ಬೇಸಿಗೆಯಲ್ಲಿ ತಂಪಾದ ಪಾನೀಯವನ್ನು ಮಾಡಲು ಉಪಯೋಗಿಸುವ ಕರ್ಬೂಜದ ಹಣ್ಣಿನ ಬಗ್ಗೆ ನಿಮಗೆಷ್ಟು ತಿಳಿದಿದೆ
ಬೇಸಿಗೆ ಶುರುವಾಗಿರುವುದರಿಂದ ಇನ್ನು ಹೆಚ್ಚೆಚ್ಚು ನೀರು ಹಾಗೂ ನೀರನಾಂಶ ಇರುವ ಆಹಾರವನ್ನು ಸೇವಿಸಲು ಮರೆಯಬೇಡಿ. ಬೇಸಿಗೆಯ ತಿಂಗಳುಗಳು ಆಯಾಸವಾಗಬಹುದು. ಈ ಸಂದರ್ಭದಲ್ಲಿ ಸಾಕಷ್ಟು ನೀರು ಮತ್ತು ಹಣ್ಣಿನ ಸೇವನೆ ಸೇರಿದಂತೆ ಸರಿಯಾದ ಆಹಾರವು ದೇಹ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಹೆಚ್ಚಿನ ನೀರಿನ ಅಂಶ ಮತ್ತು ಪುನಶ್ಚೇತನಗೊಳಿಸುವ ಪೋಷಕಾಂಶಗಳನ್ನು ಹೊಂದಿರುವ ಹಣ್ಣುಗಳು ಬೇಸಿಗೆ ತಿಂಗಳುಗಳಲ್ಲಿ ವರದಾನವಾಗಿದೆ. ಕರ್ಬೂಜ ಹಣ್ಣು(Muskmelon Fruit) ಈ ಋತುವಿನಲ್ಲಿ ನಿಮ್ಮ ಆಹಾರದಲ್ಲಿ ಸೇರಿಸಬಹುದಾದ ಅತ್ಯಗತ್ಯ ಹಣ್ಣು. ಇದು ಹೈಡ್ರೇಟಿಂಗ್ ಮಾತ್ರವಲ್ಲದೇ ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಕೂಡ ಒದಗಿಸುತ್ತದೆ. ಈ ಹಣ್ಣಿನ ಉಪಯೋಗಗಳ ಪಟ್ಟಿ ಹೀಗಿದೆ…
ಕರ್ಬೂಜ ಹಣ್ಣಿನಲ್ಲಿರುವ ನೀರಿನ ಅಂಶವು ಪಚನ ಕ್ರಿಯೆಗೆ ಸಹಾಯ ಮಾಡುತ್ತೆ. ಅಸಿಡಿಟಿ ಸಮಸ್ಯೆ ಇದ್ದವರು ಈ ಹಣ್ಣನ್ನು ತಪ್ಪದೇ ತಿನ್ನಿ, ಇದರಲ್ಲಿರುವ ಖನಿಜಾಂಶವು ಜಠರದಲ್ಲಿ ಜೀರ್ಣಕ್ರಿಯೆಗೆ ತಡೆಯೊಡ್ಡುವ ಅಸಿಡಿಟಿಯನ್ನು ನಿವಾರಿಸುತ್ತದೆ.
ಈ ಹಣ್ಣಿನ ಸೇವನೆಯಿಂದ ದೇಹದಲ್ಲಿ ಹೆಚ್ಚಿನ ಪ್ರಮಾಣದ ಬಿಳಿರಕ್ತಕಣಗಳ ಉತ್ಪತ್ತಿ ಆಗುತ್ತದೆ. ಆಗುವ ಮೂಲಕ ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ. ಕರ್ಬೂಜ ಹಣ್ಣಿನಲ್ಲಿ ವಿಟಮಿನ್ ಸಿ ಅಂಶವಿದ್ದು, ಇದು ಕೂಡಾ ರೋಗ ನಿರೋಧಕ ಶಕ್ತಿಯ ಹೆಚ್ಚಳಕ್ಕೆ ಕಾರಣವಾಗಿದೆ.
ಹೃದಯವನ್ನು ಆರೋಗ್ಯವಾಗಿಡುತ್ತದೆ: ಸೀಬೆಹಣ್ಣುಗಳು ಪೊಟ್ಯಾಸಿಯಮ್ನಲ್ಲಿ ಸಮೃದ್ಧವಾಗಿವೆ. ಇದು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದಾಗಿ ಹೃದಯ ಆರೋಗ್ಯಕರವಾಗಿರುತ್ತದೆ. ಅಲ್ಲದೆ, ಮಸ್ಕ್ಮೆಲೋನ್ನಲ್ಲಿರುವ ಅಡೆನೊಸಿನ್ ರಕ್ತವನ್ನು ತೆಳುಗೊಳಿಸುವ ಗುಣಗಳನ್ನು ಹೊಂದಿದೆ. ಇದು ಹೃದಯದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ನಿಮ್ಮ ಕಣ್ಣುಗಳಿಗೆ ಒಳ್ಳೆಯದು: ಕರ್ಬೂಜ ಹಣ್ಣಿನಲ್ಲಿರುವ ಹೆಚ್ಚಿನ ಪ್ರಮಾಣದ ವಿಟಮಿನ್ ಎ ಮತ್ತು ಬೀಟಾ ಕ್ಯಾರೋಟಿನ್ ದೃಷ್ಟಿಯನ್ನು ಚುರುಕುಗೊಳಿಸಲು ಸಹಾಯ ಮಾಡುತ್ತದೆ ಮತ್ತು ಕಣ್ಣಿನ ಪೊರೆಗಳ ಬೆಳವಣಿಗೆಯ ಅಪಾಯವನ್ನು ಕಡಿಮೆ ಮಾಡುತ್ತದೆ.
ತೂಕ ಇಳಿಸಲು ಸಹಕಾರಿ:
ಕರ್ಬೂಜ ಹಣ್ಣಿನಲ್ಲಿ ಸೋಡಿಯಂ ಅಂಶ ಮಿತವಾಗಿದೆ. ಕ್ಯಾಲೋರಿಗಳು ಸಹ ಕಡಿಮೆ ಇರುವುದರಿಂದ ಇದು ಕೊಲೆಸ್ಟ್ರಾಲ್ ರಹಿತ ಹಣ್ಣು ಹಾಗಾಗಿ ಇದನ್ನು ತಿಂದರೆ ಹೊಟ್ಟೆಯೂ ತುಂಬುತ್ತದೆ ಆದರೆ ತೂಕ ಹೆಚ್ಚಾಗುವುದಿಲ್ಲ.
ಮೂತ್ರಪಿಂಡದ ಕಲ್ಲುಗಳನ್ನು ತಡೆಯುತ್ತದೆ: ಆಕ್ಸಿಕಿನ್ ಎಂಬ ಕಸ್ತೂರಿಯ ಸಾರವು ಮೂತ್ರಪಿಂಡದ ಅಸ್ವಸ್ಥತೆಗಳು ಮತ್ತು ಕಲ್ಲುಗಳನ್ನು ಗುಣಪಡಿಸುವ ಗುಣಗಳನ್ನು ಸಾಬೀತುಪಡಿಸಿದೆ. ಕರ್ಬೂಜದಲ್ಲಿರುವ ಹೆಚ್ಚಿನ ನೀರಿನ ಅಂಶ ಮೂತ್ರಪಿಂಡಗಳನ್ನು ಶುದ್ಧೀಕರಿಸುತ್ತದೆ.
ದೇಹದ ಬೊಜ್ಜನ್ನು ಕರಗಿಸುತ್ತದೆ: ದೇಹದ ತೂಕ ಅಧಿಕವಾಗಿದ್ದರೆ ಕರ್ಬೂಜ ಹಣ್ಣನ್ನು ಹೆಚ್ಚಾಗಿ ಸೇವಿಸಿ. ಕರ್ಬೂಜ ಹಣ್ಣಿನಲ್ಲಿ ಇತರ ಹಣ್ಣುಗಳಿಗೆ ಹೋಲಿಸಿದರೆ ಬಹಳಷ್ಟು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ಆಹಾರ ಸೇವನೆಗಳ ಮಧ್ಯೆ ಹಸಿವೆಯಿಂದ ಬಳಲುವವರು ಕರ್ಬೂಜ ಹಣ್ಣನ್ನು ಸೇವನೆ ಮಾಡಬಹುದು. ಇದರಲ್ಲಿರುವ ಅತಿ ಹೆಚ್ಚಿನ ನೀರಿನ ಅಂಶ ಮನುಷ್ಯನ ದೇಹ ಡಿ-ಹೈಡ್ರೇಟ್ ಆಗದಂತೆ ನೋಡಿಕೊಳ್ಳುತ್ತದೆ.
ಹಲ್ಲು ನೋವಿಗೆ ಪರಿಹಾರ:
ಈ ಹಣ್ಣಿನ ಸಿಪ್ಪೆಯಲ್ಲೂ ಹೆಚ್ಚು ಪೋಷಕಾಂಶಗಳಿದ್ದು, ಇದರ
ಸಿಪ್ಪೆಯನ್ನು ನೀರಿನಲ್ಲಿ ಕುದಿಸಿ, ತಣ್ಣಗೆ ಮಾಡಿ ಬಾಯಿ ಮುಕ್ಕಳಿಸಿದ್ರೆ ಹಲ್ಲು ನೋವು ಕಡಿಮೆಯಾಗುತ್ತೆ.
ಗರ್ಭಿಣಿಯರ ಆರೋಗ್ಯಕ್ಕೆ ಒಳ್ಳೆಯದು:
ಈ ಹಣ್ಣಿನಲ್ಲಿ ಫೋಲಿಕ್ ಆಮ್ಲ ಉತ್ತಮ ಪ್ರಮಾಣದಲ್ಲಿದೆ. ಗರ್ಭಿಣಿಯ ದೇಹಕ್ಕೆ ಹೆಚ್ಚಿನ ಪ್ರಮಾಣದ ಫೋಲಿಕ್ ಆಮ್ಲದ ಅಗತ್ಯವಿರುತ್ತದೆ. ಅವರಿಗೆ ಈ ಹಣ್ಣು ಉತ್ತಮ. ಅಲ್ಲದೆ ಗರ್ಭಿಣಿಯಾಗಲು ಬಯಸುವ ಹೆಣ್ಣುಮಕ್ಕಳಿಗೆ ಗರ್ಭ ನಿಲ್ಲದೇ ಇದ್ದರೆ ಈ ಹಣ್ಣಿನ ಸೇವನೆಯಿಂದ ಗರ್ಭ ನಿಲ್ಲುವ ಸಾಧ್ಯತೆ ಇದೆ.
ಚರ್ಮದ ಕಾಂತಿ ಹೆಚ್ಚಿಸುತ್ತದೆ:
ಈ ಹಣ್ಣನ್ನು ತಿನ್ನುವುದರಿಂದ ಚರ್ಮದ ಕಾಮತಿ ಹೆಚ್ಚುತ್ತದೆ. ಜೊತೆಗೆ ಈ ಹಣ್ಣಿನ ಪ್ಯಾಕ್ ಮಾಡಿ ಮುಖಕ್ಕೆ ಹಚ್ಚುವುದರಿಂದ ಮುಖದ ಕಾಂತಿ ಹೆಚ್ಚುತ್ತದೆ.