![ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್](https://urtv24.com/wp-content/uploads/2024/12/WhatsApp-Image-2024-12-12-at-22.37.00-6787e1d3-300x169.jpg)
ಈ ವರ್ಷದ ಆರಂಭದಲ್ಲಿ ಕಿಯಾ ಮೋಟಾರ್ಸ್(Kia Motors) ಭಾರತದಲ್ಲಿ ಬಿಡುಗಡೆಗೊಳಿಸಿದ ಕಿಯಾ ಕ್ಯಾರೆನ್ಸ್ಗೆ (Kia Carens) ಬೇಡಿಕೆ ಹೆಚ್ಚುತ್ತಿದ್ದು, ಜನರು ಹೆಚ್ಚಿನ ಸಂಖ್ಯೆಯಲ್ಲಿ ಅದನ್ನು ಬುಕ್ ಮಾಡುತ್ತಿದ್ದಾರೆ. ದಕ್ಷಿಣ ಕೊರಿಯಾ ಮೂಲದ ಕಿಯಾ, 2022ರ ಜನವರಿಯಲ್ಲಿ ಆರು ಹಾಗೂ ಏಳು ಸೀಟುಗಳ ಕಿಯಾ ಕ್ಯಾರೆನ್ಸ್ ಎಸ್ಯುವಿಯನ್ನು ಬಿಡುಗಡೆಗೊಳಿಸಿತ್ತು. ಇದು ಕೇವಲ ಎಂಪಿವಿ ಅಥವಾ ಎಸ್ಯುವಿ ಅಲ್ಲ, ಬದಲಿಗೆ, ಇದೊಂದು ರಿಕ್ರಿಯೇಷನಲ್ ವಾಹನ (Recreational vehicle) ಎಂದಿರುವ ಕಿಯಾ, ಜನವರಿ 14ರಿಂದಲೇ ಮೊದಲ ಹಾಗೂ ಎರಡನೇ ಹಂತದ ನಗರಗಳಲ್ಲಿ ಕೂಡ ಬುಕಿಂಗ್ ತೆರೆದಿತ್ತು. ಈ ಎರಡು ಹಂತದ ನಗರಗಳಲ್ಲಿಯೇ ಶೇ.60ರಷ್ಟು ಕಾರುಗಳು ಮಾರಾಟವಾಗಿವೆ ಎಂದು ಕಿಯಾ ತಿಳಿಸಿದೆ. ಕ್ಯಾರೆನ್ಸ್ನ ಬೆಲೆ ಘೋಷಣೆಗೂ ಮುನ್ನವೇ, 19,000ಕ್ಕೂ ಹೆಚ್ಚು ಮುಂಗಡ-ಬುಕಿಂಗ್ ಮಾಡಲಾಗಿದೆ ಎಂದು ಕಿಯಾ ತಿಳಿಸಿತ್ತು. ಕಾರು ಬಿಡುಗಡೆಯಾದ ಒಂದು ತಿಂಗಳೊಳಗೆ ಬುಕಿಂಗ್ ಸಂಖ್ಯೆ 50 ಸಾವಿರ ದಾಟಿದೆ ಎಂದು ಕಂಪನಿಯ ಅಧಿಕೃತ ಪ್ರಕಟಣೆ ತಿಳಿಸಿದೆ.
ಇದರಲ್ಲಿ ಶೇ.45ರಷ್ಟು ಕೊಡುಗೆ ಕ್ಯಾರೆನ್ಸ್ ಲಕ್ಸುರಿ ಹಾಗೂ ಲಕ್ಸುರಿ ಪ್ಲಸ್ ವೇರಿಯಂಟ್ಗಳದ್ದಾಗಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ಕಿಯಾ ಇಂಡಿಯಾದ ಮಾರಾಟ ವಿಭಾಗದ ಮುಖ್ಯಸ್ಥ ಮ್ಯೂಂಗ್೦ಸಿಕ್ ಸೋನ್, “ಕ್ಯಾರೆನ್ಸ್ಗೆ ದೊರೆತಿರುವ ಪ್ರತಿಕ್ರಿಯೆ ಇದುವರೆಗೆ ಬಿಡುಗಡೆಯಾಗಿರುವ ಇತರ ಎಲ್ಲಾ ಎಸ್ಯುವಿಗಳಿಗಿಂತ ಭಿನ್ನವಾಗಿದೆ. ಇದು ತುಂಬಾ ಪ್ರೋತ್ಸಾಹಧಾಯಕವಾಗಿದೆ” ಎಂದಿದ್ದಾರೆ. ಕಾರಿನ ಪೆಟ್ರೋಲ್ ಹಾಗೂ ಡೀಸೆಲ್ ವೇರಿಯಂಟ್ಗಳ ಬೇಡಿಕೆ ಸಮತೋಲಿತವಾಗಿದೆ. ಶೇ.50ರಷ್ಟು ಜನರು ಡೀಸೆಲ್ ವೇರಿಯಂಟ್ ಆರಿಸಿದ್ದರೆ, ಶೇ.30ರಷ್ಟು ಗ್ರಾಹಕರು ಮ್ಯಾನ್ಯುವಲ್ ಕಾರುಗಳನ್ನು ಆಯ್ಕೆ ಮಾಡಿದ್ದಾರೆ. ಕಿಯಾ ಕ್ಯಾರೆನ್ಸ್ ಕೌಟುಂಬಿಕ ಕಾರಾಗಿ ಗ್ರಾಹಕರನ್ನು ಆಕರ್ಷಿಸುತ್ತಿದೆ ಮತ್ತು ಇದು ಪೆಟ್ರೋಲ್ ಮತ್ತು ಒಂದು ಡೀಸೆಲ್ ಎಂಜಿನ್ ಆಯ್ಕೆಯಲ್ಲಿ ಲಭ್ಯವಿದೆ. ಸುರಕ್ಷೆಯ ವಿಚಾರದಲ್ಲಿ ಕೂಡ ಕಿಯಾ ಕ್ಯಾರೆನ್ಸ್ ಸಾಕಷ್ಟು ಹೊಸ ವೈಶಿಷ್ಟ್ಯಗಳನ್ನು ಸೇರಿಸಿದೆ. ಇದು ಈ ವಲಯದಲ್ಲೇ ಅತಿ ಉದ್ದವಾದ ಕಾರಾಗಿದ್ದು, ಇದರ ವಿನ್ಯಸ ಕಿಯಾ ಸೋನೆಟ್ಗೆ ಹೋಲಿಕೆಯಾಗುವಂತಿದೆ.
ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ
ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ Twitter Facebook LinkedIn WhatsApp ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಂಗಲ್ ಚಂಡಮಾರುತದ ಪರಿಣಾಮ
ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist