ಮಂಗಳೂರು: ಉದ್ಯೋಗ ಕೊಡಿಸುವುದಾಗಿ ಲಕ್ಷಾಂತರ ರೂ. ವಂಚನೆ - ಎರಡು ಪ್ರಕರಣ ದಾಖಲು
ಮಂಗಳೂರು, ಏ 25 : ಪಾರ್ಟ್‌ಟೈಮ್ ಕೆಲಸ ಎಂಬ ಸಂದೇಶವಿರುವ ವಾಟ್ಸ್‌ಆ್ಯಪ್ ಖಾತೆಯ ಲಿಂಕ್ ರವಾನೆ ಹಾಗೂ ಅದರ ಮೂಲಕ ಹಣ ವರ್ಗಾವಣೆ ಮಾಡಿರುವ ಎರಡು ವಂಚನೆ ಪ್ರಕರಣಗಳು ಮಂಗಳೂರು ಸಿಇಎನ್ ಪೊಲೀಸ್ ಠಾಣೆಯಲ್ಲಿ ವರದಿಯಾಗಿವೆ.
ಮೊದಲ ಪ್ರಕರಣದಲ್ಲಿ, ಏಪ್ರಿಲ್‌ನಲ್ಲಿ 6262948264 ಸಂಖ್ಯೆಯನ್ನು ಬಳಸಿಕೊಂಡು ದೂರುದಾರರ ವಾಟ್ಸಾಪ್ ಖಾತೆಗೆ ‘ಆನ್‌ಲೈನ್‌ನಲ್ಲಿ ಪಾರ್ಟ್‌ಟೈಮ್ ಕೆಲಸ’ ಎಂಬ ಸಂದೇಶದೊಂದಿಗೆ ಲಿಂಕ್ ಅನ್ನು ಕಳುಹಿಸಿದ್ದಾರೆ. ಕೆಲಸಗಳನ್ನು ಮಾಡಲು URL ಅನ್ನು ಬಳಸಲು ಸೂಚಿಸಲಾಗಿದ್ದು, ನಂತರ ದೂರುದಾರರ ಖಾತೆಯಿಂದ ಕ್ರಮೇಣವಾಗಿ 3,01,505 ರೂ. ವಂಚಿಸಲಾಗಿದೆ.
ಎರಡನೇ ಪ್ರಕರಣದಲ್ಲಿ, ದೂರುದಾರರ ವಾಟ್ಸಾಪ್ ಖಾತೆಗೆ 8969209811 ಸಂಖ್ಯೆಯಿಂದ ‘ಪಾರ್ಟ್‌ಟೈಮ್ ಜಾಬ್ ಆನ್‌ಲೈನ್ ಅಮೆಜಾನ್ ವ್ಯವಹಾರ’ ವಿಷಯದ ಸಂದೇಶ ಬಂದಿದೆ. ನಂತರ ಟೆಲಿಗ್ರಾಮ್‌ಗೆ ಸೈನ್ ಅಪ್ ಮಾಡಲು ಸೂಚಿಸಲಾಗಿದೆ. ಬಳಿಕ ಅದರಲ್ಲಿ ಕೆಲಸ ನಿರ್ವಹಿಸಿ ಹಣ ಗಳಿಸಬಹುದು ಎಂದು ಹೇಳಿಕೊಂಡಿದ್ದರು. ದೂರುದಾರರು 200 ರೂ.ಗಳನ್ನು ಪಾವತಿಸಿದ್ದಾರೆ. ಅದಕ್ಕೆ ಅಪರಿಚಿತ ವ್ಯಕ್ತಿ 395 ರೂ. ತನ್ನ ಲಾಭವನ್ನು ಹೆಚ್ಚಿಸುವುದಾಗಿ ಹೇಳಿ ಕಂತುಗಳಲ್ಲಿ ಒಟ್ಟು 3.30 ಲಕ್ಷ ರೂ. ವಂಚಿಸಿದ್ದಾರೆ.
ಈ ಬಗ್ಗೆ ಮಂಗಳೂರು ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.