ಬುಧವಾರ, ಫೆಬ್ರವರಿ 5, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಸಾವಿರಾರು ಬಳಕೆದಾರರಿಗೆ ಟ್ವಿಟ್ಟರ್‌ ಡೌನ್: ನೆಟ್ಟಿಗರ ಆಕ್ರೋಶ..!

Twitter
Facebook
LinkedIn
WhatsApp
ಸಾವಿರಾರು ಬಳಕೆದಾರರಿಗೆ ಟ್ವಿಟ್ಟರ್‌ ಡೌನ್: ನೆಟ್ಟಿಗರ ಆಕ್ರೋಶ..!

ಸ್ಮಾರ್ಟ್‌ಫೋನ್‌ಗಳು (Smartphones) ಬಂದ ಮೇಲೆ ಸಾಮಾಜಿಕ ಜಾಲತಾಣಗಳ (Social Media) ಬಳಕೆ ಬಹುತೇಕ ಎಲ್ಲ ಜನರಲ್ಲೂ ಹೆಚ್ಚಿದೆ. ಈ ಹಿನ್ನೆಲೆ ಕೆಲ ಕಾಲ ಸಾಮಾಜಿಕ ಜಾಲತಾಣ ಸೇವೆಯಲ್ಲಿ ವ್ಯತ್ಯಯವಾದರೂ ಜನರು ಹೆಚ್ಚು ತೊಂದರೆ ಪಡುತ್ತಾರೆ. ಇದೇ ರೀತಿ, ಈಗ ಭಾರತ (India), ಅಮೆರಿಕ (United States) ಸೇರಿ ಜಗತ್ತಿನ ಬಹುತೇಕ ದೇಶಗಳಲ್ಲಿ ಟ್ವಿಟ್ಟರ್‌ (Twitter) ಡೌನ್‌ ಆಗಿದ್ದು, ಸಾವಿರಾರು ಜನರು ಟ್ವೀಟ್‌ (Tweet)  ಮಾಡಲು ಆಗುತ್ತಿಲ್ಲ, ಇತರರ ಟ್ವೀಟ್‌ಗಳನ್ನು ನೋಡಲು ಆಗುತ್ತಿಲ್ಲ. ನಮ್ಮ ಸೈಟ್‌ ರಿಫ್ರೆಶ್‌ ಆಗುತ್ತಿಲ್ಲ ಎಂದು ಗೊಣಗುತ್ತಿದ್ದಾರೆ. ಹೌದು, ಇಂಟರ್ನೆಟ್‌ ಟ್ರ್ಯಾಕಿಂಗ್ ವೆಬ್‌ಸೈಟ್ ಡೌನ್‌ಡಿಕೆಕ್ಟರ್‌ ( Downdetector.com) ಪ್ರಕಾರ, Twitter Inc ಸಾವಿರಾರು ಬಳಕೆದಾರರಿಗೆ ಸ್ಥಗಿತಗೊಂಡಿದೆ.

ಅಮೆರಿಕ ಕಾಲಮಾನ ಬುಧವಾರ ರಾತ್ರಿ 7. 40 ರ ಸಮಯದಲ್ಲಿ ಯುನೈಟೆಡ್ ಸ್ಟೇಟ್ಸ್‌ನಲ್ಲಿ ಸಾಮಾಜಿಕ ಮಾಧ್ಯಮ ವೆಬ್‌ಸೈಟ್ ಅನ್ನು ಪ್ರವೇಶಿಸುವಲ್ಲಿ 10,000 ಕ್ಕೂ ಹೆಚ್ಚು ಬಳಕೆದಾರರು ಸಮಸ್ಯೆಗಳನ್ನು ವರದಿ ಮಾಡಿದ್ದಾರೆ. ಅದೇ ರೀತಿ, ಭಾರತದಲ್ಲೂ ಸಹ ಮೈಕ್ರೋಬ್ಲಾಗಿಂಗ್ ತಾಣ ಟ್ವಿಟ್ಟರ್‌ ಗುರುವಾರ ಬೆಳಗ್ಗೆ 6.30 ರ ಸುಮಾರಿನಿಮದ ವೆಬ್‌ ಆವೃತ್ತಿ ಅಥವಾ ಡೆಸ್ಕ್‌ಟಾಪ್‌ ಆವೃತ್ತಿಗೆ ಸೈನ್ ಇನ್ ಮಾಡುವಲ್ಲಿ ಅನೇಕ ತೊಂದರೆಗಳನ್ನು ಎದುರಿಸಿದ ಕಾರಣ ಹಲವಾರು ಬಳಕೆದಾರರಿಗೆ ಡೌನ್ ಆಗಿದೆ. ಈ ಸ್ಥಗಿತ ಇನ್ನೂ ಮುಂದುವರೆದಿದೆ.

twitter down for thousands of users downdetector reports ash

ಬಳಕೆದಾರರಿಗೆ Twitter ವೆಬ್‌ಸೈಟ್‌ನಲ್ಲಿ ಹಲವಾರು ನಿಮಿಷಗಳವರೆಗೆ ಲಾಗ್ ಇನ್ ಮಾಡಲು ಸಾಧ್ಯವಾಗಲಿಲ್ಲ. ಆದರೂ, ಮೈಕ್ರೋಬ್ಲಾಗಿಂಗ್ ಸೈಟ್ ಮೊಬೈಲ್ ಫೋನ್‌ಗಳಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿದುಬಂದಿದೆ. 

ಕೆಲವು ಬಳಕೆದಾರರು ತಮ್ಮ ಟ್ವಿಟ್ಟರ್‌ ನೋಟಿಫೀಕೇಷನ್‌ಗಳು ಕಾರ್ಯನಿರ್ವಹಿಸುತ್ತಿಲ್ಲ ಎಂದು ದೂರಿದ್ದಾರೆ. ಟ್ವಿಟ್ಟರ್‌ ಡೌನ್ ಆಗಿದೆ ಎಂದು ಹಲವು ಬಳಕೆದಾರರು ವರದಿ ಮಾಡಿದ್ದಾರೆ ಎಂದು ಡೌನ್‌ಡಿಕೆಕ್ಟರ್‌ ಸಾಫ್ಟ್‌ವೇರ್ ತೋರಿಸಿದೆ. “ಬಳಕೆದಾರರ ವರದಿಗಳು Twitter ನಲ್ಲಿ ಸಂಭವನೀಯ ಸಮಸ್ಯೆಗಳನ್ನು ಸೂಚಿಸುತ್ತವೆ” ಎಂದು downdetector.in ಮಾಹಿತಿ ನೀಡಿದೆ. 

ಇನ್ನು, ಭಾರತ, ಅಮೆರಿಕ ಮಾತ್ರವಲ್ಲದೆ ಕೆನಡಾ, ಅರ್ಜೆಂಟೀನಾ, ಯುನೈಟೆಡ್ ಕಿಂಗ್ಡಮ್, ಫಿಲಿಪೈನ್ಸ್ ಮತ್ತು ಜರ್ಮನಿ ಸೇರಿದಂತೆ ಹಲವು ದೇಶಗಳಲ್ಲಿ ಈ ತೊಂದರೆಯಾಗಿದೆ. ಟ್ವಿಟ್ಟರ್‌ನ ಮುಖಪುಟಕ್ಕೆ ಭೇಟಿ ನೀಡಿದಾಗ ಟೈಮ್‌ಲೈನ್ ಪಾಪ್ ಅಪ್ ನೋಡುವ ಬದಲು, ಸ್ಥಗಿತವನ್ನು ಎದುರಿಸುತ್ತಿರುವ ಬಳಕೆದಾರರಿಗೆ ದೋಷ ಸಂದೇಶ ಬರುತ್ತಿದೆ. “ಏನೋ ತಪ್ಪಾಗಿದೆ, ಆದರೆ ಚಿಂತಿಸಬೇಡಿ – ಇದು ನಿಮ್ಮ ತಪ್ಪಲ್ಲ. ಮತ್ತೊಮ್ಮೆ ಪ್ರಯತ್ನಿಸೋಣ.” ಎಂಬ ಸಂದೇಶ ಬರುತ್ತಿದೆ. 

ಟ್ವಿಟ್ಟರ್‌ನ iPhone ಮತ್ತು Android ಆವೃತ್ತಿಗಳು, ಬಹುಪಾಲು ಈಗ ಸಂಪೂರ್ಣವಾಗಿ ಕಾರ್ಯನಿರ್ವಹಿಸುತ್ತಿರುವಂತೆ ತೋರುತ್ತಿದೆ; ಆದರೂ, ನೋಟಿಫಿಕೇಶನ್‌ ಟ್ಯಾಬ್ ಅಪ್‌ಡೇಟ್‌ ಆಗುವಂತೆ ತೋರುತ್ತಿಲ್ಲ. ಸದ್ಯಕ್ಕೆ, ನೀವು ಟ್ವಿಟ್ಟರ್‌ ವೆಬ್‌ಸೈಟ್‌ ನೋಡಲು ಅದರ ಅಪ್ಲಿಕೇಷನ್‌ ಬಳಕೆಮಾಡಬಹುದು. ಕೆಲವರಿಗೆ ಟ್ವಿಟ್ಟರ್‌ ಡೆಸ್ಕ್‌ಟಾಪ್‌ನಲ್ಲೂ ಕಾರ್ಯನಿರ್ವಹಿಸುತ್ತಿದೆ ಎಂದೂ ಹೇಳಲಾಗಿದೆ. 

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist