ಮಂಗಳೂರು: 2024 ಲೋಕಸಭಾ ಚುನಾವಣೆಯಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಭವಿಷ್ಯವನ್ನು ಬೆಳ್ತಂಗಡಿ ಹಾಗೂ ಮೂಡಬಿದ್ರೆ ಬಿಲ್ಲವ ಮತಗಳು ನಿರ್ಧರಿಸಲಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಮಂಗಳೂರು ಲೋಕಸಭೆ 2024: ಎಲ್ಲರ ಚಿತ್ತ ಬೆಳ್ತಂಗಡಿ-ಮೂಡಬಿದ್ರಿ ಬಿಲ್ಲವ ಮತಗಳ ಕಡೆಗೆ . ಚುನಾವಣಾ ದಿಕ್ಕನ್ನು ನಿರ್ಧರಿಸಲಿದೆ ಬೆಳ್ತಂಗಡಿ -ಮೂಡಬಿದ್ರಿ !.
Twitter
Facebook
LinkedIn
WhatsApp
ಸಾಂಪ್ರದಾಯಿಕವಾಗಿ ಬಿಜೆಪಿ ಪುತ್ತೂರು ಹಾಗೂ ಸುಳ್ಯದಲ್ಲಿ ಮುನ್ನಡೆ ಪಡೆಯುತ್ತವೆ. ಆದರೆ ಆ ಮುನ್ನಡೆಯನ್ನು ಬೆಳ್ತಂಗಡಿ ಹಾಗೂ ಮೂಡಬಿದ್ರಿ ಸರಿದೂಗಿಸಿದರೆ ಕಾಂಗ್ರೆಸ್ನ ಅಭ್ಯರ್ಥಿ ಪದ್ಮರಾಜ್ ವಿಜಯಿ ಆಗಬಹುದು ಎಂಬ ವಿಶ್ಲೇಷಣೆಯನ್ನು ರಾಜಕೀಯ ಪಂಡಿತರು ಮಾಡುತ್ತಿದ್ದಾರೆ.
ಒಂದು ವೇಳೆ ಬೆಳ್ತಂಗಡಿಯಲ್ಲಿ ಕಾಂಗ್ರೆಸ್ 25,000 ಕ್ಕಿಂತ ಅಧಿಕ ಹಾಗೂ ಮೂಡಬಿದ್ರೆಯಲ್ಲಿ 25,000 ಅಧಿಕ ಮುನ್ನಡೆಯನ್ನು ಪಡೆದರೆ ಸುಳ್ಯ , ಪುತ್ತೂರಿನ ಬಿಜೆಪಿ ಮುನ್ನಡೆಯನ್ನು ಇಲ್ಲಿ ಸರಿದೂಗಿಸಬಹುದು ,ಆಗ ಮಂಗಳೂರು ಕ್ಷೇತ್ರದ (ಉಳ್ಳಾಲ) ಕ್ಷೇತ್ರದ ಕಾಂಗ್ರೆಸ್ ಮುನ್ನಡೆ ಕಾಂಗ್ರೆಸ್ಸಿಗೆ ವರದಾನವಾಗಿ ಪರಿಣಮಿಸಬಹುದು ಎಂಬ ಅಭಿಪ್ರಾಯವನ್ನು ರಾಜಕೀಯ ಪಂಡಿತರು ವ್ಯಕ್ತಪಡಿಸುತ್ತಿದ್ದಾರೆ.
ಬಂಟ್ವಾಳ ಹಾಗೂ ಮಂಗಳೂರು ಉತ್ತರದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಯ ನಡುವೆ ಸಮಬಲದ ಹೋರಾಟವನ್ನು ರಾಜಕೀಯ ಪಂಡಿತರು ನಿರೀಕ್ಷಿಸುತ್ತಿದ್ದಾರೆ. ಅಲ್ಲಿ ಸಮಬಲದ ಹೋರಾಟ ಸಾಧ್ಯವಾದರೆ ಬೆಳ್ತಂಗಡಿ ಹಾಗೂ ಮೂಡಬಿದ್ರೆಯಲ್ಲಿರುವ ಅತಿ ಹೆಚ್ಚು ಬಿಲ್ಲವರು ಪದ್ಮರಾಜ್ ಕಡೆಗೆ ವಾಲಿದರೆ ಮಾತ್ರ ಮಂಗಳೂರು ಲೋಕಸಭಾ ಕ್ಷೇತ್ರದ ಚುನಾವಣೆ ಫಲಿತಾಂಶದ ದಿಕ್ಕು ಬದಲಾಗಬಹುದು ಎಂಬ ಅಭಿಪ್ರಾಯವನ್ನು ರಾಜಕೀಯ ಪಂಡಿತರು ವ್ಯಕ್ತಪಡಿಸುತ್ತಿದ್ದಾರೆ.
ಮೂಡಬಿದ್ರಿ ಹಾಗೂ ಬೆಳ್ತಂಗಡಿಯಲ್ಲಿ ಒಟ್ಟು 1 ಲಕ್ಷ 72 (ಬೆಳ್ತಂಗಡಿಯಲ್ಲಿ 92,000, ಮೂಡಬಿದ್ರೆಯಲ್ಲಿ 80,000) ಸಾವಿರಕ್ಕಿಂತಲೂ ಅಧಿಕ ಬಿಲ್ಲವರು ಮತದಾರರು ಇದ್ದಾರೆ. ಪದ್ಮರಾಜ್ ಪ್ರಭಾವ ಈ ಕ್ಷೇತ್ರದಲ್ಲಿ ಎಷ್ಟು ಇದೆ ಎಂಬುದು ಚುನಾವಣೆಯ ಫಲಿತಾಂಶ ನಿರ್ಧರಿಸಲಿದೆ ಎಂದು ರಾಜಕೀಯ ಪಂಡಿತರು ಅಭಿಪ್ರಾಯಪಡುತ್ತಾರೆ.
ಈ ಪ್ರದೇಶದಲ್ಲಿ ಬಿಲ್ಲವರು ಬದಲಾವಣೆ ಆದರೆ ಮಾತ್ರ ಕಾಂಗ್ರೆಸ್ ಮಂಗಳೂರು ಲೋಕಸಭೆಯಲ್ಲಿ ವಿಜಯಿ ಆಗಬಹುದು ಎಂಬ ಅಭಿಪ್ರಾಯವನ್ನು ರಾಜಕೀಯ ವಿಶ್ಲೇಷಕರು ವ್ಯಕ್ತಪಡಿಸುತ್ತಿದ್ದಾರೆ.
ಬೆಳ್ತಂಗಡಿ ಹಾಗೂ ಮೂಡಬಿದ್ರೆಯಲ್ಲಿ ಅಭ್ಯರ್ಥಿ ಪದ್ಮರಾಜ್ ರವರ ವೈಯಕ್ತಿಕ ಪ್ರಭಾವ ಎಷ್ಟಿದೆ ಎಂಬುದು ಇಲ್ಲಿ ಪರೀಕ್ಷೆಗೆ ಒಳಗಾಗುತ್ತಿದೆ ಎಂಬುದು ರಾಜಕೀಯ ವಿಶ್ಲೇಷಕರ ಸ್ಪಷ್ಟ ಅಭಿಪ್ರಾಯ. ಯಾಕೆಂದರೆ ಮಂಗಳೂರು (ಉಳ್ಳಾಲ), ಮಂಗಳೂರು ಉತ್ತರ (ಸುರತ್ಕಲ್), ಮಂಗಳೂರು ದಕ್ಷಿಣ, ಬಂಟ್ವಾಳ ಕ್ಷೇತ್ರಗಳಲ್ಲಿ ಅಲ್ಪಸಂಖ್ಯಾತರ ಮತಗಳು ಅತಿ ಹೆಚ್ಚು ಇರುವ ಕಾರಣ ಇಲ್ಲಿರುವ ಮುನ್ನಡೆಯಲ್ಲಿ ಅಲ್ಪಸಂಖ್ಯಾತರ ಪ್ರಭಾವ ಸ್ಪಷ್ಟವಾಗಿ ಗೋಚರವಾಗುವುದರಿಂದ, ನಿಜವಾದ ಬಿಲ್ಲವ ಪ್ರಭಾವದ ಕ್ಷೇತ್ರಗಳಾಗಿ ಮೂಡುಬಿದ್ರಿ ಹಾಗೂ ಬೆಳ್ತಂಗಡಿ ಇಲ್ಲಿ ಪ್ರಮುಖವಾಗಿದೆ.ಆ ಕಾರಣದಿಂದ ಪದ್ಮರಾಜ್ ಪರ ಬಿಲ್ಲವ ಸಂಘಟನೆಗಳು ಬೆಳ್ತಂಗಡಿ ಹಾಗೂ ಮೂಡಬಿದ್ರೆಯಲ್ಲಿ ವ್ಯಾಪಕ ಪ್ರಚಾರ ಕಾರ್ಯಗಳನ್ನು ನಡೆಸಿದ್ದವು.
ಬೆಳ್ತಂಗಡಿ ಕಾಂಗ್ರೆಸ್ ನವರ ಪ್ರಕಾರ ಈ ಬಾರಿ ನಾವು ಹೆಚ್ಚಿನ ಮತಗಳ ಲೀಡನ್ನು ಪಡೆಯುತ್ತೇವೆ ಎಂದು ವಾದಿಸುತ್ತಿದ್ದಾರೆ. ಕ್ಷೇತ್ರದಲ್ಲಿ ರಕ್ಷಿತ್ ಶಿವರಾಂ ಬೆಳ್ತ0ಗಡಿಯಲ್ಲಿ ಬಹಳಷ್ಟು ಕೆಲಸ ಮಾಡಿದ್ದಾರೆ ಹಾಗೂ ಪದ್ಮರಾಜ್ ಪ್ರಭಾವ ಬಹಳಷ್ಟು ಚೆನ್ನಾಗಿದೆ ಎಂದು ವಾದಿಸುತ್ತಿದ್ದಾರೆ.ಮೂಡಬಿದ್ರಿ ಕಾಂಗ್ರೆಸ್ನವರು ಸಹ ನಾವು ಹೆಚ್ಚಿನ ಮತಗಳನ್ನು ಪಡೆಯುತ್ತಿದ್ದೇವೆ ಎಂಬ ವಾದವನ್ನು ಮಂಡಿಸುತ್ತಿದ್ದಾರೆ. ಇಲ್ಲಿ ಪದ್ಮರಾಜ್ ಅಭ್ಯರ್ಥಿ ತನ ಪ್ರಭಾವ ಬೀರಿದೆ ಎಂದು ವಾದಿಸುತ್ತಿದ್ದಾರೆ.
ಆದರೆ ಬಿಜೆಪಿ ಕಾಂಗ್ರೆಸ್ನ ಈ ವಾದಗಳನ್ನು ತಳ್ಳಿ ಹಾಕಿದ್ದು, ಬಿಲ್ಲವರು ಈ ಎರಡು ಕ್ಷೇತ್ರಗಳಲ್ಲಿ ಯಾವುದೇ ಬದಲಾವಣೆಗಳನ್ನು ತೋರಿಸಿಲ್ಲ, ಅಭ್ಯರ್ಥಿಯು ಯಾವ ಪ್ರಭಾವ ಬೀರಿಲ್ಲ ಹಾಗೂ ಅಭ್ಯರ್ಥಿಯ ಬಗ್ಗೆ ಈ ಎರಡು ಕ್ಷೇತ್ರಗಳಲ್ಲಿ ಬಿಲ್ಲವರು ಒಲವು ತೋರಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಯಾವುದೇ ಬಿಲ್ಲವ ಮತಗಳು ಇಲ್ಲಿ ಬದಲಾವಣೆ ಆಗಿಲ್ಲ, ಅದು ಬಿಜೆಪಿಯೊಂದಿಗೆ ಹಿಂದುತ್ವದೊಂದಿಗೆ, ಮೋದಿಯೊಂದಿಗೆ ಗಟ್ಟಿಯಾಗಿ ನಿಂತಿವೆ ಎಂದು ವಾದಿಸುತ್ತಿದ್ದಾರೆ.
ಈ ಎರಡು ಅಭಿಪ್ರಾಯದ ನಂತರ ಈಗ ರಾಜಕೀಯ ಪಡೆಸಾಲೆಯಲ್ಲಿ ಕುತೂಹಲ ಮನೆ ಮಾಡಿದ್ದು ಫಲಿತಾಂಶ ಒಂದೇ ನಿಖರವಾದ ವಿವರವನ್ನು ನೀಡಬಹುದು.