ಸಾರ್ವಜನಿಕರ ಗಮನಕ್ಕೆ ; ಮಂಗಳೂರು ನಗರಕ್ಕೆ ಮುಂದಿನ ಈ ಎರಡು ದಿನ ನೀರು ಪೂರೈಕೆ ಇಲ್ಲ!
Twitter
Facebook
LinkedIn
WhatsApp

ಮಹಾನಗರ: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗೆ ನೀರು ಸರಬರಾಜು ಮಾಡುವ ತುಂಬೆ ಅಣೆಕಟ್ಟಿನಲ್ಲಿ ವಿವಿಧ ತಾಂತ್ರಿಕ ಕಾಮಗಾರಿ ಹಿನ್ನೆಲೆಯಲ್ಲಿ ಎ.27ರಂದು ಬೆಳಗ್ಗೆ 6ಗಂಟೆಯಿಂದ 29ರ ಬೆಳಗ್ಗೆ 6 ಗಂಟೆಯವರೆಗೆ 48ಗಂಟೆಗಳ ಕಾಲ ಮಂಗಳೂರು ನಗರಕ್ಕೆ ನೀರು ಸಂಪೂರ್ಣ ನಿಲುಗಡೆಯಾಗಲಿದೆ.
ಅಣೆಕಟ್ಟಿನ ಎಚ್‌ಎಲ್‌ಪಿಎಸ್ 2- 80 ಎಂಎಲ್‌ಡಿ ರೇಚಕ ಸ್ಥಾವರದಲ್ಲಿರುವ 1,200 ಎಂ.ಎಂ. ವ್ಯಾಸದ ಕೊಳವೆ ದುರಸ್ತಿ ಕಾಮಗಾರಿ ಮತ್ತು ಎಲ್‌ಎಲ್‌ಪಿಎಸ್-1 ಪಂಪ್ ನಂಬ್ರ-2ರ ಹೆಡರ್ ಬದಲಾವಣೆ ಮತ್ತು ಇತರ ಪೂರಕ ಕಾಮಗಾರಿ ನಡೆಯಲಿದೆ.
ಈ ವೇಳೆ ನೀರು ಸರಬರಾಜು ವ್ಯತ್ಯಯವಾಗುವುದರಿಂದ ಸಾರ್ವಜನಿಕರು ಸಹಕರಿಸುವಂತೆ ಪಾಲಿಕೆ ಪ್ರಕಟನೆ ತಿಳಿಸಿದೆ.