ಮದುವೆ ಕಾರ್ಯಕ್ರಮದಲ್ಲಿ ಡ್ಯಾನ್ಸ್ ಮಾಡುತ್ತಿದ್ದ ವ್ಯಕ್ತಿ ಕುಸಿದು ಬಿದ್ದು ಸಾವು
ರಾಯ್ಪುರ: ಮದುವೆಯೊಂದರಲ್ಲಿ (Wedding) ವೇದಿಕೆಯ ಮೇಲೆ ನೃತ್ಯ ಮಾಡುತ್ತಿದ್ದಾಗ ವ್ಯಕ್ತಿಯೊಬ್ಬರು ಹೃದಯಾಘಾತದಿಂದ (Heart Attack) ಮೃತಪಟ್ಟ ಘಟನೆ ಛತ್ತೀಸ್ಗಢದ (Chhattisgarh) ರಾಜ್ನಂದಗಾಂವ್ ಜಿಲ್ಲೆಯ ಡೊಂಗರ್ಗಢದಲ್ಲಿ ನಡೆದಿದೆ.
ಛತ್ತೀಸ್ಗಢದ ಬಲೋದ್ ಜಿಲ್ಲೆಯ ನಿವಾಸಿ ದಿಲೀಪ್ ರೌಜ್ಕರ್ ಮೃತ ವ್ಯಕ್ತಿ. ಈತ ಎಲೆಕ್ಟ್ರಿಕಲ್ ವಿಭಾಗದ ಉದ್ಯೋಗಿಯಾಗಿದ್ದ. ದಿಲೀಪ್ ತನ್ನ ಸಂಬಂಧಿಯ ಮದುವೆಯಲ್ಲಿ ನೃತ್ಯ ಮಾಡುತ್ತಿದ್ದ. ಈ ವೇಳೆ ಆತನಿಗೆ ಹೃದಯಾಘಾತವಾಗಿದೆ. ಘಟನೆಯ ವೀಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ವೀಡಿಯೋದಲ್ಲಿ ಏನಿದೆ?:
ದಿಲೀಪ್ ಮೊದಲು ವೇದಿಕೆಯೊಂದರಲ್ಲಿ ಇತರರೊಂದಿಗೆ ಉತ್ಸಾಹಭರಿತವಾಗಿ ನರ್ತಿಸುತ್ತಿರುತ್ತಾನೆ. ಆದರೆ ಇದ್ದಕ್ಕಿದ್ದಂತೆ ದಿಲೀಪ್ ನೃತ್ಯ (Dance) ನಿಲ್ಲಿಸಿ ವೇದಿಕೆಯ ಮೇಲೆ ಕುಳಿತುಕೊಳ್ಳುತ್ತಾನೆ. ಅದಾದ ಕೆಲವೇ ಕ್ಷಣಗಳಲ್ಲಿ ಆತ ಕುಸಿದು ಬಿಳುತ್ತಾನೆ.
Dance ? karte Aadmi Ko Aaya heart attackhttps://t.co/guJrSSnBYy
— Kunwer Naseem Haider (@HaiderKunwer) May 10, 2023
ದಿಲೀಪ್ನನ್ನು ತಕ್ಷಣ ಆಸ್ಪತ್ರೆಗೆ ಸಾಗಿಸಿತ್ತಾರೆ. ಆದರೆ ಆತನನ್ನು ಆಸ್ಪತ್ರೆಗೆ ಕರೆತರುವ ಮೊದಲೇ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದ್ದಾರೆ.