ಸ್ಕೂಟರ್‌ಗೆ ಢಿಕ್ಕಿಯಾಗಿ ಬಾಲಕನನ್ನು 2 ಕಿಮೀ ಎಳೆದೊಯ್ದ ಟ್ರಕ್-ಅಜ್ಜ, ಮೊಮ್ಮಗ ಸಾವು
Twitter
Facebook
LinkedIn
WhatsApp

ಉತ್ತರ ಪ್ರದೇಶ: ಸ್ಕೂಟರ್‌ಗೆ ಟ್ರಕ್ ಢಿಕ್ಕಿ ಹೊಡೆದು ಅಜ್ಜ ಮತ್ತು ಮೊಮ್ಮಗ ಸಾವನ್ನಪ್ಪಿದ ಘಟನೆ ಕಾನ್ಪುರ-ಸಾಗರ್ ರಾಷ್ಟ್ರೀಯ ಹೆದ್ದಾರಿ 86ರಲ್ಲಿ ನಡೆದಿದೆ. ಬಾಲಕನನ್ನು ಟ್ರಕ್ ಸುಮಾರು 2 ಕಿಮೀವರೆಗೂ ಎಳೆದೊಯ್ದಿದೆ.
ಉದಿತ್ ನಾರಾಯಣ ಚಾನ್ಸೋರಿಯಾ (67) ಮತ್ತು ಅವರ ಮೊಮ್ಮಗ ಸಾತ್ವಿಕ್ (6) ಮೃತಪಟ್ಟವರು. ಅಜ್ಜ ಮತ್ತು ಮೊಮ್ಮಗ ಮಾರುಕಟ್ಟೆಗೆ ಹೋಗುತ್ತಿದ್ದ ವೇಳೆ ಅವರು ಚಲಾಯಿಸುತ್ತಿದ್ದ ಸ್ಕೂಟರ್‌ಗೆ ಹಿಂದಿನಿಂದ ವೇಗವಾಗಿ ಬಂದ ಟ್ರಕ್ ಢಿಕ್ಕಿಯಾಗಿದೆ.
ಢಿಕ್ಕಿಯ ರಭಸಕ್ಕೆ ಉದಿತ್ ಸ್ಥಳದಲ್ಲೇ ಮೃತಪಟ್ಟರೆ, ಬಾಲಕನನ್ನು ದ್ವಿಚಕ್ರ ವಾಹನ ಸಮೇತ ಟ್ರಕ್ ಎರಡು ಕಿಮೀವರೆಗೆ ಎಳೆದೊಯ್ದಿದೆ. ಬಾಲಕನನ್ನು ಟ್ರಕ್ ಎಳೆದೊಯ್ಯುತ್ತಿರುವುದನ್ನು ನೋಡಿ ಜನ ಕೂಗಿಕೊಂಡರೂ ಚಾಲಕ ಇನ್ನಷ್ಟು ವೇಗವಾಗಿ ಚಲಾಯಿಸಿದ್ದಾನೆ. ಬಳಿಕ ಆತನ ವಾಹನದ ಮೇಲೆ ಜನರು ಕಲ್ಲೆಸೆದು ನಿಲ್ಲಿಸಿದ್ದಾರೆ.
ಸ್ಥಳಕ್ಕೆ ಪೊಲೀಸರು ಆಗಮಿಸಿದ್ದು, ಪ್ರಕರಣ ದಾಖಲಿಸಿದ್ದಾರೆ. ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.