ಶನಿವಾರ, ಮೇ 18, 2024
ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!-ಎವರೆಸ್ಟ್ ಚಿಕನ್ ಮಸಾಲಾ ಬಳಸದಂತೆ ಆಹಾರ ಸುರಕ್ಷತಾ ಅಧಿಕಾರಿ ಸೂಚನೆ-Matthew Hayden: ಮ್ಯಾಥ್ಯೂ ಹೇಡನ್ ಅವರ ಮಗಳು ಎಸ್‌ಆರ್‌ಹೆಚ್ ಅಭಿಮಾನಿಗಳೊಂದಿಗೆ ಹೈದರಾಬಾದಿ ಬಿರಿಯಾನಿ ತಿನ್ನುವ ವಿಡಿಯೋ ವೈರಲ್!-ಅರವಿಂದ್ ಕೇಜ್ರಿವಾಲ್‌ ಆಪ್ತ ಸಹಾಯಕ ಬಿಭವ್‌ ಕುಮಾರ್‌ ಅರೆಸ್ಟ್‌-ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಭಾರತದಲ್ಲಿ ಇನ್ಮುಂದೆ 5G ದುನಿಯಾ – ಹೇಗಿರಲಿದೆ 5G? 5G ಎಂದರೇನು? ..

Twitter
Facebook
LinkedIn
WhatsApp
ಭಾರತದಲ್ಲಿ ಇನ್ಮುಂದೆ 5G ದುನಿಯಾ – ಹೇಗಿರಲಿದೆ 5G? 5G ಎಂದರೇನು? ..

5G, ಭಾರತೀಯ ಟೆಲಿಕಾಂ (Telecom) ಜಗತ್ತಿನಲ್ಲಿ ಸದ್ಯ ಚರ್ಚೆಯಲ್ಲಿರುವ ಅತಿದೊಡ್ಡ ಸುದ್ದಿ. 5G ಎಂಬುದು ಐದನೇ ತಲೆಮಾರಿನ ಇಂಟರ್ನೆಟ್ (Internet) ಸೌಲಭ್ಯ, ಸರಳವಾಗಿ ಹೇಳುವುದಾದರೆ ವೇಗದ ಡೌನ್ಲೋಡ್ (Download) ಮತ್ತು ವೇಗದ ಅಪ್ಲೋಡ್ ಸೇವೆಯನ್ನು ನೀಡುವ ಇಂಟರ್ನೆಟ್. 5G ಬರುತ್ತಂತೆ, ಹೇಗಿರುತ್ತೋ ಎನೋ ಅನ್ನೋ ಕೂತಹಲದ ಮಾತುಗಳು ಎಲ್ಲೆಡೆ ಕೇಳಿಬರುತ್ತಿವೆ. ಇದೀಗ 5G ಸೇವೆಗೆ ಪ್ರಾರಂಭಕ್ಕೆ ಮುಹೂರ್ತ ನಿಗದಿಯಾಗಿದ್ದು, ಕೌಂಟ್ ಡೌನ್ ಶುರುವಾಗಿದೆ.

ಹೌದು.. ಅ.1 ರಂದು ನಡೆಯಲಿರುವ ಇಂಡಿಯಾ ಮೊಬೈಲ್ ಕಾಂಗ್ರೆಸ್ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದಲ್ಲಿ 5G ಸೇವೆಗಳನ್ನು ಪ್ರಾರಂಭವಾಗಲಿದ್ದು, 5ಜಿ ನೆಟ್‌ವರ್ಕ್ ಗೆ ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ.

ಈ ಕುರಿತು ಸರ್ಕಾರದ ರಾಷ್ಟ್ರೀಯ ಬ್ರಾಡ್‌ಬ್ಯಾಂಡ್ ಮಿಷನ್ ಶನಿವಾರ ಟ್ವೀಟ್ ಮಾಡಿದ್ದು, ದೇಶದ ಪ್ರಮುಖ ನಗರಗಳಾದ ಅಹಮದಾಬಾದ್, ಬೆಂಗಳೂರು, ಚಂಡೀಗಢ, ಚೆನ್ನೈ, ದೆಹಲಿ, ಗಾಂಧಿನಗರ, ಗುರುಗ್ರಾಮ್, ಹೈದರಾಬಾದ್, ಜಾಮ್‌ನಗರ, ಕೋಲ್ಕತ್ತಾ, ಲಕ್ನೋ, ಮುಂಬೈ ಮತ್ತು ಪುಣೆಯಲ್ಲಿ ಹೈಸ್ಪೀಡ್ 5G ಇಂಟರ್ನೆಟ್ ಅನ್ನು ಪ್ರಾರಂಭಿಸಲಾಗುತ್ತಿದೆ ಎಂದು ಹೇಳಿದೆ.
ಭಾರತದ ಡಿಜಿಟಲ್ ರೂಪಾಂತರ ಮತ್ತು ಸಂಪರ್ಕವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ಉದ್ದೇಶದಿಂದ ಗೌರವಾನ್ವಿತ ಪ್ರಧಾನಿ ನರೇಂದ್ರ ಮೋದಿ ಅವರು ಭಾರತದಲ್ಲಿ 5ಜಿ ಸೇವೆಗಳನ್ನು ಹೊರತರಲಿದ್ದಾರೆ. ಏಷ್ಯಾದ ಅತಿದೊಡ್ಡ ತಂತ್ರಜ್ಞಾನ ಪ್ರದರ್ಶನ ಇಂಡಿಯಾ ಮೊಬೈಲ್ ಕಾಂಗ್ರೆಸ್‌ನಲ್ಲಿ ಅವರು 5ಜಿಗೆ ಚಾಲನೆ ನೀಡಲಿದ್ದಾರೆ,’ ಎಂದು ಅದು ಹೇಳಿದೆ.

ಭಾರತದಲ್ಲಿ ಇನ್ಮುಂದೆ 5G ದುನಿಯಾ – ಹೇಗಿರಲಿದೆ 5G? 5G ಎಂದರೇನು? ..

5ಜಿ ತಂತ್ರಜ್ಞಾನವು ಭಾರತಕ್ಕೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ ಎಂದು ತಜ್ಞರು ಹೇಳಿದ್ದಾರೆ. ಇದು 2023 ಮತ್ತು 2040ರ ನಡುವೆ ಭಾರತೀಯ ಆರ್ಥಿಕತೆಗೆ 36.4 ಲಕ್ಷ ಕೋಟಿ ರೂ. (455 ಬಿಲಿಯನ್‌ ಡಾಲರ್‌) ಪ್ರಯೋಜನವನ್ನು ನೀಡುವ ಸಾಧ್ಯತೆಯಿದೆ ಎಂದು ಮೊಬೈಲ್ ನೆಟ್‌ವರ್ಕ್ ಆಪರೇಟರ್‌ಗಳನ್ನು ಪ್ರತಿನಿಧಿಸುವ ಜಾಗತಿಕ ಉದ್ಯಮ ಸಂಸ್ಥೆಯ ಇತ್ತೀಚಿನ ವರದಿಯು ಅಂದಾಜಿಸಿದೆ.
ಏಷ್ಯಾದ ಅತಿದೊಡ್ಡ ಟೆಲಿಕಾಂ, ಮಾಧ್ಯಮ ಮತ್ತು ತಂತ್ರಜ್ಞಾನ ವೇದಿಕೆ ಎಂದು ಹೇಳಿಕೊಳ್ಳುವ ಇಂಡಿಯಾ ಮೊಬೈಲ್ ಕಾಂಗ್ರೆಸ್ (ಐಎಂಸಿ), ದೂರಸಂಪರ್ಕ ಇಲಾಖೆ (ಡಿಒಟಿ) ಮತ್ತು ಸೆಲ್ಯುಲರ್ ಆಪರೇಟರ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ಸಿಒಎಐ) ಜಂಟಿಯಾಗಿ ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, 5ಜಿ ತಂತ್ರಜ್ಞಾನವು ಭಾರತಕ್ಕೆ ಹೆಚ್ಚು ಪ್ರಯೋಜನವನ್ನು ನೀಡುತ್ತದೆ ಎಂದು ತಜ್ಞರು ಹೇಳಿದ್ದಾರೆ.

2023 ಮತ್ತು 2040ರ ನಡುವೆ ಭಾರತೀಯ ಆರ್ಥಿಕತೆಗೆ 36.4 ಲಕ್ಷ ಕೋಟಿ ರೂ. (455 ಬಿಲಿಯನ್‌ ಡಾಲರ್‌) ಪ್ರಯೋಜನವನ್ನು ನೀಡುವ ಸಾಧ್ಯತೆಯಿದೆ ಎಂದು ಮೊಬೈಲ್ ನೆಟ್‌ವರ್ಕ್ ಆಪರೇಟರ್‌ಗಳನ್ನು ಪ್ರತಿನಿಧಿಸುವ ಜಾಗತಿಕ ಉದ್ಯಮ ಸಂಸ್ಥೆಯ ಇತ್ತೀಚಿನ ವರದಿಯು ಅಂದಾಜಿಸಿದೆ.
2030ರ ವೇಳೆಗೆ ಭಾರತದ ಒಟ್ಟು ಸಂಪರ್ಕಗಳ ಮೂರನೇ ಒಂದು ಭಾಗಕ್ಕಿಂತ ಹೆಚ್ಚಿನವು 5ಜಿ ಸಂಪರ್ಕಗಳಾಗಿರಲಿವೆ. 2ಜಿ ಮತ್ತು 3ಜಿ ಯ ಪಾಲು ಶೇ. 10ಕ್ಕಿಂತ ಕಡಿಮೆಯಿರುತ್ತದೆ ಎಂದು ಜಿಎಸ್‌ಎಂಎ (ಗ್ಲೋಬಲ್ ಸಿಸ್ಟಮ್ ಫಾರ್ ಮೊಬೈಲ್ ಕಮ್ಯುನಿಕೇಷನ್ಸ್) ವರದಿ ಹೇಳಿದೆ. ಭಾರತದ ಹೆಚ್ಚಿನ ಪ್ರಮಾಣದ 4ಜಿ ಬಳಕೆದಾರರು (ಶೇ. 79ರಷ್ಟು) 5ಜಿಗೆ ಪರಿವರ್ತನೆ ಹೊಂದಲು ಸಿದ್ಧವಾಗಿದ್ದಾರೆ ಎಂದೂ ವರದಿ ತಿಳಿಸಿದೆ.

5G ಎಂದರೇನು..?
ಜಗತ್ತಿನ ವಯರ್ ಲೆಸ್ ಸ್ಟ್ಯಾಂಡರ್ಡ್ ಗಳಾದ 1G, 2G, 3G ಮತ್ತು 4G ನಂತರದ ಹೊಸ ನೆಟ್‌ವರ್ಕ್ ಆವೃತ್ತಿಯೇ 5G. ಅಲ್ಟ್ರಾ ಕಡಿಮೆ-ಲೇಟೆನ್ಸಿ (ಮಾಹಿತಿಯನ್ನು ಕಳಿಸುವ ಮತ್ತು ಸ್ವೀಕರಿಸುವ ನಡುವಿನ ವಿಳಂಬ), ಹೆಚ್ಚು ವಿಶ್ವಾಸಾರ್ಹತೆ, ದೊಡ್ಡ ನೆಟ್‌ವರ್ಕ್ ಸಾಮರ್ಥ್ಯ, ಹೆಚ್ಚಿದ ಲಭ್ಯತೆ ಮತ್ತು ಹೆಚ್ಚು ಏಕರೂಪತೆಯನ್ನು ಒದಗಿಸುವ ಇತ್ತೀಚಿನ ನೆಟ್‌ವರ್ಕ್ ಮಾನದಂಡವಾಗಿದೆ.

ಭಾರತದಲ್ಲಿ ಯಾವ 5G ಬ್ಯಾಂಡ್ ಅನ್ನು ಬಳಸಲಾಗುವುದು…?
ಪ್ರಸ್ತುತ 4G ಸೇವೆಗಳ ಮೂಲಕ ಸಾಧ್ಯವಾಗುವುದಕ್ಕಿಂತ ಸುಮಾರು 10 ಪಟ್ಟು ಹೆಚ್ಚಿನ ವೇಗ ಮತ್ತು ಸಾಮರ್ಥ್ಯಗಳನ್ನು ಒದಗಿಸುವ ಸಾಮರ್ಥ್ಯವನ್ನು ಹೊಂದಿರುವ 5G ತಂತ್ರಜ್ಞಾನ ಆಧಾರಿತ ಸೇವೆಗಳನ್ನು ತರಲು ಟೆಲಿಕಾಂ ಸೇವಾ ಪೂರೈಕೆದಾರರಿಂದ ಮಿಡ್ ಮತ್ತು ಹೈ ಬ್ಯಾಂಡ್ ಸ್ಪೆಕ್ಟ್ರಮ್ ಅನ್ನು ಬಳಸಿಕೊಳ್ಳಲಾಗುತ್ತದೆ ಎಂದು ಹೇಳಲಾಗುತ್ತಿದೆ.

4G ಮತ್ತು 5G ನಡುವಿನ ವ್ಯತ್ಯಾಸವೇನು…?
4Gಗೆ ಹೋಲಿಸಿದರೆ, 5G ಹೆಚ್ಚು ಸಾಮರ್ಥ್ಯದ ಇಂಟರ್ಫೇಸ್ ಆಗಿದೆ. 4G 150mbps ವರೆಗಿನ ವೇಗವನ್ನು ನೀಡಿದರೆ, 5G 10Gbps ಡೌನ್‌ಲೋಡ್ ವೇಗದ ಸಾಮರ್ಥ್ಯವನ್ನು ಹೊಂದಿದೆ. ಇದು 4G ಸಾಮರ್ಥ್ಯಕ್ಕಿಂತ ಹತ್ತು ಪಟ್ಟು ಹೆಚ್ಚು ಡೇಟಾವನ್ನು ಹೊಂದಿದೆ. ಇದಕ್ಕೆ ಒಂದು ಉದಾಹರಣೆ ನೀಡುವುದಾದರೆ, 5G ಮೂಲಕ ಬಳಕೆದಾರರು ಮೂರು ಗಂಟೆಗಳ ಕಾಲಾವಧಿಯ ಹೈಡೆಫಿನಿಶನ್ ಸಿನಿಮಾವೊಂದನ್ನು (ಹೆಚ್ಡಿ) ಸೆಕೆಂಡುಗಳಲ್ಲಿ ಡೌನ್‌ಲೋಡ್ ಮಾಡಬಹುದು.
ವಿಶೇಷವಾಗಿ 5Gಯನ್ನು ಕೇವಲ ಮೊಬೈಲ್ ನೆಟ್ವರ್ಕ್ ಗೆ ಮಾತ್ರವಲ್ಲದೆ ಇತರೆ ತಂತ್ರಜ್ಞಾನ ಸಾಧನಗಳು, ಎಲೆಕ್ಟ್ರಾನಿಕ್ಸ್ ವಸ್ತುಗಳು ಮತ್ತು ಜನರನ್ನು ಸಂಪರ್ಕಿಸುವ ಒಂದು ವಿಶಿಷ್ಟ ರೀತಿಯ ತಂತ್ರಜ್ಞಾನವಾಗಿ ವಿನ್ಯಾಸಗೊಳಿಸಲಾಗಿದೆ.

ಭಾರತದಲ್ಲಿ 4G ಗಿಂತ 5G ಹೆಚ್ಚು ದುಬಾರಿಯಾಗುವುದೇ..?
ಪ್ರಸ್ತುತ ಲಭ್ಯವಿರುವ ಮಾಹಿತಿ ಅನ್ವಯ ಭಾರತದಲ್ಲಿ 5G ಪ್ಲಾನ್‌ಗಳ ಬೆಲೆ ಹೇಗೆ ಇರುತ್ತದೆ ಎಂಬುದರ ಕುರಿತು ಮಾಹಿತಿಯಿಲ್ಲದಿದ್ದರೂ, 4Gಗಾಗಿ ನಾವು ಪಾವತಿಸುತ್ತಿರುವುದಕ್ಕಿಂತ ಸ್ವಲ್ಪ ಬೆಲೆ ಹೆಚ್ಚಾಗಿರುತ್ತದೆ. ಭಾರತವು ವಿಶ್ವದ ಅತ್ಯಂತ ಅಗ್ಗದ ಇಂಟರ್ನೆಟ್ ಅನ್ನು ಹೊಂದಿದೆ ಮತ್ತು ಇದು 5G ಬಂದ ನಂತರ ಬದಲಾಗುವ ನಿರೀಕ್ಷೆಯಿಲ್ಲ.

5Gಗೆ ಹೊಸ ಮೊಬೈಲ್ ಟವರ್‌ಗಳ ಅಗತ್ಯವಿದೆಯೇ..?
ನಿಮ್ಮ ಮೊಬೈಲ್ ಡೇಟಾ, ವೈ-ಫೈ ಮತ್ತು ಉಪಗ್ರಹ ಸಂವಹನಗಳಲ್ಲಿ ಪ್ರಸ್ತುತ ಬಳಸುತ್ತಿರುವ ಅದೇ ರೇಡಿಯೊ ಆವರ್ತನಗಳಲ್ಲಿ 5G ರನ್ ಆಗುತ್ತದೆ. ಒಂದೇ ತರಂಗಾಂತರಗಳಲ್ಲಿ 5G ಚಲಿಸುವುದರಿಂದ ಸೇವೆಗಳನ್ನು ನಿಯೋಜಿಸಲು ಟೆಲಿಕಾಂ ಪೂರೈಕೆದಾರರು ತಮ್ಮ ಟವರ್‌ಗಳನ್ನು ಬದಲಾಯಿಸಬೇಕಾಗಿಲ್ಲ.

5Gಯ ಇತರೆ ಸಾಮರ್ಥ್ಯ ಏನು..?
5G ನೆಟ್‌ವರ್ಕ್ ಸಂಪರ್ಕವನ್ನು ಸುಧಾರಿಸುವುದಕ್ಕಿಂತ ಹೊರತಾಗಿ ಹೆಚ್ಚಿನ ಸಾಮರ್ಥ್ಯ ಹೊಂದಿದೆ. ಇದನ್ನು ಐಒಟಿ, ಆಟೋ ಮೊಬೈಲ್, ಮೆಡಿಕಲ್ ಹೀಗೆ ನಾನಾ ಕ್ಷೇತ್ರಗಳಲ್ಲಿ ಬಳಸಲಾಗುತ್ತದೆ. ಪ್ರಪಂಚದ ಕೆಲವು ಪ್ರಮುಖ ಸಮಸ್ಯೆಗಳನ್ನು ನಿಭಾಯಿಸಲು ನೈಜ ಸಮಯದಲ್ಲಿ ಮಾಹಿತಿಯನ್ನು ಸಂಗ್ರಹಿಸುವ ಮತ್ತು ಹಂಚಿಕೊಳ್ಳುವ ಶತಕೋಟಿ ಸಾಧನಗಳನ್ನು ಹೊಂದಿರುವ ಸಾಧ್ಯತೆಯನ್ನು ಇದು ತರುತ್ತದೆ. 5G ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆಯ ಜಾಗದಲ್ಲಿ ಅನೇಕ ಸಾಧ್ಯತೆಗಳನ್ನು ತೆರೆಯುತ್ತದೆ, ಏಕೆಂದರೆ ವಿಜ್ಞಾನಿಗಳು ತಮ್ಮ ಸಿಸ್ಟಮ್‌ಗಳಲ್ಲಿ ಹೆಚ್ಚು ಹೆಚ್ಚು ಡೇಟಾವನ್ನು ಪ್ರೋಗ್ರಾಮ್ ಮಾಡಲು ಸಾಧ್ಯವಾಗುತ್ತದೆ. ಇದರಿಂದಾಗಿ ತ್ವರಿತ ಫಲಿತಾಂಶಗಳು ಮತ್ತು ತ್ವರಿತ ಪರಿಹಾರಗಳು ದೊರೆಯುತ್ತವೆ. 5G ಮೂಲಭೂತವಾಗಿ ಅನೇಕ ವಿಷಯಗಳ ಅಭಿವೃದ್ಧಿಯನ್ನು ವೇಗಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.! Twitter Facebook LinkedIn WhatsApp ಪುತ್ತೂರು : ವರ (Groom) ಬೇಕು, ವಧು (Bride) ಬೇಕಾಗಿದ್ದಾರೆ ಎಂಬಂತಹ ಅನೇಕ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.! Twitter Facebook LinkedIn WhatsApp ಉಡುಪಿ: ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ

ಅಂಕಣ