ಹನಿಮೂನ್ ವೇಳೆ ಪ್ರಿಯಕರನ ಜೊತೆ ಓಡಿ ಹೋದ ಹೆಂಡ್ತಿ!
ಸಿವಿಲ್ ಲೈನ್ ಪೊಲೀಸ್ ಠಾಣೆ ವ್ಯಾಪ್ತಿಯ ಅಲಿಗಢದ ಗುರುದ್ವಾರ ರಸ್ತೆಯ ನಿವಾಸಿ ಸತ್ಯಂ ಎಂಬವರು ಆಗ್ರಾ ಕ್ಯಾಂಟ್ ನಿವಾಸಿ ದೀಪಾಸಿ ಅವರನ್ನು ನವೆಂಬರ್ನಲ್ಲಿ ವಿವಾಹವಾಗಿದ್ದರು. ದಂಪತಿಗಳು (Couple) ಕೆಲ ವಾರಗಳ ಜೊತೆಯಾಗಿ ಖುಷಿಯಾಗಿಯೇ ಇದ್ದರು. ಮದುವೆಯಾದ ಹೊಸತರಲ್ಲಿ ನೆಂಟರಿಷ್ಟರ ಮನೆಗೆ ಜೊತೆಯಾಗಿಯೇ ಹೋಗಿ ಬಂದಿದ್ದರು. ಆ ನಂತರ ನವವಿವಾಹಿತ ದಂಪತಿಗಳು ಡಿಸೆಂಬರ್ ನಲ್ಲಿ ಹನಿಮೂನ್ಗೆ ಬುಕ್ ಮಾಡಿದ್ದರು.
ಸತ್ಯಂ ಡಿಸೆಂಬರ್ 8, 2022 ರಂದು ಮಧುಚಂದ್ರಕ್ಕಾಗಿ (Honeymoon) ಉತ್ತರಾಖಂಡಕ್ಕೆ ತಮ್ಮ ಹೆಂಡತಿ (Wife)ಯೊಂದಿಗೆ ತೆರಳಿದ್ದರು. ದಂಪತಿಗಳು ತಮ್ಮ ಹನಿಮೂನ್ಗಾಗಿ ಡೆಹ್ರಾಡೂನ್ಗೆ ತೆರಳಿದರು. ಇಲ್ಲಿಂದ ಮಸ್ಸೂರಿಗೆ ಹೋಗಿ ಹೃಷಿಕೇಶ ತಲುಪಿದರು. ನವವಿವಾಹಿತ ದಂಪತಿಗಳು ಡಿಸೆಂಬರ್ 9ರಂದು ಹೃಷಿಕೇಶಕ್ಕೆ ಹೋಗಿ ಬಸ್ ನಿಲ್ದಾಣದ ಬಳಿಯ ಖಾಸಗಿ ಹೋಟೆಲ್ನಲ್ಲಿ ರೂಮ್ ಬುಕ್ ಮಾಡಿದ್ದರು. ಈ ನಡುವೆ ಹೋಟೆಲ್ ನಲ್ಲಿ ಚಹಾ ಕುಡಿದ ಬಳಿಕ ಸತ್ಯಂ ಪ್ರಜ್ಞೆ ಕಳೆದುಕೊಂಡ ಎನ್ನಲಾಗಿದೆ. ಆಗ ದೀಪಾಸಿ ತನ್ನ ಸಾಮಾನು ಸರಂಜಾಮುಗಳನ್ನು ಪ್ಯಾಕ್ ಮಾಡಿ ಬ್ಯಾಗ್ ಮತ್ತು ಹಣದೊಂದಿಗೆ ಹೋಟೆಲ್ ನಿಂದ ಓಡಿ ಹೋಗಿದ್ದಾಳೆ. ಮಧ್ಯರಾತ್ರಿ ಸುಮಾರು 2 ಗಂಟೆ ಸುಮಾರಿಗೆ ಸತ್ಯಂಗೆ ಪ್ರಜ್ಞೆ ಮರಳಿದಾಗ ದೀಪಾಸಿ ರೂಮಿನಲ್ಲಿ ಇಲ್ಲದ್ದನ್ನು ತಿಳಿದು ಗಾಬರಿಯಾದರು. ಹೋಟೆಲ್ ಸಿಬ್ಬಂದಿಯ ಬಳಿ ಪತ್ನಿಯ ಬಗ್ಗೆ ವಿಚಾರಿಸಿದಾಗ, ಅವರು ಸಂಜೆ ಏಳು ಗಂಟೆ ಸುಮಾರಿಗೆ ದೀಪಾಸಿ ಹೋಲ್ನಿಂದ ಹೊರಗೆ ಹೋಗಿದ್ದಾಳೆ ಎಂಬುದನ್ನು ತಿಳಿಸಿದ್ದಾರೆ.
ತಕ್ಷಣವೇ, ಸತ್ಯ ಈ ವಿಷಯದ ಬಗ್ಗೆ ಪೊಲೀಸರಿಗೆ ದೂರು ನೀಡಿದರು. ತನಿಖೆಯ ನಂತರ, ದೀಪಾಸಿ ಬಸ್ಸಿನಲ್ಲಿ ತನ್ನ ಗೆಳೆಯನ ಜೊತೆ ದೆಹಲಿಗೆ ತೆರಳಿದ್ದಾಳೆ ಎಂದು ತಿಳಿದುಬಂದಿದೆ. ಸತ್ಯಂ ಈ ಘಟನೆಯ ಬಗ್ಗೆ ಅಲಿಗಢದಲ್ಲಿರುವ ತನ್ನ ಕುಟುಂಬಕ್ಕೆ (Family) ಮತ್ತು ಆಗ್ರಾದಲ್ಲಿರುವ ತನ್ನ ಅತ್ತೆ-ಮಾವಂದಿರಿಗೆ ಮಾಹಿತಿ ನೀಡಿದ್ದಾರೆ. ಈ ನಡುವೆ ಆಕೆಯ ಕುಟುಂಬವು ಗ್ಯಾಂಗ್ಸ್ಟರ್ ಅನ್ಶು ಯಾದವ್ ಎಂಬ ಮತ್ತೊಬ್ಬ ಯುವಕನ ಜೊತೆ ದಿಪಾಸಿಗೆ ಸಂಬಂಧ (Relationship) ಇದೆ. ಆಕೆಯನ್ನು ಮರೆತುಬಿಡುವಂತೆ ಸತ್ಯಂಗೆ ಹೇಳಿದ್ದಾರೆ ಎನ್ನಲಾಗಿದೆ.
ಬಳಿಕ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರು. ಈ ದೃಶ್ಯಾವಳಿಯಲ್ಲಿ, ಹುಡುಗಿ ಒಬ್ಬಳೇ ಎಲ್ಲೋ ಹೋಗುತ್ತಿರುವುದನ್ನು ಕಾಣಬಹುದು. ಆ ನಂತರ ಯುವತಿ ತನ್ನ ಸ್ನೃಹಿತನ ಜೊತೆ ದೆಹಲಿಗೆ ಹೋಗಿರುವುದು ತಿಳಿದುಬಂತು. ಬಾಲಕಿಯ ಕುಟುಂಬದ ಸದಸ್ಯರನ್ನು ವಿಚಾರಿಸಿದಾಗ ಅವರು ಯಾವುದೇ ಮಾಹಿತಿ ನೀಡಲು ಸಿದ್ಧವಾಗಲ್ಲಿಲ್ಲ. ಆದರೆ ಹುಡುಗಿಗೆ ಈಗಾಗಲೇ ಮದುವೆಯಾಗಿದೆ ಎಂದು ಆ ನಂತರ ತಿಳಿದುಬಂದಿದೆ. ಅದೇನೆ ಇರ್ಲಿ, ಇರುವಷ್ಟು ದಿನ ಚೆನ್ನಾಗಿದ್ದು ಯುವತಿ ಮದುವೆಯ ಬಳಿಕ ಓಡಿ ಹೋಗಿ ಯುವಕನ ಜೀವನವನ್ನೂ ಹಾಳು ಮಾಡಿದ್ಯಾಕೋ ಅರ್ಥವಾಗುತ್ತಿಲ್ಲ.