ಭಾನುವಾರ, ಮೇ 19, 2024
ಬಿಜೆಪಿಯ ಗಟ್ಟಿ ವಲಯಗಳಲ್ಲಿ ಒಮ್ಮಿಂದೊಮ್ಮೆಲೆ ನರೇಂದ್ರ ಮೋದಿ ಜನಪ್ರಿಯತೆ ಕುಸಿದು ಹೋಯಿತೇ?-ಮ್ಯಾಕ್ಸ್ ವೆಲ್ ಗ್ರೇಟ್ ಕಮ್ ಬ್ಯಾಕ್ ;ಗೆದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು-Rain Alert: ಕರಾವಳಿ ಸೇರಿದಂತೆ ರಾಜ್ಯದ ಹಲವೆಡೆ ಗುಡುಗು ಸಹಿತ ಮಳೆ ಮುನ್ಸೂಚನೆ.!-ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ..!-ಇದು ಆರ್ಸಿಬಿಯ ಹೊಸ ಅಧ್ಯಾಯ; ರೋಚಕ ಪಂದ್ಯದಲ್ಲಿ ಸಿಎಸ್​​ಕೆ ಮಣಿಸಿ ಪ್ಲೇಆಫ್‌ಗೇರಿದ ಆರ್​ಸಿಬಿ..!-ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?-ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಮೋದಿ ಶಾಂತಿ ಮಂತ್ರಕ್ಕೆ G20 ಧ್ವನಿ: ಮ್ಯಾಂಗ್ರೋವ್‌ ಸಸಿ ನೆಟ್ಟ ಪ್ರಧಾನಿ ಮೋದಿ

Twitter
Facebook
LinkedIn
WhatsApp
ಮೋದಿ ಶಾಂತಿ ಮಂತ್ರಕ್ಕೆ G20 ಧ್ವನಿ: ಮ್ಯಾಂಗ್ರೋವ್‌ ಸಸಿ ನೆಟ್ಟ ಪ್ರಧಾನಿ ಮೋದಿ

ಬಾಲಿ: ಇಂಡೋನೇಷ್ಯಾದ (Indonesia) ಬಾಲಿಯಲ್ಲಿ (Bali) 2 ದಿನಗಳ ಮಹತ್ವದ ಜಿ-20 ಶೃಂಗಸಭೆ (G 20 Summit) ಬುಧವಾರ ಮುಕ್ತಾಯವಾಗಿದ್ದು, ‘ರಷ್ಯಾ-ಉಕ್ರೇನ್‌ ನಡುವಿನ ಯುದ್ಧ ನಿಲ್ಲಬೇಕು’ (Russia – Ukraine War) ಎಂಬ ಘೋಷಣೆ ಮಾಡಿದೆ. ರಷ್ಯಾ (Russia) ಕೂಡ ಜಿ-20 ಸದಸ್ಯ ದೇಶವಾಗಿದ್ದರೂ, ಯುದ್ಧದ (War) ವಿರುದ್ಧ ಇತರ ಸದಸ್ಯ ದೇಶಗಳು ನಿರ್ಣಯ ಕೈಗೊಂಡಿದ್ದು ಮಹತ್ವ ಪಡೆದಿದೆ. ಸಮರದ ವಿರುದ್ಧ ಭಾರತದ ಪ್ರಧಾನಿ ನರೇಂದ್ರ ಮೋದಿ (PM Narendra Modi) ನೀಡಿದ ಕರೆಗೆ ಅನುಗುಣವಾಗಿ ಘೋಷಣೆ ಹೊರಬಿದ್ದಿದೆ.
‘ಉಕ್ರೇನ್‌-ರಷ್ಯಾ ನಡುವಿನ ಯುದ್ಧ ಕೂಡಲೇ ನಿಲ್ಲಬೇಕು. ಇಂದಿನ ಯುಗ ಯುದ್ಧ ಮಾಡುವಂಥದ್ದಲ್ಲ. ಬಿಕ್ಕಟ್ಟು ಇತ್ಯರ್ಥಕ್ಕೆ ರಾಜತಾಂತ್ರಿಕತೆ, ಮಾತುಕತೆ ಮಹತದ್ದಾಗಿದೆ. ಹೀಗಾಗಿ ಶಾಂತಿಗಾಗಿ ಜಿ-20 ದೇಶಗಳು ಮನವಿ ಮಾಡುತ್ತವೆ’ ಎಂದು ಶೃಂಗದ ಘೋಷಣೆಯಲ್ಲಿ ತಿಳಿಸಲಾಗಿದೆ. ‘ಅಣ್ವಸ್ತ್ರ ಬೆದರಿಕೆ ಹಾಕುವುದು ತರವಲ್ಲ’ ಎಂದೂ ಹೇಳುವ ಮೂಲಕ ಅಣು ಯುದ್ಧದ ಮಾತನಾಡಿದ್ದ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಹಾಗೂ ಇತರ ರಷ್ಯಾ ಸಚಿವರ ಬಗ್ಗೆ ಪರೋಕ್ಷವಾಗಿ ಜಿ-20 ಹರಿಹಾಯ್ದಿದೆ.

ಅಲ್ಲದೆ, ‘ಉಕ್ರೇನ್‌ ಮೇಲೆ ರಷ್ಯಾ ದಂಡೆತ್ತಿ ಹೋಗಿದ್ದು ಅಕ್ರಮ, ಅಸಮರ್ಥನೀಯ, ಅಪ್ರಚೋದಿತ’ ಎಂದು ಕಿಡಿಕಾರಿರುವ ಶೃಂಗದ ಘೋಷಣೆ, ‘ಈ ಯುದ್ಧ ಇಂದು ಜಾಗತಿಕ ಆರ್ಥಿಕ ಚೇತರಿಕೆಗೆ ಹೊಡೆತ ನೀಡುತ್ತಿದೆ’ ಎಂದೂ ಆತಂಕ ವ್ಯಕ್ತಪಡಿಸಿದೆ.

ಭಾರತದ ಪಾತ್ರ ಪ್ರಮುಖವಾದ್ದು:
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಸೆಪ್ಟೆಂಬರ್‌ನಲ್ಲಿ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ಗೆ ‘ಇಂದು ಯುದ್ಧದ ಯುಗವಲ್ಲ’ ಎಂದಿದ್ದರು. ಅಲ್ಲದೆ, ಮಂಗಳವಾರವಷ್ಟೇ ಬಾಲಿ ಶೃಂಗದಲ್ಲಿ ಕದವಿರಾಮಕ್ಕೆ ಕರೆ ನೀಡಿದ್ದರು. ಅವರ ಆಶಯಕ್ಕೆ ಅನುಗುಣವಾಗೇ ಜಿ-20 ಶೃಂಗದ ಗೊತ್ತುವಳಿಯ ಘೋಷಣೆ ಹೊರಬಿದ್ದಿದೆ. ಘೋಷಣೆಗಳನ್ನು ರೂಪುಗೊಳಿಸುವಲ್ಲಿ ಭಾರತ ಪ್ರಮುಖ ಪಾತ್ರ ವಹಿಸಿತ್ತು ಎಂದು ಮೂಲಗಳು ಹೇಳಿವೆ.

ಜಿ-20 ಜಂಟಿ ಘೋಷಣೆ
– ಉಕ್ರೇನ್‌-ರಷ್ಯಾ ನಡುವಿನ ಯುದ್ಧ ಕೂಡಲೇ ನಿಲ್ಲಬೇಕು
– ಇಂದಿನ ಯುಗ ಯುದ್ಧ ಮಾಡುವಂಥದ್ದಲ್ಲ
– ಅಣ್ವಸ್ತ್ರ ಬೆದರಿಕೆ ಹಾಕುವುದು ಅಥವಾ ಅಣ್ವಸ್ತ್ರ ಬಳಕೆ ತರವಲ್ಲ
– ಬಿಕ್ಕಟ್ಟು ಇತ್ಯರ್ಥಕ್ಕೆ ರಾಜತಾಂತ್ರಿಕತೆ, ಮಾತುಕತೆ ಮಹತ್ವದ್ದು
– ಶಾಂತಿಗಾಗಿ ಜಿ-20 ದೇಶಗಳು ಮನವಿ ಮಾಡುತ್ತವೆ
– ಉಕ್ರೇನ್‌ ಮೇಲೆ ರಷ್ಯಾ ದಂಡೆತ್ತಿ ಹೋಗಿದ್ದು ಅಕ್ರಮ, ಅಸಮರ್ಥನೀಯ, ಅಪ್ರಚೋದಿತ
– ಈ ಯುದ್ಧ ಇಂದು ಜಾಗತಿಕ ಆರ್ಥಿಕ ಚೇತರಿಕೆಗೆ ಹೊಡೆತ ನೀಡುತ್ತಿದೆ

ಮೋದಿಗೆ ಬೈಡೆನ್‌ ಸೆಲ್ಯೂಟ್‌!
ಮಂಗಳವಾರ ಜಿ20 ಶೃಂಗದ ವೇಳೆ ಮೋದಿಯನ್ನು ಆತ್ಮೀಯವಾಗಿ ಮಾತನಾಡಿಸಿ ಗಮನ ಸೆಳೆದಿದ್ದ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌, ಬುಧವಾರ ಮೋದಿ ನೋಡಿ ದೂರದಿಂದಲೇ ಸೆಲ್ಯೂಟ್‌ ಮಾಡಿದ ಘಟನೆ ನಡೆದಿದೆ. ಬಾಲಿಯ ಅರಣ್ಯ ಪ್ರದೇಶದಲ್ಲಿ ಮ್ಯಾನ್‌ಗ್ರೂವ್‌ ಗಿಡಗಳನ್ನು ನೆಡಲು ಜಾಗತಿಕ ನಾಯಕರು ಆಗಮಿಸಿದ್ದರು. ಈ ಕಾರ್ಯಕ್ರಮಕ್ಕೆ ಮೊದಲೇ ಆಗಮಿಸಿದ್ದ ಮೋದಿ ಕುರ್ಚಿಯಲ್ಲಿ ಆಸೀನರಾಗಿದ್ದರು. ಬಳಿಕ ಕಾರ್ಯಕ್ರಮದ ಸ್ಥಳಕ್ಕೆ ಬಂದ ಬೈಡೆನ್‌ ದೂರದಿಂದ ಮೋದಿ ನೋಡಿ ನಗುತ್ತಲೇ ಸಲ್ಯೂಟ್‌ ಮಾಡಿದರು. ಇದಕ್ಕೆ ಅತ್ತ ಕಡೆಯಿಂದ ಮೋದಿ ಕೂಡಾ ಸೆಲ್ಯೂಟ್‌ ಮಾಡಿ ತಮ್ಮ ನಡುವಿನ ಸ್ನೇಹವನ್ನು ಪ್ರದರ್ಶಿಸಿದರು.

ಮ್ಯಾಂಗ್ರೋವ್‌ ಸಸಿ ನೆಟ್ಟ ಪ್ರಧಾನಿ ಮೋದಿ
ಪ್ರಧಾನಿ ನರೇಂದ್ರ ಮೋದಿ ಬುಧವಾರ ವಿಶ್ವನಾಯಕರ ಜೊತೆ ಸೇರಿ ಬಾಲಿಯ ಅತಿದೊಡ್ಡ ಮ್ಯಾಂಗ್ರೋವ್‌ ಅರಣ್ಯ ಪ್ರದೇಶದಲ್ಲಿ ಮ್ಯಾಂಗ್ರೋವ್‌ ಸಸಿಗಳನ್ನು ನೆಟ್ಟರು. ಈ ಮೂಲಕ ಜಾಗತಿಕ ಹವಾಮಾನ ಬದಲಾವಣೆಯ ವಿರುದ್ಧ ಸಂದೇಶ ಸಾರಿದರು. ಮ್ಯಾಂಗ್ರೋವ್‌ ಕಾಡುಗಳು ಜಗತ್ತನ್ನು ಸಂರಕ್ಷಿಸುವಲ್ಲಿ ಮಹತ್ವದ ಪಾತ್ರವನ್ನು ಹೊಂದಿದೆ. ಭಾರತವು ಇಂಡೋನೇಷ್ಯಾ ಹಾಗು ಯುಎಇ ದೇಶಗಳೊಂದಿಗೆ ಮ್ಯಾಂಗ್ರೋವ್‌ ಅಲಯನ್ಸ್‌ ಫಾರ್‌ ಕ್ಲೈಮೆಟ್‌ (ಎಂಎಸಿ) ಅನ್ನು ಸೇರಿದೆ. ಭಾರತದ 5000 ಚದರ ಕಿ.ಮಿ. ವ್ಯಾಪ್ತಿಯಲ್ಲಿ 50ಕಿಂತ ಹೆಚ್ಚಿನ ಮ್ಯಾಂಗ್ರೋವ್‌ ತಳಿಗಳನ್ನು ನೋಡಬಹುದು, ಜಗತ್ತಿನಲ್ಲಿ ಕಾರ್ಬನ್‌ ಹೆಜ್ಜೆ ಗುರುತು ಕಡಿಮೆ ಮಾಡುವಲ್ಲಿ ಮ್ಯಾಂಗ್ರೋವ್‌ ಮಹತ್ವದ ಪಾತ್ರವನ್ನು ವಹಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?

ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್?

ಕಾಂಗ್ರೆಸ್ ನ ಅ೦ತರಿಕ ವರದಿ ಬಹಿರಂಗ: ಅಲ್ಪಸಂಖ್ಯಾತರ ಅತ್ಯಧಿಕ ಮತದಾನದ ಹೊರತಾಗಿಯೂ ತಂತ್ರಗಾರಿಕೆ ಇಲ್ಲದೆ ಮಂಗಳೂರು ಲೋಕಸಭೆಯಲ್ಲಿ ಎಡವಿತೇ ಕಾಂಗ್ರೆಸ್? Twitter Facebook LinkedIn WhatsApp ಮಂಗಳೂರು: ಕೆಪಿಸಿಸಿಯ ಆಂತರಿಕ ಸರ್ವೆಯ ವರದಿ ಬಹಿರಂಗವಾಗಿದ್ದು,

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.! Twitter Facebook LinkedIn WhatsApp ಪುತ್ತೂರು : ವರ (Groom) ಬೇಕು, ವಧು (Bride) ಬೇಕಾಗಿದ್ದಾರೆ ಎಂಬಂತಹ ಅನೇಕ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ

ಅಂಕಣ