ಮಂಗಳವಾರ, ಫೆಬ್ರವರಿ 4, 2025
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಮದುವೆಯಾದ ಒಂದೇ ತಿಂಗಳಿಗೆ ವರದಕ್ಷಿಣೆ ಕಿರುಕುಳ ನೀಡಿದ ಪಾಪಿ ಗಂಡ; ನವವಿವಾಹಿತೆಯನ್ನ ಚಿತ್ರಹಿಂಸೆ ಕೊಟ್ಟು ಕೊಂದ್ರಾ ಪಾಪಿಗಳು?

Twitter
Facebook
LinkedIn
WhatsApp
342209727 1587805555027553 6420748993116079768 n 8

ಗದಗ: ರಂಜಾನ್ ಹಬ್ಬದ ಸಡಗರದಲ್ಲಿದ್ದ ಕುಟುಂಬಸ್ಥರಿಗೆ ಬರಸಿಡಿಲು.  ಮುದ್ದಿನ ಮಗಳ ಧಾರುಣ ಸಾವು, ಆಸ್ಪತ್ರೆ ಬಳಿ ಹೆತ್ತವರ ಕಣ್ಣೀರು. ಅಳಿಯ ಕೈಗೆ ಸಿಕ್ಕರೇ ಕೊಂದು ಬಿಡುವಷ್ಟು ಆಕ್ರೋಶ, ಸಿಟ್ಟು. ಹೌದು ಈ ಎಲ್ಲ ದೃಶ್ಯಗಳು ಕಂಡಿದ್ದು, ಗದಗ ಹೊರವಲಯದ ಜಿಮ್ಸ್ ಆಸ್ಪತ್ರೆ ಬಳಿ. ಅಂದಹಾಗೆ ಈ ಫೋಟೋದಲ್ಲಿನ ಸುಂದರ ಮಹಿಳೆ ಹೆಸರು ಶಹನಾಜ್, ನರ್ಸಿಂಗ್ ಮುಗಿಸಿ ಮದುವೆಯಾಗಿದ್ದಳು. ಹೆತ್ತವರು ಹೇಳಿದ ಯುವಕನನ್ನ ವರಿಸಿ, ಅದ್ದೂರಿಯಾಗಿ ಮದುವೆಯಾಗಿ ನೂರಾರು ಕನಸು ಕಂಡಿದ್ದಳು. ಕೇವಲ ಒಂದುವರೆ ತಿಂಗಳ ಹಿಂದೆ ಮದುವೆಯಾದ ಈ ಮಹಿಳೆ ಇದೀಗ ಹೆಣವಾಗಿದ್ದಾಳೆ. ಗಂಡನ ಮನೆಗೆ ಹೋದವಳು ರಂಜಾನ್ ಹಬ್ಬಕ್ಕೆ ಬರುತ್ತಾಳೆ ಎಂದು ಹೆತ್ತವರು ಖುಷಿಯಿಂದ ಇದ್ದರು. ಆದ್ರೆ, ಹೆತ್ತವರ ಕಿವಿಗೆ ಬಂದಿದ್ದು ಅವಳ ಸಾವಿನ ಸುದ್ದಿ. ಮಗಳ ಸಾವಿನ ಸುದ್ದಿ ಕೇಳಿ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.

ಗದಗ ಜಿಲ್ಲೆಯ ಗಜೇಂದ್ರಗಡ ಪಟ್ಟಣದ, 24 ವರ್ಷದ ಶಹನಾಜ್ ಬೇಗಂಳನ್ನು ಧಾರವಾಡ ಜಿಲ್ಲೆಯ ಅಣ್ಣಿಗೇರಿ ಪಟ್ಟಣದ ಶಹಬಾಜ್ ಮುಳಗುಂದ ಜೊತೆಗೆ ಒಂದುವರೆ ತಿಂಗಳ ಹಿಂದೆ ಗಜೇಂದ್ರಗಡ ಪಟ್ಟಣದಲ್ಲಿ ವರದಕ್ಷಿಣೆ ನೀಡಿ, ಅದ್ದೂರಿಯಾಗಿ ಮದುವೆ ಮಾಡಿದ್ರು. ಮದುವೆ ಸಮಯದಲ್ಲಿ ಚಿನ್ನ, ಬೆಳ್ಳಿ, ನಗದು ನೀಡಿ ಸ್ಥಿತಿವಂತ ಕುಟುಂಬಕ್ಕೆ ಮದುವೆ ಮಾಡಿಕೊಟ್ಟಿದ್ರು. ಆದ್ರೆ, ದನ ದಾಹಿ, ಶಹಬಾಜ್ ಮುಳಗುಂದ ಮದುವೆಯಾದ ದಿನದಿಂದಲೇ ಇನ್ನೂ ಹೆಚ್ಚಿನ ಹಣ ಬೇಕೆಂದು, ವರದಕ್ಷಿಣೆ ಕಿರುಕುಳ ನೀಡಲು ಆರಂಭ ಮಾಡಿದ್ದ. ಹೊಸದಾಗಿ ಮದುವೆಯಾದ ನವವಿವಾಹಿತೆಗೆ ಅಕ್ಷರಶಃ ಕಿರುಕುಳ ನೀಡಿದ್ರು, ಶಹನಾಜ್ ಬೇಗಂ ಮುಖಕ್ಕೆ ಬಲವಾಗಿ ಹೊಡೆದು, ವಿಷ ಹಾಕಿ ಕೊಲೆ ಮಾಡಿ, ಗದಗ ಜಿಮ್ಸ್ ಆಸ್ಪತ್ರೆಯಲ್ಲಿ ಹೆಣವನ್ನ ಇಟ್ಟು ಗಂಡ ಸೇರಿದಂತೆ ಅವರ ಕುಟುಂಬಸ್ಥರು ಎಸ್ಕೇಪ್ ಆಗಿದ್ದಾರೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ.

ನಿರಂತರ ಕಿರುಕುಳ ನೀಡುತ್ತಿದ್ದ ಪತಿ ಶಹಬಾಜ್ ಮುಳಗುಂದ

ನಿರಂತರ ಕಿರುಕುಳ ನೀಡುತ್ತಿದ್ದ ಧನದಾಹಿ ಶಹಬಾಜ್ ಮುಳಗುಂದನನ್ನು ರಂಜಾನ್ ಹಬ್ಬಕ್ಕೆ ಕರೆತಂದು ಸಮಾಧಾನ ಮಾಡಬೇಕು ಎಂದು ಪ್ಲಾನ್ ಮಾಡಿದ್ರು. ರಂಜಾನ್ ಹಬ್ಬಕ್ಕೆ ಹೊಸ ಬಟ್ಟೆ, ಬಂಗಾರವನ್ನು ತೆಗೆದುಕೊಂಡು ಬಂದು, ಮನೆಯಲ್ಲಿ ಇಟ್ಟುಕೊಂಡಿದ್ದರು. ಇಂದು(ಏ.21) ಅವರನ್ನು ಕರೆದುಕೊಂಡು ಬರಬೇಕೆಂದು ಹೋಗಲು ರೆಡಿಯಾಗುತ್ತಿದ್ದರು. ಅಷ್ಟರಲ್ಲಿ ಗಂಡನ ಮನೆಯವರಿಂದ ಫೋನ್​ ಮಾಡಿ, ನಿಮ್ಮ ಮಗಳು ಜಿಮ್ಸ್ ಆಸ್ಪತ್ರೆಯಲ್ಲಿದ್ದಾಳೆ ಎಂದು ಹೇಳಿ ಎಸ್ಕೇಪ್ ಆಗಿದ್ದಾರೆ.

ಆಸ್ಪತ್ರೆಗೆ ಬಂದು ನೋಡಿದ್ರೆ, ಶಹನಾಜ್ ಬೇಗಂಳ ಮುಖಕ್ಕೆ ಬಲವಾದ ಗಾಯವಾಗಿದ್ದು, ಬಾಯಿಯಲ್ಲಿ ಬುರುಗ ಬಂದಿದೆ. ಗಂಡ ಹಾಗೂ ಅವರ ಮನೆಯವರು ವರದಕ್ಷಿಣೆ ಕಿರುಕುಳ ನೀಡಿ, ಬಲವಾಗಿ ಹೊಡೆದು, ಬಡೆದು, ನಂತರ ವಿಷಹಾಕಿ ಕೊಲೆ ಮಾಡಿದ್ದಾರೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಜಿಮ್ಸ್ ಆಸ್ಪತ್ರೆಯ ಮುಂದೆ ಹೆತ್ತವರು ಹಾಗೂ ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ‌. ಅಣ್ಣಿಗೇರಿ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿದ್ದು, ಕುಟುಂಬಸ್ಥರ ಹೇಳಿಕೆಯನ್ನು ಪರಿಗಣಿಸಿ, ವರದಕ್ಷಿಣೆ ಕಿರುಕುಳ ದೂರು ದಾಖಲು ಮಾಡಿಕೊಂಡಿದ್ದಾರೆ.

ದಾಂಪತ್ಯ ಜೀವನಕ್ಕೆ ಕಾಲಿಟ್ಟು ಒಂದುವರೆ ತಿಂಗಳಲ್ಲಿ ನವವಿವಾಹಿತೆ ದಾರುಣವಾಗಿ ಅಂತ್ಯವಾಗಿದ್ದಾಳೆ. ಹೆತ್ತವರು ವರದಕ್ಷಿಣೆ ನೀಡಿದ್ರು, ಇನ್ನೂ ಹೆಚ್ವಿನ ವರದಕ್ಷಿಣೆ ಆಸೆಗಾಗಿ ಪಾಪಿ ಗಂಡನ ಕೃತ್ಯಕ್ಕೆ ಬಾಳಿ ಬದುಕಬೇಕಾದ ನವವಿವಾಹಿತೆ ಸಾವಿನ ಮನೆ ಸೇರಿದ್ದಾಳೆ. ರಂಜಾನ್ ಹಬ್ಬಕ್ಕೆ ಬರುತ್ತಾಳೆ ಎಂದು ಕಾಯುತ್ತಿದ್ದ ಹೆತ್ತವರಿಗೆ ಬರಸಿಡಲು ಬಡಿದಂತಾಗಿದೆ. ಕಿರಾತಕ ಗಂಡನಿಗೆ ತಕ್ಕ ಶಿಕ್ಷೆಯಾಗಬೇಕು ಎಂದು ಕುಟುಂಬಸ್ಥರ ಆಗ್ರಹಿಸಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist