿ ಚರ್ಚೆಗೆ ಒಳಗಾಗುತ್ತಿರುವುದು ಸುಳ್ಳಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಕೆಲವು ಖಾಸಗಿ ಮತ್ತು ಸ್ವಾಯತ್ತ ವಿದ್ಯಾ ಸಂಸ್ಥೆಗಳಲ್ಲಿ ಈಗಾಗಲೇ ಈ ಡ್ರೆಸ್ ಕೋಡ್ ಚಾಲ್ತಿಯಲ್ಲಿದೆ. ಆದರೆ, ಸರ್ಕಾರಿ ಶಾಲಾ ಕಾಲೇಜುಗಳಿಗೆ ಅದೇ ನಿಯಮವನ್ನು ಜಾರಿ ಮಾಡಲು ಹೊರಟಿರುವುದು ತುಸು ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ ಎಂದು ಹೇಳಬಹುದು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ