ಭೋಪಾಲ್: ದೇವಾಲಯದ (Temple) ಆವರಣದೊಳಗೆ ಶಿವಲಿಂಗದ ಎದುರೇ ಅಶ್ಲೀಲ ಕೃತ್ಯದಲ್ಲಿ (Obscenity) ತೊಡಗಿದ್ದ ವ್ಯಕ್ತಿಯೊಬ್ಬನ ವೀಡಿಯೋ ಹರಿದಾಡಿತ್ತು. ವ್ಯಕ್ತಿಯ ಕೃತ್ಯಕ್ಕೆ ಭಾರೀ ಆಕ್ರೋಶ ವ್ಯಕ್ತವಾಗಿದ್ದು, ಇದೀಗ ಆ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆ ಮಧ್ಯಪ್ರದೇಶದ (Madhya Pradesh) ಇಂದೋರ್ನ (Indore) ವಿಶ್ವೇಶ್ವರ ಮಹಾದೇವ ದೇವಾಲಯದಲ್ಲಿ ನಡೆದಿದೆ. ವಾಸಿಂ ಅಲಿಯಾಸ್ ಘಂಟಿ (30) ಎಂದು ಗುರುತಿಸಲಾದ ವ್ಯಕ್ತಿ ಶುಕ್ರವಾರ ದೇವಾಲಯದ ಗರ್ಭಗುಡಿಯಲ್ಲಿ ಶಿವಲಿಂಗದ ಮುಂದೆಯೇ ತನ್ನ ಖಾಸಗಿ ಅಂಗವನ್ನು ತೋರ್ಪಡಿಸಿ ಅಶ್ಲೀಲವಾಗಿ ವರ್ತಿಸಿದ್ದ.
ದೇವಾಲಯದ ಆವರಣದಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಆರೋಪಿಯ ಕೃತ್ಯ ದಾಖಲಾಗಿದೆ. ಆತ ದೇವಾಲಯದಲ್ಲಿ ಮಹಿಳೆಯರಿಗೆ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಲಾಗಿದೆ. ವೀಡಿಯೋವನ್ನಾಧರಿಸಿಕೊಂಡು ಪೊಲೀಸರು ನಗರದ ಟೈರ್ ರಿಪೇರಿ ಅಂಗಡಿ ನಡೆಸುತ್ತಿದ್ದ ಆರೋಪಿ ವಾಸಿಂನನ್ನು ರಾಷ್ಟ್ರೀಯ ಭದ್ರತಾ ಕಾಯ್ದೆ (NSA) ಅಡಿಯಲ್ಲಿ ಬಂಧಿಸಿದ್ದಾರೆ.
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist