ಮೊದಲ ಬಾರಿಗೆ 2ನೇ ಪತ್ನಿ ಜೊತೆ ಕಾಣಿಸಿಕೊಂಡ ನಟ ಪ್ರಭುದೇವ!
ಇಂಡಿಯನ್ ಮೈಕಲ್ ಜಾಕ್ಸನ್ ಪ್ರಭುದೇವ ಅವರು ಇದೀಗ ವೈಯಕ್ತಿಕ ಬದುಕಿನ ವಿಚಾರವಾಗಿ ಸುದ್ದಿಯಲ್ಲಿದ್ದಾರೆ. ಮೊದಲ ಬಾರಿಗೆ 2ನೇ ಪತ್ನಿ ಜೊತೆ ಪ್ರಭುದೇವ ಕಾಣಿಸಿಕೊಂಡಿದ್ದಾರೆ. ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಕನ್ನಡದ ಪ್ರತಿಭೆ ಸ್ಟಾರ್ ನಟ ಪ್ರಭುದೇವ ಅವರು ಭಾರತೀಯ ಚಿತ್ರರಂಗದಲ್ಲಿ ಬೇಡಿಕೆ ಕಲಾವಿದರಲ್ಲಿ ಒಬ್ಬರಾಗಿದ್ದಾರೆ. ಸಿನಿಮಾ ರಂಗದಲ್ಲಿ ಅದೆಷ್ಟೇ ನೇಮು ಫೇಮು ಇದ್ದರೂ ತಮ್ಮ ವೈಯಕ್ತಿಕ ಬದುಕಿನ ಬಗ್ಗೆ ಎಲ್ಲೂ ಕೂಡ ರಿವೀಲ್ ಮಾಡಿರಲಿಲ್ಲ. ಇತ್ತೀಚಿಗೆ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮದಲ್ಲಿ ಪ್ರಭುದೇವ ಅವರ 2ನೇ ಮದುವೆ ಬಗ್ಗೆ ರಿವೀಲ್ ಆಗಿತ್ತು.
ಇದನ್ನೂ ಓದಿ: 4 ವರ್ಷದ ಬಾಲಕಿ ನಾಲೆಗೆ ಬಿದ್ದು ಮೃತ್ಯು!
ಹಿಮಾನಿ ಸಿಂಗ್ ಎನ್ನುವ ವೈದ್ಯೆಯನ್ನು ಸೀಕ್ರೆಟ್ ಆಗಿ ಮದುವೆಯಾಗಿದ್ದರು. 2020ರಲ್ಲಿ ಇವರಿಬ್ಬರ ವಿವಾಹ ರಹಸ್ಯವಾಗಿ ನಡೆದಿತ್ತು. ಲಾಕ್‌ಡೌನ್‌ನಲ್ಲಿ ಈ ಮದುವೆ ನಡೆದ ಕಾರಣ ಈ ಮದುವೆ ರಹಸ್ಯವಾಗಿಯೇ ಉಳಿಯಿತು. ನಟ ಪ್ರಭುದೇವ ಅವರು ಪತ್ನಿ ಸಮೇತರಾಗಿ ಮೊದಲ ಬಾರಿಗೆ ತಿರುಪತಿ ಬಾಲಾಜಿ ದೇವಸ್ಥಾನಕ್ಕೆ ಭೇಟಿ ಕೊಟ್ಟರು. ಪ್ರಭುದೇವ ಅವರ ತಮ್ಮ ಪತ್ನಿಯ ಕೈಯನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರು. ಜನಸಂದಣಿಗೆ ಇದ್ದಂತಹ ದೇವಸ್ಥಾನದಲ್ಲಿ ಪತ್ನಿಯ ಸುರಕ್ಷತೆಗಾಗಿ ಪತ್ನಿಯ ಕೈಯನ್ನು ಬಲವಾಗಿ ಹಿಡಿದುಕೊಂಡಿದ್ದರು. ಈ ಜೋಡಿಯ ಫೋಟೋ ವೈರಲ್ ಆಗಿದ್ದು, ಅವರಿಬ್ಬರನ್ನೂ ಜೊತೆಯಲ್ಲಿ ನೋಡಿ ಅಭಿಮಾನಿಗಳು ಖುಷಿಪಟ್ಟಿದ್ದಾರೆ.
ಅಂದಹಾಗೆ, ಪ್ರಭುದೇವ ಅವರು ರಮಾಲತಾ ಎಂಬುವವರನ್ನ ಮದುವೆಯಾಗಿದ್ದರು. ಈ ದಂಪತಿಗೆ 3ವರು ಮಕ್ಕಳಿದ್ದರು. ಮೊದಲ ಮಗ ವಿಶಾಲ್ ಅನಾರೋಗ್ಯದಿಂದ ಸಾವನ್ನಪ್ಪಿದ್ದರು. ಬಳಿಕ ವೈಯಕ್ತಿಕ ಕಾರಣಗಳಿಂದ 2010ರಲ್ಲಿ 16 ವರ್ಷಗಳ ದಾಂಪತ್ಯ ಜೀವನಕ್ಕೆ ಡಿವೋರ್ಸ್ ಮೂಲಕ ಅಂತ್ಯ ಹಾಡಿದ್ದರು.