ಸೋಮವಾರ, ಏಪ್ರಿಲ್ 29, 2024
ಅಶ್ಲೀಲ ವಿಡಿಯೋ ಹಂಚಿಕೆ ಪ್ರಕರಣ; ಪ್ರಜ್ವಲ್ ರೇವಣ್ಣ ಜೊತೆಗೆ ಹೆಚ್​​ಡಿ ರೇವಣ್ಣ ವಿರುದ್ಧವೂ ಎಫ್ಐಆರ್‌ ದಾಖಲು..!-ಮಂಗಳೂರು ಲೋಕಸಭೆ 2024: ಎಲ್ಲರ ಚಿತ್ತ ಬೆಳ್ತಂಗಡಿ-ಮೂಡಬಿದ್ರಿ ಬಿಲ್ಲವ ಮತಗಳ ಕಡೆಗೆ . ಚುನಾವಣಾ ದಿಕ್ಕನ್ನು ನಿರ್ಧರಿಸಲಿದೆ ಬೆಳ್ತಂಗಡಿ -ಮೂಡಬಿದ್ರಿ !.-ಎಸ್.ಐ.ಟಿ ತನಿಖೆ ನಡೆಸುವಂತೆ ಮಹಿಳಾ ಆಯೋಗದಿಂದ ಸರ್ಕಾರಕ್ಕೆ ಪತ್ರ; ಜರ್ಮನಿಗೆ ಹಾರಿದ ಪ್ರಜ್ವಲ್‌ ರೇವಣ್ಣ!-ಮದುವೆ ಆಮಂತ್ರಣದಲ್ಲಿ ಚುನಾವಣಾ ಪ್ರಚಾರ : ನೀತಿ ಸಂಹಿತೆಯಡಿ ಪ್ರಕರಣ ದಾಖಲು-ನೋಟಾ, ಅತಿ ಹೆಚ್ಚು ಅಲ್ಪಸಂಖ್ಯಾತರ ಮತದಾನ, ಮೂಡಬಿದ್ರೆ- ಬೆಳ್ತಂಗಡಿಯಲ್ಲಿ ಬಿಲ್ಲವರ ಅತಿ ಹೆಚ್ಚು ಮತದ ಬಗ್ಗೆ ಕಾಂಗ್ರೆಸ್ ನಿರೀಕ್ಷೆ.ಆ ಮೂಲಕ ಗೆಲುವಿನ ಭರವಸೆ!-ಬಿಜೆಪಿಯ ಬಣ ರಾಜಕೀಯ, ನೋಟಾ, ಸತ್ಯಜಿತ್ , ಗ್ಯಾರೆಂಟಿ, ಬಿಲ್ಲವ ಟ್ರಂಪ್ ಕಾರ್ಡ್ , ಅಲ್ಪಸಂಖ್ಯಾತರ ಬೂತುಗಳ ಹೆಚ್ಚಿನ ಮತದಾನ ಸಹಾಯ ಪಡೆದು ಮಂಗಳೂರು ಲೋಕಸಭೆಯಲ್ಲಿ ಪದ್ಮರಾಜ್ ವಿಜಯ ಪತಾಕೆ ಹಾರಿಸಬಹುದೇ?-ಲೋಕಸಭೆ ಚುನಾವಣೆ; ರಾಜ್ಯದಲ್ಲಿ ಇಂದು 14 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ ಆರಂಭ-ಕರ್ಬೂಜ ಹಣ್ಣಿನಲ್ಲಿರುವ ವಿಶೇಷವಾದ ಆರೋಗ್ಯಕಾರಿ ಲಾಭಗಳೆಷ್ಟು.?-ಜೆಡಿಯು ಯುವ ಮುಖಂಡ ಸೌರಭ್​ ಕುಮಾರ್ ಗುಂಡಿಕ್ಕಿ ಹತ್ಯೆ..!-Rain Alert: ರಾಜ್ಯದ ಹಲವು ಜಿಲ್ಲೆಗಳಲ್ಲಿ 4 ದಿನಗಳ ಕಾಲ ಮುನ್ಸೂಚನೆ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಸಿಗರೇಟ್‌ ಸೇದುತ್ತಾ ರಾಷ್ಟ್ರಗೀತೆಗೆ ಅವಮಾನ ಮಾಡಿದ ಯುವತಿಯರು ;ಪ್ರಕರಣ ದಾಖಲು - ವಿಡಿಯೋ ವೈರಲ್

Twitter
Facebook
LinkedIn
WhatsApp
recent photo 1680971043

ಕೋಲ್ಕತಾ: ʻರಾಷ್ಟ್ರಗೀತೆʼ (National Anthem) ಎಂದರೆ ದೇಶಭಕ್ತಿ. ದೂರದಲ್ಲಿ ನಿಂತಾಗ ʻಜನ ಗಣ ಮನʼ ಶಬ್ಧ ಸಣ್ಣ ದನಿಯಲ್ಲಿ ಕೇಳಿದರೂ ಸಾಕು ನಿಂತು ಗೌರವ ಸೂಚಿಸುತ್ತೇವೆ. ಇದು ದೇಶದ ಪ್ರತಿಯೊಬ್ಬರ ಮೂಲಭೂತ ಕರ್ತವ್ಯವೂ ಹೌದು. ರಾಷ್ಟ್ರಗೀತೆಗೆ ಯಾರೇ ಅಪಮಾನ ಮಾಡಿದರೂ ಅದು ಶಿಕ್ಷಾರ್ಹ ಅಪರಾಧ.

ಆದರೀಗ ಇಲ್ಲಿ ಇಬ್ಬರು ಯುವತಿಯರು ಸಿಗರೇಟ್‌ ಸೇದುತ್ತಾ ರಾಷ್ಟ್ರಗೀತೆಗೆ ಅಪಮಾನ ಮಾಡಿ, ಹುಚ್ಚಾಟ ನಡೆಸಿದ್ದಾರೆ. ಅಲ್ಲದೇ ಈ ಸನ್ನಿವೇಶವನ್ನ ವೀಡಿಯೋ ಮಾಡಿ ಜಾಲತಾಣದಲ್ಲೂ (Social Media) ಹಂಚಿಕೊಂಡಿದ್ದಾರೆ. ಈ ವೀಡಿಯೋ ಆಧರಿಸಿ ವಕೀಲ ಅತ್ರಯೀ ಹಾಲ್ದರ್ ಅವರು ಲಾಲ್‌ಬಜಾರ್ ಸೈಬರ್ ಘಟಕ ಹಾಗೂ  ಬಾರಕ್‌ಪುರದಲ್ಲಿ ದೂರು ದಾಖಲಿಸಿದ್ದಾರೆ.

ಈ ಪೋಸ್ಟ್ ಮಾಡಲಾಗಿದ್ದ ಫೇಸ್‌ಬುಕ್ ಖಾತೆಯನ್ನು ಡಿಲೀಟ್ ಮಾಡಿರುವುದರಿಂದ ಈಗ ವಿಡಿಯೋ ಅದರಲ್ಲಿ ಲಭ್ಯವಿಲ್ಲ. ಆದರೆ ಕೆಲವರು ವೀಡಿಯೋವನ್ನ ಟ್ವಿಟ್ಟರ್‌ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಸಿಗರೇಟ್ ಸೇದುತ್ತಾ ಕುಳಿತಿರುವ ಯುವತಿಯರು ಉದ್ದೇಶಪೂರ್ವಕವಾಗಿ ರಾಷ್ಟ್ರಗೀತೆಯ ಸಾಲುಗಳನ್ನ ವ್ಯಂಗ್ಯವಾಗಿ ಹಾಡಿ, ಅಪಮಾನ ಮಾಡಿದ್ದಾರೆ ಎನ್ನಲಾಗಿದೆ.

ಕೈಯಲ್ಲಿ ಸಿಗರೇಟ್ ಹಿಡಿದು ವಿಚಿತ್ರವಾಗಿ ನಗುವ ಯುವತಿಯೊಬ್ಬಳು ರಾಷ್ಟ್ರಗೀತೆಯನ್ನು ಮನಬಂದಂತೆ ಹಾಡಿದ್ದಾಳೆ. ಪಕ್ಕದಲ್ಲಿ ಕುಳಿತಿದ್ದ ಯುವತಿ ಸಹ ಆಕೆಯಂತೆಯೇ ವರ್ತಿಸಿದ್ದು, ಆ ಸಿಗರೇಟ್ ಅನ್ನು ಕಿತ್ತುಕೊಂಡು, ಇದು ಧ್ವಜ, ಧ್ವಜ ಎಂದು ಇಂಗ್ಲಿಷ್‌ನಲ್ಲಿ ಹೇಳಿದ್ದಾಳೆ. ಕೊನೆಯಲ್ಲಿ ರಾಷ್ಟ್ರಗೀತೆ ಹಾಡಿದ ಮೊದಲ ಯುವತಿ ಕ್ಷಮೆ ಕೇಳುತ್ತೇನೆ ಹಾಸ್ಯವಾಗಿ ಹೇಳಿದ್ದಾಳೆ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ