ಭಾನುವಾರ, ಮೇ 19, 2024
ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!-ಎವರೆಸ್ಟ್ ಚಿಕನ್ ಮಸಾಲಾ ಬಳಸದಂತೆ ಆಹಾರ ಸುರಕ್ಷತಾ ಅಧಿಕಾರಿ ಸೂಚನೆ-Matthew Hayden: ಮ್ಯಾಥ್ಯೂ ಹೇಡನ್ ಅವರ ಮಗಳು ಎಸ್‌ಆರ್‌ಹೆಚ್ ಅಭಿಮಾನಿಗಳೊಂದಿಗೆ ಹೈದರಾಬಾದಿ ಬಿರಿಯಾನಿ ತಿನ್ನುವ ವಿಡಿಯೋ ವೈರಲ್!-ಅರವಿಂದ್ ಕೇಜ್ರಿವಾಲ್‌ ಆಪ್ತ ಸಹಾಯಕ ಬಿಭವ್‌ ಕುಮಾರ್‌ ಅರೆಸ್ಟ್‌-ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಮೇಘಸ್ಫೋಟಕ್ಕೆ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಮತ್ತೆ ಆರಂಭ!

Twitter
Facebook
LinkedIn
WhatsApp
ಮೇಘಸ್ಫೋಟಕ್ಕೆ ಸ್ಥಗಿತಗೊಂಡಿದ್ದ ಅಮರನಾಥ ಯಾತ್ರೆ ಮತ್ತೆ ಆರಂಭ!

ಕಾಶ್ಮೀರ(ಜು.11): ಮೇಘಸ್ಫೋಟ, ಭಾರಿ ಪ್ರವಾಹ ದುರಂತದಿಂದ ಸ್ಥಗಿತಗೊಂಡಿದ್ದ ಪವಿತ್ರ ಅಮರನಾಥ ಯಾತ್ರೆ ಇದೀಗ ಮತ್ತೆ ಆರಂಭಗೊಂಡಿದೆ.  ಅಮರನಾಥ ಯಾತ್ರೆ ಬೇಸ್ ಕ್ಯಾಂಪ್ ವಲಯದಲ್ಲಿ ಭಾರಿ ಮಳೆಗೆ ದಿಢೀರ್ ಪ್ರವಾಹ ಸೃಷ್ಟಿಯಾಗಿತ್ತು. ಹೀಗಾಗಿ ಬೇಸ್ ಕ್ಯಾಂಪ್‌ನಲ್ಲಿದ್ದ ಹಲವು ಭಕ್ತರು ಕೊಚ್ಚಿ ಹೋಗಿದ್ದರು. ಈ ಪೈಕಿ 16 ಭಕ್ತರು ಸಾವನ್ನಪ್ಪಿದ್ದಾರೆ. ಇನ್ನು ಹಲವರು ಭಕ್ತರು ಕಣ್ಮರೆಯಾಗಿದ್ದರೆ. ಪ್ರತಿಕೂಲ ಹವಾಮಾನ, ಪ್ರವಾಹ ದುರಂತದಿಂದ ತಾತ್ಕಾಲಿಕವಾಗಿ ಅಮರನಾಥ ಯಾತ್ರೆ ಸ್ಥಗಿತಗೊಳಿಸಲಾಗಿತ್ತು. ಎರಡು ದಿನದ ಬಳಿಕ ಇದೀಗ ಮತ್ತೆ ಅಮರನಾಥ ಯಾತ್ರೆ ಆರಂಭಗೊಂಡಿದೆ.

ಇಂದು(ಜು.11) ಅಮರನಾಥ ಯಾತ್ರೆ ಮತ್ತೆ ಆರಂಭಗೊಂಡಿದೆ. ಮೊದಲ ಹಂತದಲ್ಲಿ 2,000 ದಿಂದ 3,000 ಯಾತ್ರಾರ್ಥಿಗಳನ್ನು ಬಿಡಲಾಗುತ್ತದೆ ಎಂದು ಸ್ಥಳೀಯ ಜಿಲ್ಲಾಡಳಿತ ಹೇಳಿದೆ. ಇಂದು ಬೆಳಗ್ಗೆ 4.30ಕ್ಕೆ ಫಾಲ್ಗಾಮ್ ಬೇಸ್ ಕ್ಯಾಂಪ್‌ನಿಂದ ಯಾತ್ರಾರ್ಥಿಗಳು ಪ್ರಯಾಣ ಆರಂಭಿಸಿದ್ದಾರೆ.  ಫಾಲ್ಗಾಮ್ ಹಾಗೂ ಬಲ್ಟಾಲ್ ಎಂಬ ಎರಡು ದಾರಿಗಳಿಂದ ಯಾತ್ರಾರ್ಥಿಗಳು ಪ್ರಯಾಣ ಆರಂಭಿಸಿದ್ದಾರೆ. 

ಇನ್ನು ಯಾತ್ರೆ ಸ್ಥಗಿತಗೊಂಡಿದ್ದ ಕಾರಣ ಜಮ್ಮು ನಗರದ ಯಾತ್ರಿ ನಿವಾಸ ಕ್ಯಾಂಪ್‌ನಲ್ಲಿ ಹಲವು ಭಕ್ತರು ಉಳಿದುಕೊಂಡಿದ್ದರು. ಇದೀಗ ಯಾತ್ರಿ ನಿವಾಸದಿಂದ ಫಾಲ್ಗಾಮ್ ಬೇಸ್‌ಕ್ಯಾಂಪ್‌ಗೆ ಭಕ್ತರು ಪ್ರಯಾಣ ಆರಂಭಿಸಿದ್ದಾರೆ. ಎಲ್ಲಾ ಸಿದ್ಧತೆಗಳನ್ನು ಜಿಲ್ಲಾಡಳಿತ ಮಾಡಿದೆ. ಮತ್ತೆ ಮಳೆ ಸೂಚನೆ ಇರುವದರಿಂದ ಯಾವುದೇ ಕ್ಷಣದಲ್ಲಿ ಭಕ್ತರ ರಕ್ಷಣಾ ಕಾರ್ಯಕ್ಕೆ ರಕ್ಷಣಾ ಪಡೆಗಳು ಸನ್ನದ್ಧವಾಗಿದೆ.  ಶುಕ್ರವಾರ(ಜು.08) ಸಂಜೆ ಮೇಘಸ್ಫೋಟಕ್ಕೆ ದಿಢೀರ್ ಪ್ರವಾಹ ಸೃಷ್ಟಿಯಾಗಿತ್ತು. 

ಘಟನಾ ಸ್ಥಳದಲ್ಲಿ ಶುಕ್ರವಾರದಿಂದಲೇ ಎನ್‌ಡಿಆರ್‌ಎಫ್‌, ಸೇನೆ, ಬಿಎಸ್‌ಎಫ್‌, ರಾಜ್ಯ ವಿಪತ್ತು ನಿರ್ವಹಣಾ ತಂಡಗಳು ಯುದ್ಧೋಪಾದಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಶುಕ್ರವಾರ ಸಂಜೆಯಿಂದೀಚೆಗೆ 15 ಸಾವಿರಕ್ಕೂ ಹೆಚ್ಚು ಜನರನ್ನು ಸಮೀಪದ ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಿವೆ. ಅತ್ಯಾಧುನಿಕ ಯಂತ್ರೋಪಕರಣ, ತರಬೇತಿ ಪಡೆದ ಶ್ವಾನಗಳನ್ನು ಬಳಸಿಕೊಂಡು ಅವಶೇಷಗಳ ಅಡಿಯಲ್ಲಿ ಸಿಕ್ಕಿದವರ ಪತ್ತೆಗೆ ಯತ್ನ ನಡೆಸಲಾಗುತ್ತಿದೆ. ಇದಲ್ಲದೆ ಎಂಐ-17 ಕಾಪ್ಟರ್‌ಗಳನ್ನೂ ಗಾಯಾಳುಗಳ ತ್ವರಿತ ತೆರವಿಗಾಗಿ ಬಳಸಿಕೊಳ್ಳಲಾಗಿದೆ.

ಘಟನೆಯಲ್ಲಿ 25 ಜನರು ಗಾಯಗೊಂಡಿದ್ದು ಅವರನ್ನು ಸಮೀಪದ ಸೇನಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ನಡುವೆ ಘಟನಾ ಪ್ರದೇಶದಲ್ಲಿ ಭಾರೀ ಪ್ರಮಾಣದ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳಲಾಗಿದ್ದು 15 ಸಾವಿರಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ.

ಶುಕ್ರವಾರ ಸಂಜೆ 5.30ರ ವೇಳೆಗೆ ಅಮರನಾಥ ಗುಹೆ ಸಮೀಪದ ಪ್ರದೇಶಗಳಲ್ಲಿ ಭಾರೀ ಮಳೆ ಸುರಿದ ಪರಿಣಾಮ ದಿಢೀರ್‌ ಪ್ರವಾಹ ಕಾಣಿಸಿಕೊಂಡು, ಭಕ್ತರು ಉಳಿದುಕೊಂಡಿದ್ದ ಟೆಂಟ್‌ಗಳು ಕೊಚ್ಚಿಹೋಗಿದ್ದವು. ಪ್ರವಾಹದ ನೀರಿನೊಂದಿಗೆ ಭಾರೀ ಪ್ರಮಾಣದಲ್ಲಿ ಕಲ್ಲು ಮತ್ತು ಮಣ್ಣು ಕೂಡಾ ಹರಿದುಬಂದ ಕಾರಣ ಅವಗಢದ ತೀವ್ರತೆ ಹೆಚ್ಚಾಗಿದೆ.

ಪವಿತ್ರ ಅಮರನಾಥ ಯಾತ್ರೆಯನ್ನು ವರದಿ ಮಾಡುತ್ತಿದ್ದ ಖಾಸಗಿ ಸುದ್ದಿವಾಹಿನಿ ಎನ್‌ಡಿಟಿವಿಯ ಪತ್ರಕರ್ತರು ದುರ್ಘಟನೆಯಿಂದ ಕೆಲವೇ ಕ್ಷಣಗಳಲ್ಲಿ ತಪ್ಪಿಸಿಕೊಂಡಿದ್ದಾರೆ. ಮೇಘಸ್ಫೋಟ ಸಂಭವಿಸಿದ ಸ್ಥಳದಿಂದಲೇ ರಿಪೋರ್ಟರ್‌ ಶರದ್‌ ಶರ್ಮಾ ಮತ್ತು ಕ್ಯಾಮರಾ ಪರ್ಸನ್‌ ಅಶ್ವಿನಿ ಮೆಹ್ರಾ ಅವರು ವರದಿ ನೀಡುತ್ತಿದ್ದರು. ಸುಮಾರು 24 ಗಂಟೆಗಳ ಕಾಲ ಅಲ್ಲಿಂದಲೇ ವರದಿ ಪ್ರಸಾರ ಮಾಡಿದ ತಂಡ ದುರ್ಘಟನೆ ನಡೆಯುವ ಕೆಲವೇ ಗಂಟೆಗಳ ಮೊದಲು ಅಲ್ಲಿಂದ ವಾಪಸಾಗಿದೆ. ಅಲ್ಲಿಂದ ಕೆಳಗೆ ಬರುತ್ತಿದ್ದಂತೆ ಗುಹೆಯ ಬಳಿ ಮೇಘಸ್ಫೋಟ ಸಂಭವಿಸಿದೆ ಎಂಬ ವರದಿ ಬಂದಿತು. ಅಲ್ಲಿದ್ದ ಜನರ ಟೆಂಟ್‌ಗಳು, ಅಂಗಡಿಗಳು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋದವು. ಜನರು ನೀರಿನಲ್ಲಿ ತೇಲಿಹೋಗುತ್ತಿದ್ದರು ಎಂದು ಅವರು ದುರ್ಘಟನೆಯನ್ನು ವಿವರಿಸಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.! Twitter Facebook LinkedIn WhatsApp ಪುತ್ತೂರು : ವರ (Groom) ಬೇಕು, ವಧು (Bride) ಬೇಕಾಗಿದ್ದಾರೆ ಎಂಬಂತಹ ಅನೇಕ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.! Twitter Facebook LinkedIn WhatsApp ಉಡುಪಿ: ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ

ಅಂಕಣ