ಶನಿವಾರ, ಮೇ 18, 2024
ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ-Gold Rate : ಚಿನ್ನದ ಬೆಲೆ ಮತ್ತಷ್ಟು ದುಬಾರಿ.!-ಅಮಿತ್ ಶಾ ಪ್ರಧಾನಿಯಾಗಲು ವೇದಿಕೆ ಸಜ್ಜಾಗಿದೆ; ಹೇಳಿಕೆ ಪುನರುಚ್ಚರಿಸಿದ ಕೇಜ್ರಿವಾಲ್..!-ಮನೆಯ ಬಾತ್ ರೂಂ ನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ.!-ಪತ್ನಿಗೆ ವಿಡಿಯೋ ಕಾಲ್ ಮಾಡಿ ನೇಣು ಬಿಗಿದುಕೊಂಡಂತೆ ಹೆದರಿಸುವಾಗಲೇ ಪತಿ ಸಾವು..!-ಮೇ 31 ರಂದು ಕೇರಳಕ್ಕೆ ಪ್ರವೇಶಿಸಲಿದೆ ನೈರುತ್ಯ ಮುಂಗಾರು.!-ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೈದ ಸಚಿನ್ ತೆಂಡೂಲ್ಕರ್ ಸೆಕ್ಯುರಿಟಿ ಗಾರ್ಡ್.!-Gold Price: ಆಭರಣ ಪ್ರಿಯರಿಗೆ ಇಂದಿನ ಚಿನ್ನ - ಬೆಳ್ಳಿಯ ದರ ಹೇಗಿದೆ.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಬ್ರೆಜಿಲ್‍ನ ಎರಡು ಶಾಲೆಗಳಲ್ಲಿ ಶೂಟೌಟ್‌ – ಟೀಚರ್ ಸೇರಿ 3 ಸಾವು, 13 ಮಂದಿಗೆ ಗಾಯ

Twitter
Facebook
LinkedIn
WhatsApp
ಬ್ರೆಜಿಲ್‍ನ ಎರಡು ಶಾಲೆಗಳಲ್ಲಿ ಶೂಟೌಟ್‌ – ಟೀಚರ್ ಸೇರಿ 3 ಸಾವು, 13 ಮಂದಿಗೆ ಗಾಯ

ಬ್ರೆಸಿಲಿಯಾ: ಹಳೆಯ ವಿದ್ಯಾರ್ಥಿಯೋರ್ವ ತಾನು ಈ ಹಿಂದೆ ಕಲಿತಿದ್ದ 2 ಶಾಲೆಗೆ (Schools) ಶಸ್ತ್ರಧಾರಿಯಾಗಿ ಬಂದು ಶೂಟೌಟ್‌ (Shootout) ನಡೆಸಿ ಮೂವರನ್ನು ಕೊಂದು 13 ಜನರನ್ನು ಗಾಯಗೊಳಿಸಿರುವ ಘಟನೆ ಸೌತ್‍ಈಸ್ಟರ್ನ್ ಬ್ರೆಜಿಲ್‍ನಲ್ಲಿ (Brazil)  ನಡೆದಿದೆ.

ಬ್ರೆಜಿಲ್‍ನ ಎಸ್ಪಿರಿಟೊ ಸ್ಯಾಂಟೋ ರಾಜ್ಯದ ಅರಾಕ್ರೂಜ್ ಪಟ್ಟಣದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಶೂಟೌಟ್‌ ನಡೆದಿದೆ. ಈ ಹಿಂದೆ ಅದೇ ಶಾಲೆಯಲ್ಲಿ ಕಲಿತಿದ್ದ ವಿದ್ಯಾರ್ಥಿಯೋರ್ವ ಸೆಮಿಆಟೋಮ್ಯಾಟಿಕ್ ಗನ್ (Gun) ಹಿಡಿದು ಬುಲೆಟ್ ಪ್ರೂಪ್ ಜಾಕೆಟ್ ಧರಿಸಿ ಶಾಲೆಗೆ ಪ್ರವೇಶಿಸಿ ಗುಂಡು ಹಾರಿಸಿದ್ದಾನೆ. ಘಟನೆಯಲ್ಲಿ 2 ಟೀಚರ್ (Teacher) ಮತ್ತು ಓರ್ವ ವಿದ್ಯಾರ್ಥಿ (Student) ಸಾವನ್ನಪ್ಪಿದ್ದು, 13 ಮಂದಿ ಗಾಯಗೊಂಡಿದ್ದಾರೆ. 

ಘಟನೆ ನಡೆದು ನಾಲ್ಕು ಘಂಟೆಗಳ ಬಳಿಕ 16 ವರ್ಷದ ಶೂಟರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಬಂಧನಕ್ಕೊಳಗಾದ ಬಾಲಕ ಶೂಟೌಟ್‌ ನಡೆಸಿದ ಶಾಲೆಯಲ್ಲಿ ಈ ಹಿಂದೆ ವಿದ್ಯಾರ್ಥಿಯಾಗಿದ್ದ ಈತನ ತಂದೆ ಸೈನ್ಯದಲ್ಲಿ ಕೆಲಸ ನಿರ್ವಹಿಸುತ್ತಿದ್ದು, ಮನೆಯಲ್ಲಿದ್ದ ಗನ್ ಅನ್ನು ಕೃತ್ಯಕ್ಕೆ ಬಳಸಿದ್ದಾನೆ. 

ಶಾಲೆಯಲ್ಲಿ ಬ್ರೇಕ್ ಟೈಮ್ ನೋಡಿಕೊಂಡು ಆರೋಪಿ ದಾಳಿ ನಡೆಸಿದ್ದಾನೆ. ಗಾಯಗೊಂಡ 13 ಜನರ ಪೈಕಿ ಸಿಬ್ಬಂದಿ ಹಾಗೂ ಇಬ್ಬರು ಮಕ್ಕಳು ಸೇರಿದ್ದು, ಗಾಯಾಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ