ಮಳೆ ಹಿನ್ನಲೆ: 24 ಗಂಟೆಯೂ ಅಲರ್ಟ್ ಇರುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ ಮಡಿಕೇರಿ ಶಾಸಕ ಡಾ. ಮಂತರ್ ಗೌಡ
ಮಡಿಕೇರಿ: ಕರಾವಳಿ ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ, ಕೊಡಗಿನಲ್ಲಿ ಯಾವುದೇ ಸ್ಥಿತಿಯನ್ನು ಎದುರಿಸಲು ಅಧಿಕಾರಿಗಳು ಸಿದ್ಧವಾಗಿರುವಂತೆ ಹಾಗೂ 24 ಗಂಟೆ ಅಲರ್ಟ್ ಆಗಿರುವಂತೆ ಮಡಿಕೇರಿ ಶಾಸಕರಾದ ಡಾ. ಮಂತರ್ ಗೌಡ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಪ್ರತಿಕ್ಷಣಕ್ಕೂ ಮಳೆಯ ಕುರಿತಂತೆ ವಿವಿಧ ರೀತಿಯ ಅಧಿಕಾರಿಗಳನ್ನು ಗೆ ಸಮಲೋಚನೆ ನಡೆಸುತ್ತಿರುವ ಶಾಸಕ ಡಾ. ಮಂತರ್ ಗೌಡ ಹಲವಾರು ಸಲಹೆ ಸೂಚನೆಗಳನ್ನು ನೀಡಿದ್ದಾರೆ ಎಂದು ತಿಳಿದುಬಂದಿದೆ.
ಕಳೆದು ಒಂದು ವಾರಗಳಿಂದ ವ್ಯಾಪಕ ಸಭೆಯನ್ನು ಈ ಕುರಿತಂತೆ ಮಾಡಿರುವ ಅವರು, ಕೊಡಗಿನಲ್ಲಿ ಮಳೆಯನ್ನು ಎದುರಿಸಲು ಸಿದ್ಧತೆಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.
ಶಾಸಕ ಡಾ. ಮಂತರ್ ಗೌಡ ಸೂಚನೆ.ಕೊಡಗಿನಲ್ಲಿ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಪ್ರವಾಸಿ ಮಾರ್ಗದರ್ಶಕ ಹುದ್ದೆಗೆ ನೇಮಕ ಕುರಿತಂತೆ ಪ್ರಕಟಣೆ ಹೊರಡಿಸಿದ ಪ್ರವಾಸೋದ್ಯಮ ಇಲಾಖೆ.
ಮಡಿಕೇರಿ: ಪ್ರತಿ ಜಿಲ್ಲೆಯಲ್ಲಿ ಪ್ರವಾಸಿ ಮಾರ್ಗದರ್ಶಕರು (tourist guide) ನೇಮಕ ಕುರಿತಂತೆ ಕೊಡಗು ಜಿಲ್ಲೆಯಲ್ಲಿ ಮಾರ್ಗದರ್ಶಕರ ನೇಮಕವಾಗದೆ ಇರುವ ಅಂಶವನ್ನು ಗಂಭೀರವಾಗಿ ಪರಿಗಣಿಸಿರುವ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಪ್ರವಾಸೋದ್ಯಮ ಇಲಾಖೆಗೆ ಸೂಚನೆ ನೀಡಿದ್ದರು.
ಮೈಸೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಹಲವಾರು ವರ್ಷಗಳ ಹಿಂದೆ ಪ್ರವಾಸಿ ಮಾರ್ಗದರ್ಶಕರ ನೇಮಕವಾಗಿತ್ತು. ಆದರೆ ಕರ್ನಾಟಕದ ಪ್ರಮುಖ ಪ್ರವಾಸಿ ತಾಣವಾದ ಕೊಡಗಿನಲ್ಲಿ ಪ್ರವಾಸಿ ಮಾರ್ಗದರ್ಶಕರ ನೇಮಕವಾಗದೆ ನೆನೆಗುದಿಗೆ ಬಿದ್ದಿತ್ತು. ಸ್ಥಳೀಯ ಸಂಸ್ಕೃತಿ ಸೇರಿದಂತೆ ಸರಿಯಾದ ಮಾರ್ಗದರ್ಶಕ ನೀಡುವ ಪ್ರವಾಸಿ ಗೈಡ್ಗಳು ಅವಶ್ಯಕತೆ ಬಗ್ಗೆ ಹಾಗೂ ಕೊಡಗಿನಲ್ಲಿ ಇದುವರೆಗೆ ನೇಮಕವಾಗದ ಬಗ್ಗೆ ಅಧಿಕಾರಿಗಳಿಗೆ ಸೂಚನೆಯನ್ನು ಶಾಸಕ ಡಾ. ಮ೦ತರ್ ಗೌಡ ನೀಡಿದ್ದರು.
ಕರ್ನಾಟಕದಲ್ಲಿ ಒಟ್ಟು 32 ಮಂದಿ ಪ್ರವಾಸಿ ಮಾರ್ಗದರ್ಶಕರು ಲೈಸನ್ಸ್ ಪಡೆದಿದ್ದು ಆದರೆ ಅವರಲ್ಲಿ ಕೊಡಗಿನ ಯಾರೋಬ್ಬರು ಇಲ್ಲದೆ ಇರುವುದನ್ನು ಗಂಭೀರವಾಗಿ ಪರಿಗಣಿಸಿರುವ ಶಾಸಕ ಡಾ. ಮಂತರ್ ಗೌಡ ಸೂಚನೆಯನ್ನು ಇಲಾಖೆಗೆ ನೀಡಿದ್ದರು.
ಅವರ ಸೂಚನೆಯಂತೆ ಪ್ರವಾಸೋದ್ಯಮ ಇಲಾಖೆ ಪ್ರವಾಸಿ ಗೈಡ್ಗಳ ನೇಮಕಕ್ಕೆ ಈಗ ಮುಂದಾಗಿದೆ.