ಬುಧವಾರ, ಫೆಬ್ರವರಿ 5, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ರಾಜ್ಯದಲ್ಲಿ ವಿಧಿ ವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆ

Twitter
Facebook
LinkedIn
WhatsApp
ರಾಜ್ಯದಲ್ಲಿ ವಿಧಿ ವಿಜ್ಞಾನ ವಿಶ್ವವಿದ್ಯಾಲಯ ಸ್ಥಾಪನೆ

ಚಿಕ್ಕನಾಯಕನಹಳ್ಳಿ :  ದೇಶದಲ್ಲೇ ನಂಬರ್‌ ಒನ್‌ ಸ್ಥಾನದಲ್ಲಿ ಕರ್ನಾಟಕ ಪೊಲೀಸ್‌ ಇಲಾಖೆ ಇದ್ದು, ಸ್ವಾತಂತ್ರ್ಯದ ನಂತರ ಪೊಲೀಸ್‌ ಇಲಾಖೆಯ ಠಾಣಾ ಕಟ್ಟಡಗಳು, ವಸತಿ ಗೃಹ ಕಟ್ಟಡಗಳ ನಿರ್ಮಾಣಕ್ಕೆ ಯಾವುದೇ ಸರ್ಕಾರ ಕ್ರಮ ಕೈಗೊಂಡಿಲ್ಲ. ಅದರೆ ನಮ್ಮ ಸರ್ಕಾರದಿಂದ ರಾಜ್ಯದಲ್ಲೇ 200ಕೋಟಿ ವೆಚ್ಚದಲ್ಲಿ 107 ಠಾಣ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದರು.

ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿರುವ ಆರಕ್ಷಕ ವೃತ್ತ ನಿರೀಕ್ಷಕರ ಕಚೇರಿ ಹಾಗೂ ಪೊಲೀಸ್‌ (Police)  ಉಪ ನಿರೀಕ್ಷಕರ ಕಚೇರಿಯ ಕಟ್ಟಡ ಉದ್ಘಾಟನೆಯ ಅಂಗವಾಗಿ ಕನ್ನಡ (Kannada) ಸಂಘದ ವೇದಿಕೆಯಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ತುಮಕೂರು ಜಿಲ್ಲೆಯಲ್ಲಿ ಐದು ಠಾಣಾ ಕಟ್ಟಡಗಳನ್ನು ನಿರ್ಮಿಸಲಾಗುತ್ತಿದೆ. ಅದರಲ್ಲಿ ಚಿಕ್ಕನಾಯಕನಹಳ್ಳಿ ತಾಲೂಕಿಗೆ ಎರಡು ಠಾಣೆಗಳನ್ನು ಕಟ್ಟಿಉದ್ಘಾಟಿಸಲಾಗಿದ್ದು ಸಾರ್ವಜನಿಕರು ಇದರ ಉಪಯೋಗವನ್ನು ಪಡೆಯಬಹುದಾಗಿದೆ ಎಂದರು.

ಸಾರ್ವಜನಿಕರ ಆಸ್ತಿ, ಮಾನ, ಪ್ರಾಣ ರಕ್ಷಣೆ ಮಾಡುವಲ್ಲಿ ಪೊಲೀಸರೊಂದಿಗೆ ಸಾರ್ವಜನಿಕರು ಸಹಕರಿಸಬೇಕಾಗಿದೆ. ರಾಜ್ಯದಲ್ಲಿ ಯಡಿಯೂರಪ್ಪ ಹಾಗೂ ಬೊಮ್ಮಾಯಿಯವರ ಅಧಿಕಾರವಧಿಯಲ್ಲಿ ಗೃಹ ಇಲಾಖೆಯನ್ನು ಬಲಪಡಿಸುವಂತಹ ಕೆಲಸವನ್ನು ಮಾಡುತ್ತಿದ್ದು ತುಮಕೂರು ಜಿಲ್ಲೆಯಲ್ಲಿ 60ಕೋಟಿ ವೆಚ್ಚದಲ್ಲಿ 204 ವಸತಿಗೃಹಗಳನ್ನು ನಿರ್ಮಿಸಲಾಗುತ್ತಿದೆ ಇದರೊಂದಿಗೆ ಅಗ್ನಿಶಾಮಕ ಠಾಣೆಯ ಕಟ್ಟಡಗಳು, ವಸತಿ ಗೃಹಗಳೊಂದಿಗೆ ಅಗತ್ಯ ವಾಹನಗಳನ್ನು ನೀಡುವ ಕೆಲಸ ಮಾಡುತ್ತಿದು,್ದ ಬಹುಮಹಡಿ ಕಟ್ಟಡದ ಅಗ್ನಿ ಆನಾಹುತಗಳಲ್ಲಿ ಜನರನ್ನು ಕಾಪಾಡುವ ಉದ್ದೇಶದಿಂದ ಸುಮಾರು 100ಮೀ. ಎತ್ತರಕ್ಕೆ ಹೋಗಿ ಬೆಂಕಿ ನಂದಿಸುವಂತಹ ವಾಹನವನ್ನು ಪಿನ್‌ಲ್ಯಾಂಡ್‌ನಿಂದ ತರಿಸಲಾಗಿದೆ ಎಂದರು.

ಜೈಲಿನಲ್ಲಿರುವಂತಹ ಖೈದಿಗಳಿಗೂ ಉತ್ತಮ ರೀತಿಯ ಆಹಾರ ಸೌಲಭ್ಯವನ್ನು ನೀಡಲಾಗುತ್ತಿದೆ. ಇಂದು ಬೇರೆ ದೇಶಗಳು ನಮ್ಮ ಯುವ ಜನತೆಯನ್ನು ಹಾಳುಮಾಡಲು ಮಾದಕ ವಸ್ತುಗಳ ಪ್ರಭಾವವನ್ನು ಬೀರುತ್ತಿದೆ. ಅದ್ದರಿಂದ ಇದನ್ನು ಹತ್ತಿಕ್ಕುವಂತಹ ಕೆಲಸವನ್ನು ನಮ್ಮ ಪೊಲೀಸರು ಮಾಡುತ್ತಿದ್ದಾರೆ. ಇದಕ್ಕೆ ನಮ್ಮ ಸಾರ್ವಜನಿಕರು ಕೈಜೊಡಿಸಬೇಕು. ರಾಜ್ಯದ ಒಂದು ಲಕ್ಷ ಹತ್ತುಸಾವಿರ ಪೊಲೀಸರ ಹಿತಕಾಪಾಡುವುದು ಇಲಾಖೆಯ ಜವಾಬ್ದಾರಿಯಾಗಿದೆ. ಜನರ ಆಸ್ತಿ, ಪ್ರಾಣ, ಮಾನ ಕಾಪಾಡುವುದು ಪೊಲೀಸ್‌ ಇಲಾಖೆಯ ಕರ್ತವ್ಯ. ಅನೇಕ ಪ್ರಕರಣಗಳು ಇತ್ಯರ್ಥವಾಗದಿರಲು ವಿಧಿವಿಜ್ಞಾನ ಪ್ರಯೋಗಾಲಯದ್ದೇ ಸಮಸ್ಯೆ, ಅದ್ದರಿಂದ ಮುಂದಿನ ದಿನಗಳಲ್ಲಿ ಕೇಂದ್ರದ ಅನುಮತಿ ಸಿಕ್ಕಿರುವಂತಹ ವಿಧಿವಿಜ್ಞಾನ ವಿಶ್ವವಿದ್ಯಾನಿಲಯ ಪ್ರಾರಂಭಿಸಲಾಗುವುದು. ಇದರೊಂದಿಗೆ ಸಂಚಾರಿ ಲ್ಯಾಬ್‌ಗಳನ್ನು ಪ್ರಾರಂಭ ಮಾಡಲಾಗುವುದು ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ನೂತನ ಪೊಲೀಸ್‌ ಕಟ್ಟಡಗಳನ್ನು ಸಾರ್ವಜನಿಕರು ಬಳಸಿಕೊಳ್ಳಬೇಕು. ಹಾಗೇ ಸಣ್ಣಪುಟ್ಟಗಲಾಟೆ ಗದ್ದಲಗಳಿಗೆ ಠಾಣೆಗಳಿಗೆ ಬರಬೇಡಿ. ಸಾಧ್ಯವಾದಷ್ಟುಈ ಠಾಣೆಗಳಿಗೆ ಬರುವುದನ್ನು ಕಡಿಮೆ ಮಾಡಿ. ಪದೇ ಪದೇ ಠಾಣೆಗೆ ಬಂದು ದಲ್ಲಾಳಿ ಕೆಲಸ ಮಾಡಬೇಡಿ. ನಿಮ್ಮ ಸಮಸ್ಯೆಗಳಿಗಷ್ಟೇ ಬನ್ನಿ. ಗಣಿಬಾಧಿತ ಪ್ರದೇಶಾಭಿವೃದ್ಧಿ ಮಾಡಲು 1600ಕೋಟಿ ಹಣ ಬಿಡುಗಡೆಯಾಗಿದು

ಇದರಲ್ಲಿ ತೆರೆದ ಚಾನಲ್‌ಗಳನ್ನು ಮುಚ್ಚಿಸಿ ನೀರು ಹರಿಸುವುದು ಹಾಗೂ ಬಳ್ಳಾರಿಯಿಂದ ಮೈಸೂರಿನವರೆಗೆ ರೈಲು ಹಳಿಯನ್ನು ಹಾಕಿಸುವ ಉದ್ದೇಶಕ್ಕೆ ಬಳಸಲು ವರದಿ ಸಿದ್ದಪಡಿಸಲಾಗುತ್ತಿದೆ. ಚುನಾವಣೆ ಹತ್ತಿರ ಬಂದ ಹಾಗೆ ಇಲ್ಲದ ವ್ಯಕ್ತಿಗತ ಅಭಿವೃದ್ಧಿ ವಿಚಾರಗಳು ಚರ್ಚಿಸಲ್ಪಡುತ್ತವೆ. ಅದರೆ ಅದನ್ನು ಬಿಟ್ಟು ಒಟ್ಟಾರೆ ಅಭಿವೃದ್ಧಿಯ ಬಗ್ಗೆ ಮಾತನಾಡಬೇಕಾಗಿದ್ದು, ರಾಜ್ಯದಲ್ಲೇ ಬಗರ್‌ಹುಕುಂ ಸಾಗುವಳಿ ಚೀಟಿಯನ್ನು ನೀಡಿರುವ ಕ್ಷೇತ್ರವಾಗಿದ್ದು ನಮೂನೆ 53, 54 ಅರ್ಜಿಗಳನ್ನು ಪರೀಶಿಲಿಸಲಾಗಿದೆ ಎಂದರು.

ಪ್ರಸ್ತಾವಿಕ ನುಡಿಗಳನ್ನಾಡಿದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ರಾಹುಲ್‌ಕುಮಾರ್‌ ಶಹಾಪುರ್‌ವಾಡ್‌, ಜಿಲ್ಲೆಯಲ್ಲಿ ಐದು ನೂತನ ಕಟ್ಟಡಗಳು ನಿರ್ಮಾಣವಾಗುತ್ತಿದೆ. ಚಿಕ್ಕನಾಯಕನಹಳ್ಳಿ, ಹುಳಿಯಾರಿನ ಕಟ್ಟಡಗಳ ನಿರ್ಮಾಣಕ್ಕೆ 11 ತಿಂಗಳ ಅವಧಿ ಇದ್ದು, ಅದಕ್ಕು ಮುಂಚಿತವಾಗಿಯೇ ನಿರ್ಮಾಣಗೊಂಡಿವೆ. ಅದರಂತೆ ಶಿರಾ, ತುಮಕೂರುಗಳಲ್ಲಿ ಪೊಲೀಸ್‌ಠಾಣಾ ಕಟ್ಟಡಗಳು ನಿರ್ಮಾಣವಾಗುತ್ತಿವೆ. ಇಂದು ಉದ್ಘಾಟನೆಗೊಂಡ ಕಟ್ಟಡವು 2.60 ಕೋಟಿ ವೆಚ್ಚದಲ್ಲಿ ಗ್ರೇಡ್‌ 4 ಕಟ್ಟಡ ನಿರ್ಮಿಸಲಾಗಿದ್ದು ಇದರೊಂದಿಗೆ 14 ಕಡೆಗಳಲ್ಲಿ ಕಟ್ಟಡಗಳ ಕಾಮಗಾರಿಗಳು ನಡೆಯುತ್ತಿವೆ ಎಂದರು.

ಈ ಸಂದರ್ಭದಲ್ಲಿ ಪುರಸಭಾದ್ಯಕ್ಷ ಪುಷ್ಪಾ ಹನುಮಂತರಾಜು, ತಹಸೀಲ್ದಾರ್‌ ಬಿ.ತೇಜಸ್ವೀನಿ, ಪುರಸಭಾ ಉಪಾಧ್ಯಕ್ಷೆ ಲಕ್ಷ್ಮೇ, ಸದಸ್ಯರಾದ ಸಿ.ಜೆ.ಮಂಜುನಾಥ್‌,ಮಲ್ಲಿಕಾಜುನ್‌, ಬಾಬು, ಸಿ.ಬಸವರಾಜು, ನಾಮಿನಿ ಸದಸ್ಯರುಗಳಾದ ದೇವರಾಜು, ಸಿ.ಮಲ್ಲಿಕಾರ್ಜುನಸ್ವಾಮಿ, ಶ್ಯಾಮ್‌, ಎಎಸ್‌ಪಿ ಉದೇಶ ಟಿ.ಜೆ, ತಿಪಟೂರು ಡಿವೈಎಸ್‌ಪಿ ಸಿದ್ದಾರ್ಥ ಗೋಯಲ್‌, ಸಿಪಿಐ ನಿರ್ಮಲ, ಆರಕ್ಷಕ ಉಪನಿರೀಕ್ಷಕ ಗಣೇಶ್‌, ಮುಖ್ಯ ಅಭಿಯಂತರ ಸಂಜೀವ್‌ ವಿ.ಮರಡಿ ಸೇರಿದಂತೆ ಇತರರು ಇದ್ದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಮುರುಡೇಶ್ವರ

ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!

ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ

ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ Twitter Facebook LinkedIn WhatsApp ಮಂಗಳೂರು:  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಂಗಲ್‌ ಚಂಡಮಾರುತದ ಪರಿಣಾಮ

ಅಂಕಣ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist