ಮಂಗಳವಾರ, ಫೆಬ್ರವರಿ 4, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಸ್ಟಾರ್ ಕಿಡ್ ಎಂದು ಟೀಕಿಸಿದವರಿಗೆ ಖಡಕ್ ಆಗಿ ಉತ್ತರಿಸಿದ ನಟಿ ಆಲಿಯಾ ಭಟ್

Twitter
Facebook
LinkedIn
WhatsApp
shutterstock 1697156779 1 2

ನಟಿ ಆಲಿಯಾ ಭಟ್ (Alia Bhatt) ಅವರು ಬಾಲಿವುಡ್​ನಲ್ಲಿ ಗುರುತಿಸಿಕೊಂಡಿದ್ದಾರೆ. ಎಸ್​ಎಸ್ ರಾಜಮೌಳಿ ನಿರ್ದೇಶನದ ‘ಆರ್​ಆರ್​ಆರ್​’ ಮೂಲಕ ಅವರು ದಕ್ಷಿಣ ಭಾರತಕ್ಕೂ ಕಾಲಿಟ್ಟಿದ್ದಾರೆ. ಆಲಿಯಾ ಸ್ಟಾರ್​ ಕಿಡ್. ಈ ಕಾರಣಕ್ಕೆ ಅವರಿಗೆ ಸುಲಭವಾಗಿ ಚಿತ್ರರಂಗದ ಬಾಗಿಲು ತೆರೆಯಿತು. ಅವರ ಮೊದಲ ಸಿನಿಮಾ ‘ಸ್ಟುಡೆಂಟ್ ಆಫ್ ಇಯರ್’ಗೆ ಖ್ಯಾತ ನಿರ್ಮಾಣ ಸಂಸ್ಥೆ ಧರ್ಮ ಪ್ರೊಡಕ್ಷನ್ಸ್ (Dharma Productions) ಬಂಡವಾಳ ಹೂಡಿತು. ಈ ಚಿತ್ರದಿಂದ ಅವರ ವೃತ್ತಿ ಜೀವನಕ್ಕೆ ಭದ್ರ ಬುನಾದಿ ಸಿಕ್ಕಿತು. ಅವರು ತಮ್ಮ ನಟನೆ ಮೂಲಕ ಯಾರು ಎಂಬುದನ್ನು ಸಾಬೀತು ಮಾಡಿದ್ದಾರೆ. ಆದಾಗ್ಯೂ ಅವರು ಸ್ಟಾರ್ ಕಿಡ್ ಎನ್ನುವ ಬಗ್ಗೆ ಒಂದಷ್ಟು ಟೀಕೆಗಳು ಬರುತ್ತಲೇ ಇವೆ. ಈ ಬಗ್ಗೆ ಆಲಿಯಾ ಭಟ್ ಮಾತನಾಡಿದ್ದಾರೆ.

344377160 756290682573015 122778457530995574 n

ಆಲಿಯಾ ಭಟ್ ಸೇರಿದಂತೆ ಬಾಲಿವುಡ್​ನ ಅನೇಕ ಸೆಲೆಬ್ರಿಟಿಗಳಿಗೆ ನಿರ್ಮಾಪಕ ಕರಣ್ ಜೋಹರ್ ಅವರು ಗಾಡ್ ಫಾದರ್. ಸೆಲೆಬ್ರಿಟಿ ಮಕ್ಕಳನ್ನು ಚಿತ್ರರಂಗಕ್ಕೆ ಪರಿಚಯಿಸೋದು ಎಂದರೆ ಅವರಿಗೆ ಎಲ್ಲಿಲ್ಲದ ಖುಷಿ. ‘ಸ್ಟುಡೆಂಟ್ ಆಫ್ ದಿ ಇಯರ್’ ಚಿತ್ರದ ಮೂಲಕ ಆಲಿಯಾ ಭಟ್​ ಅವರನ್ನು ಬಾಲಿವುಡ್​ಗೆ ಕರಣ್ ಪರಿಚಯಿಸಿದರು. ಆಲಿಯಾ ಮೊದಲ ಸಿನಿಮಾದಲ್ಲೇ ಗ್ಲಾಮರ್ ಅವತಾರ ತಾಳಿ ಎಲ್ಲರ ಗಮನ ಸೆಳೆದರು. ಬಳಿಕ ಅವರು ಗ್ಲಾಮರ್ ಪಾತ್ರಕ್ಕೆ ಸೀಮಿತ ಮಾಡಿಕೊಂಡಿಲ್ಲ. ‘ಹೈವೇ’, ‘ಉಡ್ತಾ ಪಂಜಾಬ್​’, ‘ಡಿಯರ್ ಜಿಂದಗಿ’, ‘ರಾಜಿ’ ಮೊದಲಾದ ಚಿತ್ರಗಳಲ್ಲಿ ನಟಿಸಿ ಅವರು ಗಮನ ಸೆಳೆದರು. ಆಲಿಯಾ ತಮ್ಮ ನಟನೆ ಮೂಲಕ ಗಮನ ಸೆಳೆದರೂ ಅವರ ಬಗ್ಗೆ ಟೀಕೆ ನಿಂತಿಲ್ಲ. ಈ ಬಗ್ಗೆ ಅವರು ಮಾತನಾಡಿದ್ದಾರೆ.

‘ಹಲವು ವರ್ಷಗಳಿಂದ ಈ ಮಾತು ಕೇಳಿದ್ದೇನೆ. ನಾನು ಸ್ಟಾರ್ ಕಿಡ್ ಆಗಿರುವುದರಿಂದ ನನಗೆ ಸುಲಭವಾಗಿ ಅವಕಾಶ ಸಿಕ್ಕಿತು ಎಂಬುದನ್ನು ನಾನು ಒಪ್ಪಿಕೊಳ್ಳುತ್ತೇನೆ. ನಾನು ನನ್ನ ಕನಸುಗಳನ್ನು ಮತ್ತೊಬ್ಬರ ಕನಸುಗಳಿಗೆ ಹೋಲಿಸುತ್ತೇನೆ. ಕನಸುಗಳಲ್ಲಿ ದೊಡ್ಡದು, ಚಿಕ್ಕದು ಎಂಬುದಿಲ್ಲ. ಎಲ್ಲರ ಕನಸುಗಳು ಒಂದೇ. ಎಲ್ಲರ ಆಸೆಯೂ ಒಂದೇ. ನನಗೆ ಸವಲತ್ತು ಸಿಕ್ಕಿದೆ ಎಂಬುದನ್ನು ಒಪ್ಪಿಕೊಳ್ಳುತ್ತೇನೆ. ಈ ಕಾರಣಕ್ಕೆ ನಾನು ನನ್ನ ನೂರರಷ್ಟು ಶ್ರಮ ಹಾಕುತ್ತೇನೆ. ನನ್ನ ಕೆಲಸವನ್ನು ನಾನು ಎಂದಿಗೂ ಹಗುರವಾಗಿ ಸ್ವೀಕರಿಸಿಲ್ಲ’ ಎಂದಿದ್ದಾರೆ ಆಲಿಯಾ.

331316239 618578970105135 8441779818894444405 n

ಕಳೆದ ವರ್ಷ ಅಕ್ಟೋಬರ್​ಗೆ ಆಲಿಯಾ ಭಟ್ ಚಿತ್ರರಂಗಕ್ಕೆ ಕಾಲಿಟ್ಟು 10 ವರ್ಷ ಕಳೆದಿದೆ. ಅವರು ಇತ್ತೀಚೆಗೆ ಐದನೇ ಫಿಲ್ಮ್​ಫೇರ್ ಅವಾರ್ಡ್ ಗೆದ್ದಿದ್ದಾರೆ. ‘ಗಂಗೂಬಾಯಿ ಕಾಠಿಯಾವಾಡಿ’ ಸಿನಿಮಾದಲ್ಲಿನ ಅವರ ನಟನೆಗೆ ಈ ಪ್ರಶಸ್ತಿ ಸಿಕ್ಕಿದೆ.  ‘ಹಾರ್ಟ್ ಆಫ್ ಸ್ಟೋನ್’ ಮೂಲಕ ಆಲಿಯಾ ಹಾಲಿವುಡ್​ಗೆ ಕಾಲಡುತ್ತಿದ್ದಾರೆ. ಇದಲ್ಲದೆ ಕರಣ್ ಜೋಹರ್ ನಿರ್ದೇಶನದ ‘ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ’ ಸಿನಿಮಾದಲ್ಲಿ ಅವರು ನಟಿಸಿದ್ದು, ರಿಲೀಸ್​ಗೆ ರೆಡಿ ಇದೆ.

306150764 643147980510154 3398835819733703576 n

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist