ಬೀಜಿಂಗ್: ವಿಶ್ವಕ್ಕೆ ಕೊರೊನಾ ಹಬ್ಬಿಸಿದ ಚೀನಾದಲ್ಲಿ(China) ಈಗ ಸೋಂಕು ಮತ್ತೆ ಅಬ್ಬರಿಸುತ್ತಿದೆ. ಚೀನಾ ದೇಶ ಮತ್ತೊಮ್ಮೆ ಕೊರೊನಾ(Corona) ಮಾರಿಗೆ ತತ್ತರಿಸಿದ್ದು, ಪ್ರತಿನಿತ್ಯ ಸಾವಿರಾರು ಸಂಖ್ಯೆಯಲ್ಲಿ ಕೋವಿಡ್ ಕೇಸ್ ದಾಖಲಾಗುತ್ತಿದೆ.
ಆಸ್ಪತ್ರೆಗಳೆಲ್ಲಾ(Hospital) ತುಂಬಿ ತುಳುಕುತ್ತಿದೆ. ಲಕ್ಷಾಂತರ ಮಂದಿ ನಲುಗಿ ಹೋಗಿದ್ದಾರೆ. ಬೀಜಿಂಗ್ನ ಸ್ಮಶಾನಗಳೆಲ್ಲ ಕೋವಿಡ್ ಶವಗಳಿಂದ ತುಂಬಿಹೋಗಿವೆ. ಪ್ರತಿದಿನ ಏನಿಲ್ಲ ಅಂದರೂ ಒಂದೊಂದು ಸ್ಮಶಾನಕ್ಕೆ ಕನಿಷ್ಠ 200 ಶವ ಬರುತ್ತಿವೆ ಎಂದು ವರದಿಯಾಗಿದೆ.
ಜನ ರಸ್ತೆ ರಸ್ತೆಯಲ್ಲಿ ಪ್ರಾಣಕಳೆದುಕೊಳ್ಳುವಂತಾಗಿದೆ. ಅಷ್ಟೇ ಅಲ್ಲದೇ ಮುಂದಿನ ಮೂರು ತಿಂಗಳಲ್ಲಿ ಚೀನಾದ ಶೇ.60ರಷ್ಟು ಜನರನ್ನು ಕೋವಿಡ್ ಹೆಮ್ಮಾರಿ ಆವರಿಸಲಿದೆ ಎಂದು ಪರಿಣಿತರು ಅಂದಾಜಿಸಿದ್ದಾರೆ.
ದೇಶದಲ್ಲಿ ಸದ್ಯ ಕೋವಿಡ್ನಿಂದ(Covid) ಸಂಭವಿಸುತ್ತಿರುವ ಸಾವುಗಳನ್ನು ನಿಯಂತ್ರಿಸಲು ಸಾಧ್ಯವಾಗದೇ ಚೀನಾ ನಲುಗಿ ಹೋಗಿದೆ. ಸ್ಮಶಾನಗಳಲ್ಲಿ ಶವಗಳ ಅಂತ್ಯಸಂಸ್ಕಾರಕ್ಕೆ ಹಲವು ದಿನ ಕ್ಯೂ ನಿಲ್ಲಬೇಕಾದ ಪರಿಸ್ಥಿತಿಯಿದೆ.
ವಿಶ್ವಕ್ಕೆ ಬುದ್ಧಿ ಹೇಳುವ ಚೀನಾ ಇಲ್ಲಿಯವರೆಗೂ ಕೊರೊನಾ ಸಾವು ನೋವಿನ ಅಧಿಕೃತ ಲೆಕ್ಕ ನೀಡಿಲ್ಲ, ಈಗಲೂ ನೀಡುತ್ತಿಲ್ಲ. ಆದರೆ ಆದರೆ ಕೆಲವು ಸ್ಮಶಾನಗಳ ನಿರ್ವಾಹಕರು, ನಾವು ಕೆಲ ದಿನಗಳಿಂದ 24 ಗಂಟೆ ಶವಸಂಸ್ಕಾರ ಮಾಡುತ್ತಿದ್ದೇವೆ. ಆದರೂ ಶವಗಳ ಸಾಲು ಕರಗುತ್ತಿಲ್ಲ. ನಮ್ಮಿಂದ ಪರಿಸ್ಥಿತಿ ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಈ ಮೊದಲು ಪ್ರತಿ ದಿನ 30-40 ಶವ ಬರುತ್ತಿದ್ದರೆ ಈಗ ಸರಾಸರಿ 200ಕ್ಕೂ ಹೆಚ್ಚು ಶವಗಳು ಬರುತ್ತಿದೆ ಎಂದು ಅಮೆರಿಕದ ‘ವಾಲ್ಸ್ಟ್ರೀಟ್ ಜರ್ನಲ್’ ವರದಿ ಮಾಡಿದೆ.
ಚೀನಾದಲ್ಲಿಈಗ ಕೊರೊನಾ ಅಬ್ಬರ ಯಾಕೆ?
ಇಲ್ಲಿಯವರೆಗೂ ಶೂನ್ಯ ಕೋವಿಡ್ ನೀತಿಯನ್ನು ಚೀನಾ ಅಳವಡಿಸಿತ್ತು. ಅಂದರೆ ಒಂದು ಕೊರೊನಾ ಪ್ರಕರಣ ಪತ್ತೆಯಾದರೂ ಆ ಮನೆಯನ್ನು ಸೀಲ್ಡೌನ್ ಮಾಡಲಾಗುತ್ತಿತ್ತು. ಕೊರೊನಾ ಪ್ರಕರಣಗಳು ಜಾಸ್ತಿಯಾದ ಪ್ರದೇಶವನ್ನೇ ಲಾಕ್ಡೌನ್(Lockdown) ಮಾಡಲಾಗುತ್ತಿತ್ತು.
ಲಾಕ್ಡೌನ್ ವೇಳೆ ಜನರಿಗೆ ಮೂಲಭೂತ ಸೌಕರ್ಯದ ಕೊರತೆಯಾಗಿತ್ತು. ಕನಿಷ್ಠ ಪಕ್ಷ ಊಟದ ವ್ಯವಸ್ಥೆ ಮಾಡದೇ ಕೆಟ್ಟದಾಗಿ ನಿರ್ವಹಣೆ ಮಾಡಿತ್ತು. ಈ ಅವ್ಯವಸ್ಥೆ ವಿರುದ್ಧ ದೊಡ್ಡ ಮಟ್ಟದದಲ್ಲಿ ಚೀನಾದ ಜನ ಪ್ರತಿಭಟನೆ(Protest) ನಡೆಸಿದ್ದರು. ಜನರ ಪ್ರತಿಭಟನೆಯನ್ನು ನಿಯಂತ್ರಿಸಲು ಸಾಧ್ಯವಾಗದೇ ಚೀನಾ ಸರ್ಕಾರ ನಿರ್ಬಂಧವನ್ನು ಸಡಿಲಗೊಳಿಸಿತ್ತು. ನಿರ್ಬಂಧ ಸಡಿಲವಾದ ಬೆನ್ನಲ್ಲೇ ಸೋಂಕು ಹೆಚ್ಚಳವಾಗಿದೆ.
ಭಾರತ ಸೇರಿದಂತೆ ವಿಶ್ವದ ಹಲವು ದೇಶಗಳಲ್ಲಿ ಕೊರೊನಾ ಎರಡನೇ ಅಲೆ ಬಂದು ಹೋಗಿದೆ. ಅಷ್ಟೇ ಅಲ್ಲದೇ ಶೇ.90ಕ್ಕೂ ಹೆಚ್ಚು ಮಂದಿ ಲಸಿಕೆಯನ್ನು ಪಡೆದಿದ್ದಾರೆ. ಲಾಕ್ಡೌನ್ ತೆರವುಗೊಂಡಿದ್ದು ಮೊದಲಿನಂತೆ ಜನರು ಓಡಾಟ ನಡೆಸುತ್ತಿದ್ದಾರೆ. “ಕೊರೊನಾವನ್ನು ಸಂಪೂರ್ಣ ತೊಲಗಿಸಲು ಸಾಧ್ಯವಿಲ್ಲ. ವೈರಸ್ ಜೊತೆ ಜೀವನ ನಡೆಸಬೇಕು” ಎಂದು ಸಾಂಕ್ರಾಮಿಕ ತಜ್ಞರು, ಸರ್ಕಾರಗಳು ಹೇಳಿದ ಹಿನ್ನೆಲೆಯಲ್ಲಿ ಈಗ ಮೊದಲು ಇದ್ದ ಭಯ ಹೋಗಿದೆ. ಅದರೆ ಚೀನಾ ಕೊರೊನಾ ನಿಯಂತ್ರಿಸಲು ಬಿಗಿಯಾದ ನೀತಿಯನ್ನು ಅನುಸರಿಸಿತ್ತು. ಅಷ್ಟೇ ಅಲ್ಲದೇ ಲಸಿಕೆಯಿಂದ ಕೊರೊನಾ ತಡೆಯುವಲ್ಲಿ ಸಂಪೂರ್ಣ ವಿಫಲವಾಗಿದ್ದರಿಂದ ಈಗ ದಿಢೀರ್ ಸೋಂಕು ಹೆಚ್ಚಳವಾಗುತ್ತಿದೆ.
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist