ವಿಮಾನ ನಿಲ್ದಾಣದಲ್ಲಿ ಕದ್ದು ಮುಚ್ಚಿ ಮಹಿಳೆಯರ ಫೋಟೋ ತೆಗೆಯುತ್ತಿದ್ದ ವ್ಯಕ್ತಿಯ ಬಂಧನ

ದೇವನಹಳ್ಳಿ: ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮಹಿಳೆಯೊಬ್ಬರ ಅನುಮತಿಯಿಲ್ಲದೆ ಫೋಟೋ (photo) ತೆಗೆಯುತ್ತಿದ್ದ ವ್ಯಕ್ತಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಆರೋಪಿಯನ್ನು ಆಂಧ್ರಪ್ರದೇಶದ ಶ್ರೀಕಾಕುಳಂ ನಿವಾಸಿ ರವಡಾ ಲಕ್ಷ್ಮೀ ನಾರಾಯಣ ಎಂದು ಪೊಲೀಸರು ಗುರುತಿಸಿದ್ದಾರೆ.
ಅಂದಹಾಗೆ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಡೆಹ್ರಾಡೂನ್ಗೆ ತೆರಳಲು ಮಹಿಳೆಯೊಬ್ಬರು ಆಗಮಿಸಿದ್ದರು. ಟರ್ಮಿನಲ್ ಮುಂಬಾಗ ಕಾಫಿ ಕುಡಿಯಲು ಮಹಿಳೆ ನಿಂತಿದ್ದರು. ಈ ವೇಳೆ ಖದ್ದು ಮುಚ್ಚಿ ಪಕ್ಕದ ಟೇಬಲ್ನಲ್ಲಿ ಕುಳಿತುಕೊಂಡಿದ್ದ ಆಂಧ್ರ ಮೂಲದ ವ್ಯಕ್ತಿ ಮಹಿಳೆಯ ಫೋಟೋ ತೆಗೆದಿದ್ದಾನೆ. ಈ ವೇಳೆ ಅಲರ್ಟ್ ಆದ ಮಹಿಳೆ ಮೊಬೈಲ್ನಲ್ಲಿದ್ದ ಫೋಟೋ ಸಮೇತ ಆರೋಪಿಯನ್ನ ಪೊಲೀಸರ ವಶಕ್ಕೆ ನೀಡಿದ್ದಾಳೆ. ಜೊತೆಗೆ ಮಹಿಳೆಯ ಅನುಮತಿಯಿಲ್ಲದೆ ಅಸಭ್ಯ ರೀತಿಯಲ್ಲಿ ಫೋಟೋ ಕ್ಲಿಕ್ಕಿಸಿದ ಕಾರಣಕ್ಕೆ ವ್ಯಕ್ತಿಯನ್ನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸರು ಬಂಧಿಸಿದ್ದಾರೆ.
ಚನ್ನಗಿರಿಯಲ್ಲಿ ಕಾಡಾನೆ ಆತಂಕ: ಗ್ರಾಮಸ್ಥರು ಎಚ್ಚರಿಕೆ ಇರುವಂತೆ ಅರಣ್ಯ ಇಲಾಖೆ ಸೂಚನೆ:
ದಾವಣಗೆರೆ (ಏ.9): ಜಿಲ್ಲೆಯ ಚನ್ನಗಿರಿ ತಾಲೂಕಿನ ಸೋಮಲಾಪುರ ಕಾಶಿಪುರ ಹಾಗೂ ಜಕಲಿ ಗ್ರಾಮಗಳಿಗೆ ನುಗ್ಗಿದ 2 ಕಾಡಾನೆಗಳು ಗ್ರಾಮದ ನಾಲ್ವರ ಮೇಲೆ ದಾಳಿ ಮಾಡಿದ್ದು, 16 ವರ್ಷದ ಬಾಲಕಿ ಸಾವನ್ನಪ್ಪಿರುವುದು ಗ್ರಾಮಸ್ಥರಲ್ಲಿ ಆತಂಕ ಮೂಡಿಸಿದೆ.
ಚನ್ನಗಿರಿ ತಾಲೂಕು ಅರಿಶಿನ ಘಟ್ಟ ಬಳಿಯ ಸೂಳೆಕೇರೆಯಲ್ಲಿ ಕಾಡಾನೆಗಳು ಬೀಡುಬಿಟ್ಟಿರುವ ಹಿನ್ನೆಲೆ ಹೊನ್ನಾಳಿ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಸಂಚರಿಸುವ ಸಾಧ್ಯತೆ ಹೀಗಾಗಿ ಹೊಲ ಗದ್ದೆಗಳಲ್ಲಿ ಕೆಲಸ ಮಾಡುವ ರೈತರು ಸಾರ್ವಜನಿಕರು ಎಚ್ಚರದಿಂದರಲು ಅರಣ್ಯ ಇಲಾಖೆ ಸೂಚನೆ ನೀಡಿದೆ.
ಹಾಲೇಶಪುರ ಬೈರನಹಳ್ಳಿ ಚನ್ನೇನಹಳ್ಳಿ ಕ್ಯಾಸಿನ ಕೆರೆ, ಕುಳಗಟ್ಟೆ ಮಲ್ಲಿಕಟ್ಟೆ ರಾಂಪುರ ಉಜ್ಜಯಿನಿಪುರ ಹೊಳೆ ಬೆನಕನಹಳ್ಳಿ ಕಮ್ಮರಘಟ್ಟ ತರಗನಹಳ್ಳಿ ತಕ್ಕನಹಳ್ಳಿ ಮಾರ್ಗದಲ್ಲಿ ಕಾಡಾನೆಗಳು ಸಂಚರಿಸುವ ಸಾಧ್ಯತೆಗಳಿದ್ದು ರೈತರೆಲ್ಲರೂ ಎಚ್ಚರಿಕೆಯಿಂದರಲು ಸೂಚನೆ ನೀಡಿದೆ. ಅಲ್ಲದೆ ಅರಣ್ಯ ಇಲಾಖೆ ಹಾಗು ಪೊಲೀಸರಿಂದಲೂ ಆನೆ ಸಾಗುವ ಮಾರ್ಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ.