ಸೌತ್ ಚಿತ್ರದಲ್ಲಿ ನಟಿಸಲು ರಶ್ಮಿಕಾಗಿಂತ ಅತೀ ಹೆಚ್ಚು ಸಂಭಾವನೆಗೆ ಬೇಡಿಕೆಯಿಟ್ಟ ಜಾನ್ವಿ ಕಪೂರ್
ಬಾಲಿವುಡ್ (Bollywood) ಬ್ಯೂಟಿ ಜಾನ್ವಿ ಕಪೂರ್ (Janhavi Kapoor) ದಕ್ಷಿಣದ ಚಿತ್ರರಂಗದಲ್ಲಿ ಮಿಂಚಲು ರೆಡಿಯಾಗ್ತಿರುವ ವಿಚಾರ ಎಲ್ಲರಿಗೂ ಗೊತ್ತೆ ಇದೆ. ಹೀಗಿರುವಾಗ ಸೌತ್ ಸಿನಿಮಾಗೆ ಎಂಟ್ರಿ ಕೊಡುವ ಮೊದಲೇ ಭಾರೀ ಸಂಭಾವನೆ ಕೇಳಿದ್ದಾರೆ. ರಶ್ಮಿಕಾ ಮಂದಣ್ಣಗೆ ಸೆಡ್ಡು ಹೊಡೆದು ಜಾನ್ವಿ ಕಪೂರ್ ಅತೀ ಹೆಚ್ಚು ಸಂಭಾವನೆಗೆ ಬೇಡಿಕೆ ಇಟ್ಟಿದ್ದಾರೆ.
ಹಿಂದಿ ಚಿತ್ರರಂಗದಲ್ಲಿ ಒಂದೇ ಒಂದು ಹಿಟ್ ಸಿನಿಮಾ ಕೊಡದೇ ಇದ್ದರು ಕೂಡ ಶ್ರೀದೇವಿ (Actress Sridevi) ಪುತ್ರಿ ಜಾನ್ವಿಗೆ ಭಾರಿ ಬೇಡಿಕೆಯಿದೆ. ಇದೀಗ ಜ್ಯೂನಿಯರ್ ಎನ್‌ಟಿಆರ್‌ಗೆ 9Jr.ntr) ನಾಯಕಿಯಾಗುವ ಮೂಲಕ ಟಾಲಿವುಡ್‌ಗೆ ಎಂಟ್ರಿ ಕೊಡ್ತಿರುವ ಜಾನ್ವಿ, ದುಬಾರಿ ಸಂಭಾವನೆ ಕೇಳಿ ಎಲ್ಲರ ಹುಬ್ಬೇರಿಸಿದ್ದಾರೆ.
ಇನ್ನೂ `ಪುಷ್ಪ’ ಮತ್ತು `ಸೀತಾ ರಾಮಂ’ (Seetharamam) ಚಿತ್ರದಲ್ಲಿ ಮನೋಜ್ಞವಾಗಿ ನಟಿಸಿದ್ದ ರಶ್ಮಿಕಾ, ಮೃಣಾಲ್ ಠಾಕೂರ್‌ಗಿಂತ ಅಧಿಕ ಸಂಭಾವನೆಯನ್ನ ನಟಿ ಜಾನ್ವಿ ಡಿಮ್ಯಾಂಡ್ ಮಾಡಿದ್ದಾರೆ ಎಂಬ ಮಾಹಿತಿ ಹೊರಬಿದ್ದಿದೆ. ʻಪುಷ್ಪʼ (Pushpa Film) ಸಕ್ಸಸ್ ನಂತರ ರಶ್ಮಿಕಾ ಮಂದಣ್ಣ (Rashmika Mandanna) 5 ಕೋಟಿಗಿಂತ ಅಧಿಕ ಸಂಭಾವನೆಯನ್ನ ತಮ್ಮ ಮುಂಬರುವ ಚಿತ್ರಗಳಿಗೆ ಪಡೆಯುತ್ತಿದ್ದಾರೆ. ಹೀಗಿರುವಾಗ ರಶ್ಮಿಕಾಗಿಂತ ಭಾರಿ ಸಂಭಾವನೆಗೆ ಜಾನ್ವಿ ಡಿಮ್ಯಾಂಡ್ ಮಾಡಿದ್ದಾರಂತೆ. ಈ ಸುದ್ದಿ ಕೇಳಿ ಸಿನಿಪಂಡಿತರು ಶಾಕ್ ಆಗಿದ್ದಾರೆ.