ಮಂಗಳವಾರ, ಫೆಬ್ರವರಿ 4, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಹುಡುಗಿಯರು ಕೆಟ್ಟ ಉಡುಪಿನಲ್ಲಿ ಶೂರ್ಪನಖಿಯಂತೆ ಕಾಣ್ತಾರೆ: ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ನಾಯಕ

Twitter
Facebook
LinkedIn
WhatsApp
gangrape 2 1649494371 1

ಬಿಜೆಪಿಯ (BJP) ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗಿಯ (Kailash Vijayvargiya) ಅವರು ಕೆಟ್ಟದಾಗಿ ಬಟ್ಟೆ ಧರಿಸಿರುವ ಹುಡುಗಿಯರು ಹಿಂದೂ ಮಹಾಕಾವ್ಯ ರಾಮಾಯಣದ ರಾಕ್ಷಸಿ ಶೂರ್ಪನಖಿಯನ್ನು ಹೋಲುತ್ತಾರೆ ಎಂದು ಹೇಳುವ ಮೂಲಕ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ. ಹನುಮಾನ್ ಮತ್ತು ಮಹಾವೀರ ಜಯಂತಿಯಂದು ಮಧ್ಯಪ್ರದೇಶದ (Madhya Pradesh) ಇಂದೋರ್‌ನಲ್ಲಿ ಆಯೋಜಿಸಲಾದ ಧಾರ್ಮಿಕ ಸಮಾರಂಭದಲ್ಲಿ ಸಚಿವರು ಈ ರೀತಿ ಮಾತನಾಡಿದ್ದು, ಈ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.  ಸಾಮಾನ್ಯವಾಗಿ ಮಾದಕ ದ್ರವ್ಯದ ಪ್ರಭಾವದಿಂದ ಹೆಣ್ಮಕ್ಕಳು ರಾತ್ರಿ ತಮ್ಮ ಮನೆಯಿಂದ ಹೊರಹೋಗುತ್ತಾರೆ. ಅವರನ್ನು ನೋಡಿದರ ಕೆನ್ನೆಗೆ ಬಾರಿಸಿ ಬಿಡಬೇಕು ಎಂದು ಅನಿಸುತ್ತದೆ. ನಾನು ರಾತ್ರಿ ಮನೆಗೆ ಹೊರಟಾಗ, ನಾನು ವಿದ್ಯಾವಂತ ಯುವಕರು ಮತ್ತು ಮಕ್ಕಳನ್ನು ಮಾದಕ ದ್ರವ್ಯಗಳ ಅಮಲಿನಲ್ಲಿರುವುದನ್ನು ನೋಡುತ್ತೇನೆ. ಅವರನ್ನು ನೋಡಿದಾಗಲೆಲ್ಲಾ ಕಾರಿನಿಂದ ಇಳಿದು ಹೋಗಿ ಅವರ ಕೆನ್ನೆಗೆ ರಪ ರಪ ಅಂತ ಏಳೆಂಟು ಬಾರಿ ಬಾರಿಸಬೇಕು ಎಂದು ಅನಿಸುತ್ತದೆ ಎಂದು ಬಿಜೆಪಿ ನಾಯಕ ಹೇಳಿದ್ದಾರೆ.

ನಾನು ರಾತ್ರಿಯಲ್ಲಿ ಹೊರಗೆ ಹೋದಾಗ ಮತ್ತು ಮಾದಕ ದ್ರವ್ಯದ ಅಮಲಿನಲ್ಲಿ ಯುವತಿಯನ್ನು ನೋಡಿದಾಗ, ದೇವರಾಣೆ ಅವರ ಕೆನ್ನೆಗೆ ಬಾರಿಸಬೇಕು ಎಂದು ಅನಿಸುತ್ತದೆ. ಹುಡುಗಿಯರು ಎಂಥೆಂಥಾ ಕೊಳಕು ಬಟ್ಟೆಗಳನ್ನು ಧರಿಸುತ್ತಾರೆ. ನಾವು ಮಹಿಳೆಯರನ್ನು ದೇವತೆ ಎಂದು ಭಾವಿಸುತ್ತೇವೆ. ಅವರಲ್ಲಿ ಅಂಥದ್ದೇನೂ ಇಲ್ಲವೇ ಇಲ್ಲ ಅವರು ಶೂರ್ಪನಖರಂತೆ ಕಾಣುತ್ತಾರೆ. ದೇವರು ನಿಮಗೆ ಒಳ್ಳೆಯ ದೇಹವನ್ನು ನೀಡಿದ್ದಾನೆ, ಒಳ್ಳೆಯ ಬಟ್ಟೆಗಳನ್ನು ಧರಿಸಿ, ದಯವಿಟ್ಟು ನಿಮ್ಮ ಮಕ್ಕಳಿಗೆ ಚೆನ್ನಾಗಿ ಕಲಿಸಿ.ನಾನು ತುಂಬಾ ಚಿಂತಿತನಾಗಿದ್ದೇನೆ ಎಂದು ಸಚಿವರು ಹೇಳಿದ್ದಾರೆ.

ವಿಜಯವರ್ಗಿಯರ ಹೇಳಿಕೆ ವಿರುದ್ಧ ಪ್ರತಿಪಕ್ಷಗಳು ಮತ್ತು ಸಾಮಾಜಿಕ ಮಾಧ್ಯಮ ಬಳಕೆದಾರರು ಸಿಡಿದೆದ್ದಿದ್ದಾರೆ. ಕಾಂಗ್ರೆಸ್ ನಾಯಕಿ ಶಮಾ ಮೊಹಮ್ಮದ್ ಕೇಂದ್ರ ಸಚಿವೆ ಸ್ಮೃತಿ ಇರಾನಿ ಈ ಬಗ್ಗೆ ಮೌನವಹಿಸಿರುವುದೇಕೆ ಎಂದು ಪ್ರಶ್ನಿಸಿದ್ದಾರೆ ಸ್ಮೃತಿ ಇರಾನಿ ಈಗ ಎಲ್ಲಿದ್ದಾರೆ? ಈ ಅಸಹ್ಯಕರ ಹೇಳಿಕೆಯನ್ನು ಅವರು ಕ್ಷಮಿಸುತ್ತಾರೆಯೇ? ಅಥವಾ ರಾಹುಲ್‌ಗಾಂಧಿಯ ಮೇಲೆ ದಾಳಿ ಮಾಡಲು ಮಾತ್ರ ಸ್ಮೃತಿ ದನಿಯೆತ್ತುತ್ತಾರೆಯೇ ಎಂದು ಶಮಾ ಕೇಳಿದ್ದಾರೆ.

ಬಿಜೆಪಿ ನಾಯಕರು ಮಹಿಳೆಯರನ್ನು ಪದೇ ಪದೇ ಅವಮಾನಿಸುತ್ತಾರೆ. ಇದು ಅವರ ಆಲೋಚನೆ ಮತ್ತು ಅವರ ಮನೋಭಾವವನ್ನು ತೋರಿಸುತ್ತದೆ. ಬಿಜೆಪಿ ಮುಖಂಡ ಕೈಲಾಶ್ ವಿಜಯವರ್ಗಿಯ ಜಿ ಮಹಿಳೆಯರನ್ನು ಶೂರ್ಪನಖ ಎಂದು ಕರೆಯುವುದು ಮತ್ತು ಅವರ ಉಡುಗೆ ಬಗ್ಗೆ ಆಕ್ಷೇಪಾರ್ಹ ಕಾಮೆಂಟ್ ಮಾಡುವುದು ಸ್ವತಂತ್ರ ಭಾರತದಲ್ಲಿ ಸರಿಯೇ?. ಬಿಜೆಪಿ ಕ್ಷಮೆಯಾಚಿಸಿ! ಎಂದು ಕಾಂಗ್ರೆಸ್ ವಕ್ತಾರೆ ಸಂಗೀತ ಶರ್ಮಾ ಹೇಳಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist