ಶುಕ್ರವಾರ, ಮೇ 17, 2024
ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ-Gold Rate : ಚಿನ್ನದ ಬೆಲೆ ಮತ್ತಷ್ಟು ದುಬಾರಿ.!-ಅಮಿತ್ ಶಾ ಪ್ರಧಾನಿಯಾಗಲು ವೇದಿಕೆ ಸಜ್ಜಾಗಿದೆ; ಹೇಳಿಕೆ ಪುನರುಚ್ಚರಿಸಿದ ಕೇಜ್ರಿವಾಲ್..!-ಮನೆಯ ಬಾತ್ ರೂಂ ನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ.!-ಪತ್ನಿಗೆ ವಿಡಿಯೋ ಕಾಲ್ ಮಾಡಿ ನೇಣು ಬಿಗಿದುಕೊಂಡಂತೆ ಹೆದರಿಸುವಾಗಲೇ ಪತಿ ಸಾವು..!-ಮೇ 31 ರಂದು ಕೇರಳಕ್ಕೆ ಪ್ರವೇಶಿಸಲಿದೆ ನೈರುತ್ಯ ಮುಂಗಾರು.!-ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೈದ ಸಚಿನ್ ತೆಂಡೂಲ್ಕರ್ ಸೆಕ್ಯುರಿಟಿ ಗಾರ್ಡ್.!-Gold Price: ಆಭರಣ ಪ್ರಿಯರಿಗೆ ಇಂದಿನ ಚಿನ್ನ - ಬೆಳ್ಳಿಯ ದರ ಹೇಗಿದೆ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

“ಯೋಗಿ ಜೀ ನನ್ನನು ಕ್ಷಮಿಸಿ”ಪೋಸ್ಟರ್‌ ಹಿಡಿದು ಪೊಲೀಸರಿಗೆ ಶರಣಾದ ಕಳ್ಳ

Twitter
Facebook
LinkedIn
WhatsApp
hr 171122 death 10

ಲಕ್ನೋ: ಕೆಲವರಿಗೆ ತಪ್ಪು ಮಾಡಿದ ಬಳಿಕ ಪಶ್ಚಾತ್ತಾಪ ಆಗುವುದುಂಟು. ಇಲ್ಲೊಬ್ಬ ವ್ಯಕ್ತಿ ಕಳ್ಳತನವನ್ನೇ ವೃತ್ತಿಯಾಗಿಸಿಕೊಂಡು ಕೊನೆಗೆ ಜೀವ ಭಯದಿಂದ ಪೊಲೀಸ್‌ ಠಾಣೆಗೆ ಬಂದು ಶರಣಾಗಿದ್ದಾನೆ.

ಅಂಕುರ್ ಅಲಿಯಾಸ್‌ ರಾಜಾ ಎನ್ನುವವ ಕಳೆದ ಕೆಲ ಸಮಯದಿಂದ ನಾನಾ ರೀತಿಯ ಕಳ್ಳತನವನ್ನು ಮಾಡುತ್ತಿದ್ದ. ಬೈಕ್‌ ಕಳ್ಳತನ ಗ್ಯಾಂಗ್‌ ವೊಂದರಲ್ಲಿ ಗುರುತಿಸಿಕೊಂಡಿದ್ದ. ಠಾಣೆಯಲ್ಲಿ ಈತನ ವಿರುದ್ದ ಹಲವು ಪ್ರಕರಣಗಳು ದಾಖಲಾಗಿದ್ದರೂ, ಯಾವುದೇ ಭಯ – ಭೀತಿಯಿಲ್ಲದೆ ಕಳ್ಳತನವ್ನೇ ತನ್ನ ವೃತ್ತಿಯಾಗಿಸಿಕೊಂಡಿದ್ದ.

ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾದ ಬಳಿಕ ಕಾನೂನು ಕ್ರಮದಲ್ಲಿ ಹತ್ತಾರು ಕಠಿಣ ನಿಯಮಗಳನ್ನು ಆಳವಡಿಸಿಕೊಂಡಿದ್ದಾರೆ. ಆರೋಪಿಗಳ ಮನೆ ಧ್ವಂಸ, ಎನ್‌ ಕೌಂಟರ್‌ ನಂತಹ ಕ್ರಮಗಳು ಯುಪಿಯಲ್ಲಿ ಜಾರಿಯಲ್ಲಿವೆ.

ಇತ್ತೀಚೆಗೆ ಪೊಲೀಸರು ಹಾಗೂ ಗ್ಯಾಂಗ್‌ ವೊಂದರ ನಡುವೆ ಎನ್‌ ಕೌಂಟರ್‌ ಆಗಿತ್ತು. ಈ ಗ್ಯಾಂಗ್‌ ನ ಇಬ್ಬರನ್ನು ಪೊಲೀಸರು ಬಂಧಿಸಿದ್ದರು.

ಇದೇ ಕಾರಣದಿಂದ ಉತ್ತರ ಪ್ರದೇಶದ ಮುಜಾಫರ್‌ನಗರ ಜಿಲ್ಲೆಯ ಮನ್ಸೂರ್‌ಪುರ ಪೊಲೀಸ್ ಠಾಣೆಗೆ ಅಂಕುರ್ ಅಲಿಯಾಸ್‌ ರಾಜಾ ಪೋಸ್ಟರ್‌ ವೊಂದನ್ನು ಕೈಯಲ್ಲಿ ಹಿಡಿದುಕೊಂಡು ಬಂದಿದ್ದಾನೆ. ಆ ಪೋಸ್ಟರ್‌ ನಲ್ಲಿ ʼನನ್ನನು ಕ್ಷಮಿಸಿ ಯೋಗಿಜೀ, ನಾನು ತಪ್ಪು ಮಾಡಿದೆʼ ಎಂದು ಬರೆದುಕೊಂಡು ಪೊಲೀಸರಿಗೆ ಶರಣಾಗಿದ್ದಾರೆ. ಇನ್ಮುಂದೆ ನಾನೆಂದೂ ಅಪರಾಧವನ್ನು ಎಸಗಲ್ಲ ಎಂದು ಪೊಲೀಸರ ಮುಂದೆ ಆರೋಪಿ ಹೇಳಿದ್ದಾನೆ.

ಕೊಲೆ ಪ್ರಕರಣ ಲೂಟಿ ಪ್ರಕರಣದಲ್ಲಿ ಈತನ ವಿರುದ್ಧ ಹಲವಾರು ಪ್ರಕರಣಗಳು ದಾಖಲಾಗಿತ್ತು ಎಂದು ಪೊಲೀಸರು ಹೇಳಿದ್ದಾರೆ.

ಯೋಗಿ ಯುಪಿಯಲ್ಲಿ ಆಡಳಿತ ಚುಕ್ಕಾಣಿ ಹಿಡಿದ ಬಳಿಕ 9 ಸಾವಿರಕ್ಕೂ ಹೆಚ್ಚಿನ ಎನ್‌ ಕೌಂಟರ್‌ ಗಳು ನಡೆದಿದೆ. ಪೊಲೀಸ್ ದಾಖಲೆಗಳ ಪ್ರಕಾರ, 160 ಶಂಕಿತ ಕ್ರಿಮಿನಲ್‌ಗಳು ಎನ್‌ಕೌಂಟರ್‌ಗಳಲ್ಲಿ ಕೊಲ್ಲಲ್ಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ