ಗುರುವಾರ, ಫೆಬ್ರವರಿ 6, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಮನೆಗೆ ಬರಲಿಲ್ಲ ಎಂದು ಪತ್ನಿ, ಮಕ್ಕಳು ಸೇರಿ ಐವರನ್ನು ಕೊಂದ ಪತಿ

Twitter
Facebook
LinkedIn
WhatsApp
 ಗಂಡನ ಜೊತೆ ಹೊಂದಿಕೊಂಡು ಬಾಳುವಂತೆ ಬುದ್ಧಿ ಹೇಳಿದ್ದಕ್ಕೆ ತಾಯಿಯನ್ನ ಕೊಂದ ಸಾಕುಮಗಳು?

ಚಂಡೀ​ಗ​ಢ: ತವರು ಬಿಟ್ಟು ಬರಲು ಒಪ್ಪದ ಕಾರಣಕ್ಕೆ ಸಿಟ್ಟಿಗೆದ್ದ ಪತಿ (Husband), ತನ್ನ ಪತ್ನಿ (Wife), ಇಬ್ಬರು ಪುಟ್ಟಮಕ್ಕಳು, ಅತ್ತೆ(Mother in Law) , ಮಾವನನ್ನು (Father in Law) ಬೆಂಕಿ ಹಚ್ಚಿ ಹತ್ಯೆ ಮಾಡಿದ ಭೀಕರ ಘಟನೆ ಮಂಗ​ಳ​ವಾರ ನಡೆ​ದಿ​ದೆ. ಪಂಜಾ​ಬ್‌​ನ (Punjab) ಜಲಂಧರದ (Jalandhar) ತವರು ಮನೆ​ಯಲ್ಲಿ ಪತ್ನಿ ಪರ​ಮ್ಜಿತ್‌ ಕೌರ್‌ ತನ್ನ ಇಬ್ಬರು ಮಕ್ಕ​ಳೊಂದಿಗೆ ಕಳೆದ ಐದಾರು ತಿಂಗ​ಳು​ಗ​ಳಿಂದ ವಾಸಿ​ಸು​ತ್ತಿ​ದ್ದಳು.

ಪತಿ ಕುಲ್‌​ದೀಪ್‌ ಸಿಂಗ್‌​ ಲುಧಿ​ಯಾ​ನಾದ ಖುರ್ಶೇ​ದ್‌​ಪು​ರ​ದ​ಲ್ಲಿದ್ದ ತನ್ನ ಮನೆಗೆ ಬರು​ವಂತೆ ಪತ್ನಿ​ಯನ್ನು ಒತ್ತಾ​ಯಿ​ಸು​ತ್ತಿ​ದ್ದ. ಆದ​ರೆ ತನ್ನನ್ನು ಹಾಗೂ ಮಕ್ಕ​ಳನ್ನು ಹೊಡೆ​ಯು​ತ್ತಾ​ನೆಂದು ಆಕೆ ಹೋಗಲು ನಿರಾ​ಕ​ರಿ​ಸಿ​ದ್ದಾಳೆ. ಈ ಹಿನ್ನೆಲೆಯಲ್ಲಿ ಕುಲದೀಪ್‌ ಮಂಗಳವಾರ ಇಬ್ಬರು ಸ್ನೇಹಿ​ತ​ರೊಂದಿಗೆ ಬಂದು ಮನೆಗೆ ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿ ಐವ​ರನ್ನು ಸಜೀ​ವ​ ದ​ಹನ ಮಾಡಿ​ದ್ದಾನೆ ಎಂದು ತಿಳಿದುಬಂದಿದೆ.

ಮಂಗಳವಾರ ಬೆಳ್ಳಂಬೆಳಗ್ಗೆ ಪತಿಯೊಬ್ಬ ತನ್ನ ಪತ್ನಿ, ಇಬ್ಬರು ಮಕ್ಕಳು, ಅತ್ತೆ-ಮಾವ ಸೇರಿ ಎಲ್ಲರೂ ಮಲಗಿದ್ದಾಗ ಪಂಪ್‌ನಲ್ಲಿ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಹತ್ಯೆಗೈದಿದ್ದಾನೆ. ಅವರು ತಪ್ಪಿಸಿಕೊಳ್ಳಲು ಸಾಧ್ಯವಾಗದಂತೆ ಕೋಣೆಯ ಬಾಗಿಲನ್ನು ಹೊರಗಿನಿಂದ ಲಾಕ್ ಮಾಡಿ ಈ ದುಷ್ಕೃತ್ಯ ನಡೆಸಿದ್ದಾನೆ ಎಂದು ತಿಳಿದುಬಂದಿದೆ.

ಪಂಜಾಬ್‌ನ ಜಲಂಧರ್‌ ಬಳಿಯ ಮೆಹತ್‌ಪುರದ ಬಿಟ್ಲಾನ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಈ ಗ್ರಾಮವು ಜಲಂಧರ್ ಭಾಗದಲ್ಲಿ ಸಟ್ಲೆಜ್ ನದಿಯ ದಂಡೆಯ ಮೇಲೆ ಬರುತ್ತದೆ. ಇನ್ನು, ಜಾಗ್ರಾವ್‌ನ ಖುರ್ಷೈದ್‌ಪುರ ಗ್ರಾಮದವರಾದ ಆರೋಪಿ ಕುಲದೀಪ್‌ ಸಿಂಗ್ ಪರಾರಿಯಾಗಿದ್ದು, ಆತನನ್ನು ಬಂಧಿಸಲು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ.

ಬಲಿಯಾದವರಲ್ಲಿ  ಪತ್ನಿ ಪರ​ಮ್ಜಿತ್‌ ಕೌರ್ (28), ಅವರ ಮಗ ಗುರ್‌ಮೋಹನ್ ಸಿಂಗ್ (5), ಮಗಳು ಅರ್ಷ್‌ದೀಪ್ ಕೌರ್ (7), ತಂದೆ ಸುರ್ಜನ್ ಸಿಂಗ್ (58) ಮತ್ತು ತಾಯಿ ಜೋಗಿಂದರ್ ಬಾಯಿ (54) ಸೇರಿದ್ದಾರೆ. ಪರಮ್‌ಜಿತ್‌ ಕೌರ್‌ಗೆ ಇದು ಎರಡನೇ ಮದುವೆಯಾಗಿದೆ ಎಂದು ಮೃತ ಸುರ್ಜನ್ ಸಿಂಗ್ ಅವರ ಸಹೋದರ ಲಖ್ವಿಂದರ್ ಸಿಂಗ್ ಮಾಹಿತಿ ನೀಡಿದ್ದಾರೆ.

ಆರೋಪಿ ತನ್ನ ಪತ್ನಿ ಹಾಗೂ ಮಲ ಮಕ್ಕಳಿಗೆ ಆಗಾಗ್ಗೆ ಥಳಿಸುತ್ತಿದ್ದ. ತನ್ನ ಮಕ್ಕಳನ್ನು ಹೆತ್ತವರ ಬಳಿ ಬಿಟ್ಟು ತನ್ನೊಂದಿಗೆ ಬರಬೇಕು ಎಂದು ಆತ ಒತ್ತಾಯಿಸುತ್ತಿದ್ದ. ತನ್ನ ಸಹೋದರನ ಮನೆಯಿಂದ ಕಿರುಚಾಟ ಕೇಳಿದೆ ಎಂದೂ ಲಖ್ವಿಂದರ್ ಸಿಂಗ್ ಹೇಳಿದ್ದಾರೆ.

ನಂತರ, “ಏನಾಯಿತು ಎಂದು ನೋಡಲು ನಾನು ಧಾವಿಸಿ ಹೊರಬಂದಾಗ, ಕುಲದೀಪ್‌ ತನ್ನ ಸಹೋದರನ ಮನೆಯಿಂದ ಕೆಲವು ಅಪರಿಚಿತ, ಶಸ್ತ್ರಸಜ್ಜಿತ ವ್ಯಕ್ತಿಗಳೊಂದಿಗೆ ಹೋಗುವುದನ್ನು ನಾನು ನೋಡಿದೆ. ನಾನು ಕೋಣೆಯ ಬಳಿ ಹೋಗಿ, ಕಿಟಕಿಯಿಂದ ಇಣುಕಿ ನೋಡಿದೆ ಮತ್ತು ನನಗೆ ದೊಡ್ಡ ಪ್ರಮಾಣದಲ್ಲಿ ಬೆಂಕಿ ಹೊತ್ತಿಕೊಂಡಿದ್ದು ಕಾಣಿಸಿತು. ಎಲ್ಲರೂ ಮಲಗಿದ್ದ ಸ್ಥಳದಿಂದ ಕಿರುಚುತ್ತಿದ್ದರು,” ಎಂದೂ ಅವರು ಹೇಳಿದರು.

ಇನ್ನು, ಈ ಘಟನೆ ಸಂಬಂಧ ಸ್ಥಳೀಯ ಎಸ್‌ಪಿ (SP) (ಡಿ) ಸರಬ್ಜಿತ್ ಎಸ್. ಬಹಿಯಾ ಅವರು, ಜೋಗಿಂದರ್ ಮತ್ತು ಗುರ್ಮೊಹಲ್ ಸ್ಥಳದಲ್ಲೇ ಮೃತಪಟ್ಟರು ಮತ್ತು ಇತರ ಮೂವರನ್ನು ಚಿಕಿತ್ಸೆಗಾಗಿ ನಾಕೋಡರ್ ಸಿವಿಲ್ ಆಸ್ಪತ್ರೆಗೆ ಸಾಗಿಸಲಾಯಿತು. ಜೋಗಿಂದರ್ ಮತ್ತು ಗುರ್ಮೊಹಲ್ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅವರು ಮೃತಪಟ್ಟಿದ್ದರು ಎಂದೂ ಹೇಳಿದ್ದಾರೆ.

“ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ, ನಾವು ಪ್ರಮುಖ ಆರೋಪಿಯ ಕೆಲವು ಸಹಚರರನ್ನು ಬಂಧಿಸಿದ್ದೇವೆ.  ಕುಲದೀಪ್‌ ಅವರನ್ನು ಕೂಡ ಶೀಘ್ರದಲ್ಲೇ ಸೆರೆ ಹಿಡಿಯಲಾಗುತ್ತದೆ. ಪುರುಷರು ಬೈಕ್‌ಗಳಲ್ಲಿ ಬರುವುದು, ತಮಗೆ ಬೇಕಾದ ವಸ್ತುಗಳನ್ನು ಇಳಿಸುವುದು, ಹಿಂತಿರುಗುವುದು ಹಾಗೂ ಮತ್ತೆ ಕಾಲ್ನಡಿಗೆಯಲ್ಲಿ ಬರುವುದನ್ನು ನಾವು ದೃಶ್ಯಗಳಲ್ಲಿ ನೋಡಿದ್ದೇವೆ’’ ಎಂದೂ ಅವರು ಹೇಳಿದರು. ಇನ್ನು, ಈ ಘಟನೆ ಸಂಬಂಧ ಕೊಲೆ ಪ್ರಕರಣ ದಾಖಲಾಗಿದೆ ಎಂದೂ ಸೂಪರಿಟೆಂಡೆಂಟ್‌ ಆಫ್‌ ಪೊಲೀಸ್‌ (Superintendent of Police) ಮಾಹಿತಿ ನೀಡಿದ್ದಾರೆ.

ಅಂಗಾಂಗ ದಾನ ಮಾಡಿ 9 ಜೀವಗಳನ್ನು ಉಳಿಸಿದ ಮದನ್‌ ಕುಮಾರ್‌
ವೇಣೂರು ಯುವ ವಾಹಿನಿ ಘಟಕದ ಅತಿಥ್ಯದಲ್ಲಿ ಅಕ್ಟೋಬರ್ 9 ಆದಿತ್ಯವಾರ ನಡೆಯಲಿದೆ ಕೆಸರುಡೊಂಜಿ ದಿನ ಕಾರ್ಯಕ್ರಮ

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಮುರುಡೇಶ್ವರ

ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!

ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ! Twitter Facebook LinkedIn WhatsApp ಕಾರವಾರ: ಮುರುಡೇಶ್ವರ ದಲ್ಲಿ (Murudeshwar) ನೀರು ಪಾಲಾಗಿ ನಾಲ್ವರು ವಿದ್ಯಾರ್ಥಿಯರು ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ

ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ

ಭಾರಿ ಮಳೆ ಹಿನ್ನೆಲೆ ನಾಳೆ ಡಿ.3 ರಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶಾಲಾ, ಪಿಯು ಕಾಲೇಜುಗಳಿಗೆ ರಜೆ ಘೋಷಣೆ Twitter Facebook LinkedIn WhatsApp ಮಂಗಳೂರು:  ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಫೆಂಗಲ್‌ ಚಂಡಮಾರುತದ ಪರಿಣಾಮ

ಅಂಕಣ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist