ಬುಧವಾರ, ಜೂನ್ 26, 2024
ಸಿಬಿಐನಿಂದ ಸಿಎಂ ಅರವಿಂದ್​ ಕೇಜ್ರಿವಾಲ್​ ಬಂಧನ..!-ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಾಳೆ 27 ಜೂನ್ ರಂದು ಶಾಲಾ ಮಕ್ಕಳಿಗೆ ರಜೆ ಘೋಷಣೆ-Haridwar: 13 ವರ್ಷದ ಬಾಲಕಿ ಸಾಮೂಹಿಕ ಅತ್ಯಾಚಾರ; ಹರಿದ್ವಾರ ಹೆದ್ದಾರಿಯಲ್ಲಿ ಮೃತದೇಹ ಪತ್ತೆ-ಹಾಲಿನ ದರ ಏರಿಕೆ ಬಳಿಕ ಹೋಟೆಲ್ ಗಳಲ್ಲಿ ಟಿ- ಕಾಫಿ ದರವೂ ಏರಿಕೆ ಸಾಧ್ಯತೆ..!-Instagram ಪೋಸ್ಟ್‌ಗಳನ್ನು ಅಳಿಸಿ, ವಿಚ್ಛೇದನದ ವದಂತಿಗಳನ್ನು ಹುಟ್ಟುಹಾಕಿದ ನಟ ಜಯಂ ರವಿ ಪತ್ನಿ?-ಚಿಕನ್ ಕಬಾಬ್ ಗೆ ಕೃತಕ ಕಲರ್ ಬಳಸಿದರೆ 7 ವರ್ಷ ಜೈಲು ಶಿಕ್ಷೆ ಮತ್ತು 10 ಲಕ್ಷದವರೆಗೆ ದಂಡ ಫಿಕ್ಸ್..!-Mangalore : ಉಳ್ಳಾಲದಲ್ಲಿ ಗೋಡೆ ಕುಸಿದು ಮಕ್ಕಳ ಸಹಿತ ನಾಲ್ವರು ಬಲಿ-Tzachi Hanegbi - ಗಾಜಾದಲ್ಲಿ ಹಮಾಸ್ ಸರ್ಕಾರವನ್ನು ಬದಲಿಸುವ ಯೋಜನೆಯನ್ನು ಇಸ್ರೇಲ್ ಹೊರತರಲಿದೆ-ಲೋಕಸಭೆ ವಿರೋಧ ಪಕ್ಷದ ನಾಯಕನಾಗಿ ರಾಹುಲ್ ಗಾಂಧಿ ಆಯ್ಕೆ.!-ಅಯೋಧ್ಯೆಯಲ್ಲಿ ಮೊದಲ ಮಳೆಗೆ ಸೋರಿದ ರಾಮ ಮಂದಿರದ ಗರ್ಭಗುಡಿಯ ಮೇಲ್ಛಾವಣಿ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ರಾಜ್ಯದಲ್ಲಿ ಜನವರಿ 26ರಿಂದ ಜನಸೇವಕ ಯೋಜನೆ ಜಾರಿ- ಸಿಎಂ ಬೊಮ್ಮಾಯಿ

Twitter
Facebook
LinkedIn
WhatsApp
ರಾಜ್ಯದಲ್ಲಿ ಜನವರಿ 26ರಿಂದ ಜನಸೇವಕ ಯೋಜನೆ ಜಾರಿ- ಸಿಎಂ ಬೊಮ್ಮಾಯಿ

ಹುಬ್ಬಳ್ಳಿ: ರಾಜ್ಯದಲ್ಲಿ 2022ರ ಜನವರಿ 26ರಿಂದ ಜನಸೇವಕ ಯೋಜನೆ ಜಾರಿಗೆ ತರಲಾಗುವುದು ಎಂದು ಸಿಎಂ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, “ರಾಜ್ಯ ಸರ್ಕಾರ ಪೆಟ್ರೋಲ್‌‌ ಹಾಗೂ ಡೀಸೆಲ್‌‌ ದರದಲ್ಲಿ ತಲಾ 7 ರೂ. ಇಳಿಕೆ ಮಾಡಲು ತೀರ್ಮಾನಿಸಿದೆ” ಎಂದಿದ್ದಾರೆ.

“ರಾಜ್ಯದಲ್ಲಿ ಪೆಟ್ರೋಲ್‌‌ ಹಾಗೂ ಡೀಸೆಲ್‌ ದರ ತಲಾ 7 ರೂ. ಗೆ ಇಳಿಸುತ್ತೇವೆ. ಬೆಲೆ ಇಳಿಕೆಯ ಪರಿಣಾಮ ಸರ್ಕಾರದ ಬೊಕ್ಕಸಕ್ಕೆ 2,100 ಕೋಟಿ. ರೂ ಹೊರೆಯಾಗಲಿದೆ. ಆದರೂ ಕೂಡಾ ತೀರ್ಮಾನ ಕೈಗೊಳ್ಳಲಾಗಿದೆ. ಕೇಂದ್ರ ಸರ್ಕಾರದೊಂದಿಗೆ ರಾಜ್ಯ ಸರ್ಕಾರವೂ ಪೆಟ್ರೋಲ್‌ ಹಾಗೂ ಡೀಸೆಲ್‌‌ ಬೆಲೆ ಇಳಿಸಿದೆ. ಇಂದು ಸಂಜೆಯಿಂದಲೇ ದರ ಇಳಿಕೆಯಾಗಲಿದೆ” ಎಂದು ತಿಳಿಸಿದ್ದಾರೆ.
“ಈ ಮೂಲಕ ರಾಜ್ಯದಲ್ಲಿ ಪೆಟ್ರೋಲ್‌ ದರ ಅಂದಾಜು 95.50 ರೂ. ಹಾಗೂ ಡೀಸೆಲ್ ದರ ಅಂದಾಜು 81.50 ರೂ.ಆಗುವ ನಿರೀಕ್ಷೆಯಿದೆ” ಎಂದಿದ್ದಾರೆ.
“ನನಗೆ ಹೈಕಮಾಂಡ್‌ನಿಂದ ಯಾವುದೇ ಬುಲಾವ್‌ ಬಂದಿಲ್ಲ. ಸದ್ಯ ಸಂಪುಟ ವಿಸ್ತರಣೆ ಇಲ್ಲ” ಎಂದು ತಿಳಿಸಿದ್ದಾರೆ.

ನಮ್ಮನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ

ಕರಾವಳಿ

ಅಂಕಣ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು