ಯುವತಿಗೆ ಮೆಸೇಜ್ ಮಾಡಿದಕ್ಕೆ ಸಹೋದರನಿಂದ ಯುವಕನ ಮೇಲೆ ಹಲ್ಲೆ
Twitter
Facebook
LinkedIn
WhatsApp
ಬೆಂಗಳೂರು: ಯುವತಿಗೆ ಮೆಸೇಜ್ ಮಾಡಿದ ಎಂದು ಯುವತಿಯ ಸಹೋದರ ಯುವಕನ ಮೇಲೆ ಚಾಕುವಿನಿಂದ ಹಲ್ಲೆ ನಡೆಸಿ ಪರಾರಿಯಾಗಿರುವ ಘಟನೆ ನಡೆದಿದೆ. ಗೋವಿಂದರಾಜನಗರದಲ್ಲಿ ಸಿದ್ಧಾರ್ಥ್ ಎಂಬ ಯುವಕನ ಮೇಲೆ ಚೇತನ್ ಮತ್ತು ಆತನ ಗೆಳೆಯರು ಹಲ್ಲೆ ನಡೆಸಿ ಕೃತ್ಯ ಎಸಗಿದ್ದಾರೆ. ನಡು ರಸ್ತೆಯಲ್ಲಿ ಸಿದ್ಧಾರ್ಥ್ನನ್ನು ನೆಲಕ್ಕೆ ಬೀಳಿಸಿ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಹಲ್ಲೆಯ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಸಿದ್ಧಾರ್ಥ್, ಕೀರ್ತಿ ಎಂಬ ಯುವತಿಯ ಜೊತೆ ಕಳೆದ ಒಂದು ವರ್ಷದಿಂದ ಇನ್ಸ್ಟಾಗ್ರಾಮ್ನಲ್ಲಿ ಚಾಟ್ ಮಾಡ್ತಿದ್ದ. ಈ ವಿಚಾರ ತಿಳಿದ ಯುವತಿ ಅಣ್ಣ ಚೇತನ್, ಸಿದ್ಧಾರ್ಥ್ಗೆ ಕರೆ ಮಾಡಿ ನಿಂದಿಸಿ ಮಾತನಾಡಬೇಕು ಸಿಗು ಎಂದಿದ್ದಾನೆ. ಅದರಂತೆ ಸಿದ್ಧಾರ್ಥ್ ಪಿಜಿ ಬಳಿ ಚೇತನ್ ಮತ್ತು ಆತನ ಗೆಳೆಯರು ಬಂದಿದ್ದಾರೆ. ಬಳಿಕ ಮಾತುಕತೆ ನಡೆದಿದ್ದು ಚೇತನ್ ಮತ್ತು ಆತನ ಸ್ನೇಹಿತರು ಹಲ್ಲೆ ಮಾಡಿ ಎಸ್ಕೆಪ್ ಆಗಿದ್ದಾರೆ. ಹಲ್ಲೆಗೊಳಗಾದ ಸಿದ್ಧಾರ್ಥ್ ಗೋವಿಂದರಾಜ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.