ಹಿಂದಿನಿಂದ ಬೈಕ್‌ಗೆ ಗುದ್ದಿದ ಕಾರು: ರೈತ ಸಾವು, ಕೊಲೆ ಮಾಡಿರೋ ಶಂಕೆ
Twitter
Facebook
LinkedIn
WhatsApp

ಆನೇಕಲ್: (ಜ.3) : ರೈತನೋರ್ವ ತನ್ನ ಬೈಕಿನಲ್ಲಿ ಬರುತ್ತಿದ್ದಾಗ ಹಿಂದಿನಿಂದ ವೇಗವಾಗಿ ಬಂದ ಕಾರೊಂದು ಬೈಕ್‌ಗೆ ಗುದ್ದಿ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಭೀಕರ ಘಟನೆ ಆನೇಕಲ್ ಠಾಣಾ ವ್ಯಾಪ್ತಿಯ ಸುರಗಜಕ್ಕನಹಳ್ಳಿ ಬಳಿ ನಡೆದಿದೆ.
ಕುಂಬಾರನಹಳ್ಳಿ(Kumbaranahalli) ವಾಸಿ ನಂಜುಂಡರೆಡ್ಡಿ(Nanjundareddy) ಮೃತ ರೈತ. ಜಿಗಣಿ ರಸ್ತೆ(jigani road)ಯಿಂದ ಆನೇಕಲ್ ಕಡೆಗೆ ಬರುತ್ತಿದ್ದರು. ಬೈಕಿಗೆ ಡಿಕ್ಕಿ ಹೊಡೆದ ಕಾರು(Road accident) ನಿಲ್ಲಿಸದೇ ಅದೇ ವೇಗದಲ್ಲಿ ಮುಂದೆ ಸಾಗಿದ್ದು, ಕಾರಿನ ಪತ್ತೆಗೆ ಬಲೆ ಬೀಸಲಾಗಿದೆ ಎಂದು ವೃತ್ತ ನಿರೀಕ್ಷಕ ಚಂದ್ರಪ್ಪ ತಿಳಿಸಿದ್ದಾರೆ.
ಸ್ಥಳೀಯವಾಗಿ ಲಭ್ಯವಾದ ಸಿಸಿ ಕ್ಯಾಮೆರಾ ದೃಶ್ಯಾವಳಿಗಳನ್ನು ಗಮನಿಸಿದರೆ ಅಪಘಾತ ಎಂದು ಕಂಡು ಬಂದರೂ ಪ್ರಾಥಮಿಕ ತನಿಖೆಯಲ್ಲಿ ಕೊಲೆ ಇರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಶವವನ್ನು ಆನೇಕಲ್ ಸರ್ಕಾರಿ ಆಸ್ಪತ್ರೆಗೆ ತಂದಿದ್ದು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.