ಮಂಗಳೂರು: ನಿದ್ದೆಯ ಮಂಪರಿನಲ್ಲಿ ಬಾವಿಗೆ ಬಿದ್ದ ವ್ಯಕ್ತಿ - ಚಿಕಿತ್ಸೆ ಫಲಕಾರಿಯಾಗದೆ ಮೃತ್ಯು!
Twitter
Facebook
LinkedIn
WhatsApp
ಮಂಗಳೂರು :ತೊಕ್ಕೊಟ್ಟು ಸಮೀಪದ ಕಲ್ಲಾಪುವಿನಲ್ಲಿ ಎಪ್ರಿಲ್ 15 ರ ಶನಿವಾರ ರಾತ್ರಿ ನಿದ್ದೆಯ ಮಂಪರಿನಲ್ಲಿ ವ್ಯಕ್ತಿಯೊಬ್ಬರು ಬಾವಿಗೆ ಬಿದ್ದು ಸಾವನ್ನಪ್ಪಿದ ಘಟನೆ ವರದಿಯಾಗಿದ್ದು, ಬಾವಿಗೆ ಬಿದ್ದಿರುವ ದೃಶ್ಯ ಮನೆಯ ಸಿಸಿಟಿವಿ ಕ್ಯಾಮರಾದಲ್ಲಿ ದಾಖಲಾಗಿದೆ.
ಕಲ್ಲಾಪು ನಿವಾಸಿ ವಾಲ್ಟರ್ ಮೊಂತೇರೊ (65) ಮೃತ ವ್ಯಕ್ತಿ.
ಶನಿವಾರ ಸಂಜೆ ತೊಕ್ಕೊಟ್ಟು ಚರ್ಚ್‌ಗೆ ಹೋಗಿದ್ದ ಅವರು ಸಂಜೆ 7 ಗಂಟೆ ಸುಮಾರಿಗೆ ಮನೆಗೆ ಮರಳಿದ್ದರು. ರಾತ್ರಿ 7.23ರ ಸುಮಾರಿಗೆ ಬಾವಿಯ ಕಟ್ಟೆಯ ಮೇಲೆ ಕುಳಿತಿದ್ದ ವಾಲ್ಟರ್ ಅವರು ಅಲ್ಲೆ ನಿದ್ದೆಗೆ ಜಾರಿ ಬಾವಿಗೆ ಬಿದ್ದಿದ್ದಾರೆ. ಬಾವಿ ಆಳವಿಲ್ಲದ ಕಾರಣ ಕುಟುಂಬಸ್ಥರು ಕೂಡಲೇ ಏಣಿಯ ಮೂಲಕ ಅವರನ್ನು ಮೇಲೆತ್ತಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ತಲೆಗೆ ಬಲವಾದ ಗಾಯ ಆಗಿದ್ದರಿಂದ ಸಾವನ್ನಪ್ಪಿದ್ದಾರೆ.
ಮೃತರು ಪತ್ನಿ ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.