ಮುದ್ದಿನ ನಾಯಿ ಕಾಣೆಯಾದ ಚಿಂತೆಯಲ್ಲಿ ರಮ್ಯಾ; ಹುಡುಕಿಕೊಟ್ಟರೆ ಬಂಪರ್ ಬಹುಮಾನ!
ಬೆಂಗಳೂರು: ನಟಿ, ಮಾಜಿ ಸಂಸದೆ ರಮ್ಯಾ ಸದ್ಯ ಕಾಂಗ್ರೆಸ್ ಪರ ಪ್ರಚಾರದಲ್ಲಿ ಬಿಝಿಯಾಗಿದ್ದಾರೆ. ಈ ನಡುವೆ ಅವರ ಮುದ್ದಿನ ನಾಯಿ ಕಾಣೆಯಾಗಿದ್ದು, ಹುಡುಕಿಕೊಡಿ ಎಂದು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಸ್ಟೋರಿ ಹಾಕಿದ್ದಾರೆ.
ರಮ್ಯಾ ಅವರ ಮುದ್ದಿನ ನಾಯಿ ನಾಪತ್ತೆಯಾಗಿದ್ದು, ಅವನನ್ನ ಹುಡುಕಲು ದಯವಿಟ್ಟು ಸಹಾಯ ಮಾಡಿ ಎಂದು ರಮ್ಯ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಚಾಂಪ್ ಎಂಬ ಹೆಸರಿನ ಕಪ್ಪು ಬಣ್ಣದ ನಾಯಿ ಕಣ್ಮರೆಯಾಗಿದೆ. ಇದಕ್ಕೆ ಭಾಗಶಃ ಕಣ್ಣು ಕಾಣಿಸುವುದಿಲ್ಲ. ಕಾಣೆಯಾಗಿರುವ ನಾಯಿಯನ್ನು ಹುಡುಕಿಕೊಟ್ಟವರಿಗೆ ಸೂಕ್ತ ಬಹುಮಾನ ನೀಡಲಾಗುತ್ತದೆ ಎಂದು ರಮ್ಯಾ ಹೇಳಿದ್ದಾರೆ.
ಮೇ 6ರಂದು ಕೊನೆಯ ಬಾರಿಗೆ ಪ್ರೀತಿಯ ಚಾಂಪ್ನನ್ನು ನೋಡಿದ್ದೇನೆ. ತಾಜ್ ವೆಸ್ಟ್ ಎಂಡ್, ರೇಸ್ ಕೋರ್ಸ್ ರೋಡ್ ಬೆಂಗಳೂರಿನಿಂದ ನಾಪತ್ತೆಯಾಗಿದೆ. ನಾಯಿಯ ಬಗ್ಗೆ ಮಾಹಿತಿ ಸಿಕ್ಕಿದರೆ 7012708137 ಸಂಖ್ಯೆಯನ್ನು ಸಂಪರ್ಕಿಸಿ ಎಂದು ರಮ್ಯಾ ಬರೆದುಕೊಂಡಿದ್ದಾರೆ.
https://twitter.com/divyaspandana/status/1654765749196472322?ref_src=twsrc%5Etfw%7Ctwcamp%5Etweetembed%7Ctwterm%5E1654765749196472322%7Ctwgr%5Ef896bbdc0d49a9cad08d03cb86c6f1e220f518a5%7Ctwcon%5Es1_&ref_url=https%3A%2F%2Fwww.vijayavani.net%2Factress-ramya-pet-dog-missing