ಮಧ್ಯ ನೈಜೀರಿಯಾದಲ್ಲಿ ಬಾಂಬ್ ಸ್ಫೋಟ, 27 ಕುರಿಗಾಹಿಗಳ ಸಾವು
ನೈಜೀರಿಯಾ: ಜನಾಂಗೀಯ ಮತ್ತು ಧಾರ್ಮಿಕ ಉದ್ವಿಗ್ನತೆಗಳಿಗೆ ಕುಖ್ಯಾತ ಮಧ್ಯ ನೈಜೀರಿಯಾದಲ್ಲಿ ಬಾಂಬ್ ಸ್ಫೋಟಗೊಂಡು ಜಾನುವಾರು ಸೇರಿದಂತೆ 27 ಜನ ಕುರಿಗಾಹಿಗಳು ಮೃತಪಟ್ಟ ದುರ್ಘಟನೆ ನಡೆದಿದೆ. ನಸರವಾ, ಬೆನ್ಯೂ ರಾಜ್ಯಗಳ ಗಡಿ ಭಾಗ ರುಕುಬಿ ಬಳಿ ಕುರಿಗಾಹಿಗಳು ತಮ್ಮ ಜಾನುವಾರುಗಳನ್ನು ಮೇಯಿಸಲು ಬಂದಾಗ ಘಟನೆ ನಡೆದಿದೆ. ಬಾಬ್ ಸ್ಫೋಟದಲ್ಲಿ 27 ಜನ ಮೃತಪಟ್ಟಿದ್ದು ಹಲವರಿಗೆ ಗಾಯಗಳಾಗಿವೆ. ಈ ಬಗ್ಗೆ ನಸರವಾ ಪೊಲೀಸ್ ಕಮಿಷನರ್ ಮೈಯಾಕಿ ಮಹಮ್ಮದ್ ಬಾಬಾ ಮಾಹಿತಿ ನೀಡಿದ್ದಾರೆ.
ಇನ್ನು ಘಟನೆ ನಡೆದ ಸ್ಥಳದಲ್ಲಿ ಮತ್ತಷ್ಟು ಜನರಿಗಾಗಿ ಶೋಧ ಕಾರ್ಯ ನಡೆಯುತ್ತಿದ್ದು ಸಾವಿನ ಸಂಖ್ಯೆ ಮತ್ತಷ್ಟು ಏರುವ ಸಾಧ್ಯತೆ ಇದೆ. ಪೊಲೀಸ್ ಬಾಂಬ್ ತಜ್ಞರು ಸ್ಫೋಟದ ಮೂಲದ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ಮಹಮ್ಮದ್ ಬಾಬಾ ತಿಳಿಸಿದರು.
ಮಿಲಿಟರಿ ಸ್ಟ್ರೈಕ್ನಿಂದಾಗಿ ಈ ಸ್ಫೋಟ ಸಂಭವಿಸಿದೆ ಎಂದು ದನಗಾಹಿಗಳನ್ನು ಪ್ರತಿನಿಧಿಸುವ ಗುಂಪಿನ ಸದಸ್ಯರೊಬ್ಬರು ಮಾಹಿತಿ ನೀಡಿದ್ದರೆ. ಘಟನೆ ಸಂಬಂಧ ನೈಜೀರಿಯಾದ ವಾಯುಪಡೆಯ ವಕ್ತಾರರಿಗೆ ಮಾಹಿತಿ ಕೇಳಲಾಗಿದ್ದು ಅವರ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ ಎಂದು ಸುದ್ದಿ ಮಾಧ್ಯಮವೊಂದು ವರದಿ ಮಾಡಿದೆ.
ಮಧ್ಯ ನೈಜೀರಿಯಾದಲ್ಲಿ ದನಗಾಹಿಗಳು ಮತ್ತು ರೈತರು ತಮ್ಮ ಜಾನುವಾರುಗಳಿಗೆ ಮೇವು ಮತ್ತು ನೀರಿನ ಸಮಸ್ಯೆ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ದಶಕಗಳ ಕಾಲದ ಈ ಸಂಘರ್ಷವು ಇತ್ತೀಚಿನ ವರ್ಷಗಳಲ್ಲಿ ಜನಾಂಗೀಯ ಮತ್ತು ಧಾರ್ಮಿಕ ಆಯಾಮವನ್ನು ಪಡೆದುಕೊಂಡಿದೆ, ಹೆಚ್ಚಿನ ಕುರುಬರು ಮುಸ್ಲಿಮರು ಮತ್ತು ರೈತರು ಹೆಚ್ಚಾಗಿ ಕ್ರಿಶ್ಚಿಯನ್ನರಾಗಿದ್ದಾರೆ.