ಭಾನುವಾರ, ಮೇ 19, 2024
ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!-ಎವರೆಸ್ಟ್ ಚಿಕನ್ ಮಸಾಲಾ ಬಳಸದಂತೆ ಆಹಾರ ಸುರಕ್ಷತಾ ಅಧಿಕಾರಿ ಸೂಚನೆ-Matthew Hayden: ಮ್ಯಾಥ್ಯೂ ಹೇಡನ್ ಅವರ ಮಗಳು ಎಸ್‌ಆರ್‌ಹೆಚ್ ಅಭಿಮಾನಿಗಳೊಂದಿಗೆ ಹೈದರಾಬಾದಿ ಬಿರಿಯಾನಿ ತಿನ್ನುವ ವಿಡಿಯೋ ವೈರಲ್!-ಅರವಿಂದ್ ಕೇಜ್ರಿವಾಲ್‌ ಆಪ್ತ ಸಹಾಯಕ ಬಿಭವ್‌ ಕುಮಾರ್‌ ಅರೆಸ್ಟ್‌-ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಹೋಳಿ ಆಚರಣೆ ಬಳಿಕ ಬಾತ್ ರೂಂನಲ್ಲಿ ಉಸಿರುಗಟ್ಟಿ ದಂಪತಿ ಸಾವು- ಗೀಸರ್ ಗ್ಯಾಸ್ ಸೋರಿಕೆ ಶಂಕೆ

Twitter
Facebook
LinkedIn
WhatsApp
ಹೋಳಿ ಆಚರಣೆ ಬಳಿಕ ಬಾತ್ ರೂಂನಲ್ಲಿ ಉಸಿರುಗಟ್ಟಿ ದಂಪತಿ ಸಾವು- ಗೀಸರ್ ಗ್ಯಾಸ್ ಸೋರಿಕೆ ಶಂಕೆ

ಮುಂಬೈ: ಹೋಳಿ ಆಟದಲ್ಲಿ ಸಂಭ್ರಮಿಸಿ ಬಣ್ಣ ತೊಳೆಯಲೆಂದು ಬಾತ್‌ರೂಂಗೆ ಹೋಗಿದ್ದ ದಂಪತಿ ಅಲ್ಲೇ ಮೃತಪಟ್ಟ ಘಟನೆ ಮುಂಬೈಯಲ್ಲಿ ನಡೆದಿದೆ. ಗೀಸರ್‌ ಗ್ಯಾಸ್ ಸೋರಿಕೆಯಾಗಿ ಉಸಿರುಗಟ್ಟಿ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಘಟ್ಕೋಪರ್‌ನಲ್ಲಿರುವ ಫ್ಲ್ಯಾಟ್‌ನಲ್ಲಿ ವಾಸಿಸುತ್ತಿದ್ದ ದೀಪಕ್‌ ಶಾ (42) ಹಾಗೂ ರೀನಾ ಶಾ (39) ಮೃತಪಟ್ಟವರು. 

ಇಬ್ಬರೂ ಫ್ಲ್ಯಾಟ್‌ನಲ್ಲಿರುವ ತಮ್ಮ ಸ್ನೇಹಿತರೊಂದಿಗೆ ಹೋಳಿ ಆಡಿ ಸಂಭ್ರಮಿಸಿದ್ದಾರೆ. ಬಳಿಕ ಮೈತುಂಬಾ ಮೆತ್ತಿದ್ದ ಬಣ್ಣವನ್ನು ತೊಳೆಯಲೆಂದು ಪತಿ, ಪತ್ನಿ ಇಬ್ಬರೂ ಮನೆಯ ಬಾತ್‌ರೂಂಗೆ ಹೋಗಿದ್ದಾರೆ.

ಇತ್ತ ಸಂಬಂಧಿಕರಿಂದ ದಂಪತಿಗೆ ಹಲವು ಬಾರಿ ಕರೆ ಬಂದರೂ ಸ್ವೀಕರಿಸದ ಕಾರಣ ಅಪಾರ್ಟ್‌ಮೆಂಟ್‌ಗೇ ಬಂದು ಹುಡುಕಾಡಿದಾಗ ಎಲ್ಲೂ ಕಾಣಿಸಲಿಲ್ಲ. ಬಳಿಕ ಫ್ಲ್ಯಾಟ್‌ನ ಪರ್ಯಾಯ ಕೀ ಬಳಸಿ ಬಾತ್‌ರೂಂನ ಬಾಗಿಲು ತೆರೆದಿದ್ದಾರೆ. ಈ ವೇಳೆ ದಂಪತಿ ಪ್ರಜ್ಞಾಹೀನರಾಗಿ ಬಿದ್ದಿರುವುದನ್ನು ನೋಡಿ ಕೂಡಲೇ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆ ವೇಳೆಗಾಗಲೇ ಅವರು ಮೃತಪಟ್ಟಿರುವುದನ್ನು ವೈದ್ಯರು ಘೋಷಿಸಿದರು.

ಇನ್ನು ಬಾತ್‌ರೂಂನಲ್ಲಿ ಅಳವಡಿಸಿರುವ ಗೀಸರ್‌ನಿಂದ ಗ್ಯಾಸ್ ಸೋರಿಕೆಯಾಗಿ ದಂಪತಿ ಸಾವನ್ನೊಪ್ಪಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದ್ದು, ಪರೀಕ್ಷಾ ವರದಿ ಬಂದ ಬಳಿಕವಷ್ಟೇ ನೈಜ ಕಾರಣ ತಿಳಿಯಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ