ಸುಕೇಶ್ ಜೈಲ್ ಸೆಲ್ ಮೇಲೆ ಅಧಿಕಾರಿಗಳು ರೇಡ್! ಒಂದೂವರೆ ಲಕ್ಷದ ಶೂ, 80 ಸಾವಿರ ಬೆಲೆಯ ಜೀನ್ಸ್ ಪ್ಯಾಂಟ್ ಸೀಝ್!
200 ಕೋಟಿ ರೂಪಾಯಿ ವಂಚನೆ ಆರೋಪವನ್ನು ಎದುರಿಸುತ್ತಿರುವ ಸುಕೇಶ್ ಚಂದ್ರಶೇಖರ್ ಜೈಲ್ ಸೆಲ್ ಮೇಲೆ ಅಧಿಕಾರಿಗಳು ರೇಡ್ ಮಾಡಿದ್ದಾರೆ. ಈ ದಾಳಿಯಲ್ಲಿ ಹಲವಾರು ಲಕ್ಷುರಿ ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
1.5 ಲಕ್ಷದ ಚಪ್ಪಲಿ, 80 ಸಾವಿರ ಬೆಲೆ ಬಾಳುವ ಮೂರು ಜೀನ್ಸ್ ಸೇರಿ ಹಲವು ವಸ್ತುಗಳನ್ನು ಸೀಜ್ ಮಾಡಲಾಗಿದೆ. ಇದೀಗ ಮಂಡೋಲಿ ಜೈಲ್ ಸೆಲ್ನಲ್ಲಿ ನಡೆದ ದಾಳಿಯ ಸಿಸಿಟಿವಿ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು ಎಲ್ಲರೂ ಶೇರ್ ಮಾಡುತ್ತಿದ್ದಾರೆ. ವಿಡಿಯೋದಲ್ಲಿ ಅಧಿಕಾರಿಗಳ ತಂಡ ಹಾಗೂ ಜೈಲು ಪ್ರಾಧಿಕಾರ ಸುಕೇಶ್ನನ್ನು ಸೆಲ್ ಒಳಗೆ ಕರೆತರುವುದನ್ನು ಕಾಣಬಹುದು. ನಂತರ ಆತ ಕಣ್ಣೊರೆಸುವುದನ್ನು ಕಾಣಬಹುದು. ಈ ರೇಡ್ ನಡೆದಾಗ ಸೆಲ್ ಒಳಗೆ ಸುಕೇಶ್ ಮಾತ್ರ ಇದ್ದ. ಗುರುವಾರ ವೈರಲ್ ಆಗಿರುವ ಈ ವಿಡಿಯೋದಲ್ಲಿ ಸುಕೇಶ್ ಜೋರಾಗಿ ಅಳುವುದನ್ನು ಕೂಡಾ ಕಾಣಬಹುದು.
ಕಾನೂನು ಕಾರ್ಯದರ್ಶಿ ಎಂದು ಹೇಳಿಕೊಂಡು ಮಾಜಿ ರೆಲಿಗೇರ್ ಪ್ರವರ್ತಕ ಮಲ್ವಿಂದರ್ ಸಿಂಗ್ ಅವರ ಪತ್ನಿಯನ್ನು ಸುಕೇಶ್ ವಂಚಿಸಿದ್ದ. ಹಣ ವರ್ಗಾವಣೆ ಪ್ರಕರಣದಲ್ಲಿ ಸುಕೇಶ್ ಚಂದ್ರಶೇಖರ್ ಅವರನ್ನು ಫೆಬ್ರವರಿ 16 ರಂದು ಜಾರಿ ನಿರ್ದೇಶನಾಲಯ ಬಂಧಿಸಿತ್ತು.ಫೆಡರಲ್ ತನಿಖಾ ಸಂಸ್ಥೆ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಶೈಲೇಂದರ್ ಮಲಿಕ್ ಅವರಲ್ಲಿ ಆರೋಪಿಯನ್ನು 14 ದಿನಗಳ ಕಸ್ಟಡಿಗೆ ಕೋರಿತ್ತು. ಚಂದ್ರಶೇಖರ್ ಅವರನ್ನು ಇಡಿ ಬಂಧಿಸಿರುವ ಮೂರನೇ ಅಕ್ರಮ ಹಣ ವರ್ಗಾವಣೆ ಪ್ರಕರಣ ಇದಾಗಿದೆ.