ಭಾನುವಾರ, ಮೇ 19, 2024
ಕೆಎಸ್‌ಆರ್‌ಟಿಸಿ ಬಸ್‌ನ ಕಿಟಕಿಯಲ್ಲಿ ಎಂಜಲು ಉಗುಳುವ ಬರದಲ್ಲಿ ತಲೆ ಸಿಕ್ಕಿಸಿಕೊಂಡು ಒದ್ದಾಡಿದ ಮಹಿಳೆ..!-ಇಂದು ನಡೆಯಲಿದೆ ಆರ್​ಸಿಬಿ ಮತ್ತು ಸಿಎಸ್​ಕೆ ಹೈ ವೋಲ್ಟೇಜ್ ಪಂದ್ಯ; ಆರ್ಸಿಬಿ ಇಂದು ಗೆಲ್ಲುವುದೇ..?-Ration card: ಮುಂದಿನ ತಿಂಗಳು ಹೊಸ ರೇಷನ್ ಕಾರ್ಡ್ ಗೆ ಅರ್ಜಿ ಸಲ್ಲಿಸಲು ಅವಕಾಶ ; ಇಲ್ಲಿದೆ ಮಾಹಿತಿ-ಸರ್ಕಾರ ನನಗೆ ಸ್ಲೀಪಿಂಗ್ ಪಾಟ್ನರ್ ಆಗಿದೆ; ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಗೆ ಸ್ಟಾಕ್ ಬ್ರೋಕರ್ ಕೇಳಿದ ಪ್ರಶ್ನೆ ವೈರಲ್.!-ಎವರೆಸ್ಟ್ ಚಿಕನ್ ಮಸಾಲಾ ಬಳಸದಂತೆ ಆಹಾರ ಸುರಕ್ಷತಾ ಅಧಿಕಾರಿ ಸೂಚನೆ-Matthew Hayden: ಮ್ಯಾಥ್ಯೂ ಹೇಡನ್ ಅವರ ಮಗಳು ಎಸ್‌ಆರ್‌ಹೆಚ್ ಅಭಿಮಾನಿಗಳೊಂದಿಗೆ ಹೈದರಾಬಾದಿ ಬಿರಿಯಾನಿ ತಿನ್ನುವ ವಿಡಿಯೋ ವೈರಲ್!-ಅರವಿಂದ್ ಕೇಜ್ರಿವಾಲ್‌ ಆಪ್ತ ಸಹಾಯಕ ಬಿಭವ್‌ ಕುಮಾರ್‌ ಅರೆಸ್ಟ್‌-ಹುಬ್ಬಳ್ಳಿಯಲ್ಲಿ ಅಂಜಲಿ ಕೊಲೆ ಕೇಸ್; ಆರೋಪಿ ವಿಶ್ವನಾಥ್ ಬಂಧನ.!-ತೀರ್ಥದಲ್ಲಿ ನಿದ್ದೆ ಮಾತ್ರೆ ಬೆರೆಸಿ ಅತ್ಯಾಚಾರ; ಅರ್ಚಕ ವಿರುದ್ಧ ಟಿವಿ ನಿರೂಪಕಿ ಆರೋಪ.!-ಕೋವ್ಯಾಕ್ಸಿನ್‌' ಪಡೆದ 30% ಜನರಲ್ಲೂ ಅಡ್ಡ ಪರಿಣಾಮ ಪತ್ತೆ; ಅಧ್ಯಯನ ವರದಿ
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಬೆಳಗಾವಿಯ ಬಿಮ್ಸ್‌ ರಾಜ್ಯಕ್ಕೆ ನಂ.1: ದೇಶಕ್ಕೆ ನಂ.12

Twitter
Facebook
LinkedIn
WhatsApp
ಬೆಳಗಾವಿಯ ಬಿಮ್ಸ್‌ ರಾಜ್ಯಕ್ಕೆ ನಂ.1: ದೇಶಕ್ಕೆ ನಂ.12

ಬೆಳಗಾವಿ (ಜು.14): ಹದಗೆಟ್ಟ ವ್ಯವಸ್ಥೆಯನ್ನು ನಿರೀಕ್ಷೆಗೂ ಮೀರಿದ ವೇಗದಲ್ಲಿ ಸರಿಪಡಿಸಿಕೊಂಡಿರುವ ಬೆಳಗಾವಿ ವೈದ್ಯಕೀಯ ವಿಜ್ಞಾನ ಸಂಸ್ಥೆ (ಬಿಮ್ಸ್‌) ಇದೀಗ ಇಡೀ ದೇಶದ ಗಮನ ಸೆಳೆದಿದೆ. ಬೆಳಗಾವಿಯಲ್ಲಿರುವ ಬಿಮ್ಸ್‌ನಲ್ಲಿ ಉತ್ತಮ ಮೂಲಸೌಕರ್ಯ, ಆಡಳಿತ, ಚಟುವಟಿಕೆಗಳು, ಸೇವೆ ರೋಗಿಗಳಿಗೆ ಲಭ್ಯವಾಗುತ್ತಿರುವುದರಿಂದ ದೇಶದ 270ಕ್ಕೂ ಅಧಿಕ ಸರ್ಕಾರಿ ಆಸ್ಪತ್ರೆಗಳ ಪೈಕಿ 12ನೇ ರ್ಯಾಂಕ್‌ ಪಡೆದುಕೊಂಡಿದೆ. ಒಟ್ಟು 13 ರ್ಯಾಂಕ್‌ಗಳನ್ನು ಮಾತ್ರ ನೀಡಲಾಗಿದ್ದು ಈ ಪಟ್ಟಿಯೊಳಗೆ ಸ್ಥಾನ ಪಡೆದ ರಾಜ್ಯದ ಏಕೈಕ ವೈದ್ಯಕೀಯ ಸಂಸ್ಥೆ ಬಿಮ್ಸ್‌ ಆಗಿರುವುದು ವಿಶೇಷ.

ದೇಶಾದ್ಯಂತ ಇರುವ ಸರ್ಕಾರಿ ವೈದ್ಯಕೀಯ ಸಂಸ್ಥೆಗಳಲ್ಲಿ ಅಲ್ಲಿ ನೀಡುವ ಸೇವೆ, ಮೂಲಸೌಕರ್ಯ, ಆಡಳಿತ ವ್ಯವಸ್ಥೆ ಸೇರಿದಂತೆ ಹಲವು ಅಂಶಗಳನ್ನಿಟ್ಟುಕೊಂಡು ಇಂಡಿಯನ್‌ ಸೆಂಟರ್‌ ಫಾರ್‌ ಅಕಾಡೆಮಿಕ್‌ ರ್ಯಾಂಕಿಂಗ್‌ ಆ್ಯಂಡ್‌ ಎಕ್ಸ್‌ಲೆನ್ಸ್‌ (ಐಸಿಎಆರ್‌ಇ) ಮತ್ತು ಖಾಸಗಿ ನಿಯತಕಾಲಿಕೆ ಜಂಟಿಯಾಗಿ ಸಮೀಕ್ಷೆ ಕೈಗೊಂಡಿದ್ದವು. ದೆಹಲಿಯ ಏಮ್ಸ್‌ ಮೊದಲ ಸ್ಥಾನ ಪಡೆದುಕೊಂಡರೆ, ವಾರಾಣಸಿಯ ಇನ್‌ಸ್ಟಿಟ್ಯೂಟ್‌ ಆಫ್‌ ಮೆಡಿಕಲ್‌ ಸೈನ್ಸ್‌ ಬನಾರಸ್‌ ಹಿಂದೂ ವಿವಿಗೆ ಎರಡನೇ ಸ್ಥಾನ ಪಡೆದುಕೊಂಡಿದೆ.

ಏನೇನು ಮಾನದಂಡ?: ಅಧ್ಯಯನದ ವೇಳೆ ಮೂಲಸೌಕರ್ಯ, ಪ್ರವೇಶ, ಆಡಳಿತ, ಶೈಕ್ಷಣಿಕ, ಆಸ್ಪತ್ರೆಯ ಹೊರಗಿನ ಸಾಮುದಾಯಕ ಚಟುವಟಿಕೆ (ಔಟ್‌ರೀಚ್‌) ಹಾಗೂ ಉದ್ಯೋಗಗಳನ್ನು ಮಾನದಂಡವಾಗಿ ಇಟ್ಟುಕೊಳ್ಳಲಾಗಿತ್ತು. ಅಧ್ಯಯನದ ವೇಳೆ ಇಷ್ಟುವರ್ಷಗಳ ಕಾಲ ಲೆಕ್ಕಕ್ಕೆ ಇಲ್ಲದ ಬಿಮ್ಸ್‌ನ ಆಡಳಿತ ಮತ್ತು ಸೇವೆಯಲ್ಲಿ ಗಣನೀಯ ಬದಲಾವಣೆಯನ್ನು ಗಮನಿಸಲಾಗಿದೆ.

ಹಿಂದೆ ಬಿದ್ದಿದ್ದ ಬಿಮ್ಸ್‌: ಕಳೆದ 17 ವರ್ಷಗಳ ಹಿಂದೆ ಬಿಮ್ಸ್‌ ಆರಂಭಗೊಂಡಿತು. ಕೇವಲ ಎರಡು ವರ್ಷಗಳ ಹಿಂದೆ ಬೆಳಗಾವಿ ಜಿಲ್ಲಾಸ್ಪತ್ರೆ ಅಥವಾ ಬಿಮ್ಸ್‌ನ ಅವ್ಯವಸ್ಥೆ ನೋಡಿದರೆ ಎಂತಹ ಪರಿಸ್ಥಿತಿಯಲ್ಲಿಯೂ ಚಿಕಿತ್ಸೆಗಾಗಿ ರೋಗಿಗಳು ಬರಲು ಹಿಂದೇಟು ಹಾಕುತ್ತಿದ್ದರು. ಕೋವಿಡ್‌ ವೇಳೆಯಂತೂ ಬಿಮ್ಸ್‌ ವಿರುದ್ಧ ಜಿಲ್ಲೆಯ ರಾಜಕಾರಣಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ನಂತರ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಅಮ್ಲಾನ್‌ ಆದಿತ್ಯ ಬಿಸ್ವಾಸ್‌ ಅವರನ್ನು ಬಿಮ್ಸ್‌ನ ವಿಶೇಷ ಆಡಳಿತಾಧಿಕಾರಿಯನ್ನಾಗಿ ಅಂದಿನ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇಮಕ ಮಾಡಿದ್ದರು. ಬಿಸ್ವಾಸ್‌ ಆಡಳಿತದಲ್ಲಿ ಹಲವು ಸುಧಾರಣೆಗಳನ್ನು ತಂದಿದ್ದರ ಪರಿಣಾಮ ಈಗ ಬಿಮ್ಸ್‌ ಉತ್ತಮ ರಾರ‍ಯಂಕ್‌ ಪಡೆದಿದೆ.

ಬಿಮ್ಸ್‌ಗೆ 540 ಅಂಕ: ಐಸಿಎಆರ್‌ಇ 5 ವಿಭಾಗಗಳಲ್ಲಿ ಒಟ್ಟು 1000 ಅಂಕಗಳ ನಿಗದಿ ಮಾಡಿದ್ದು ಬಿಮ್ಸ್‌ 540.24 ಪಡೆದುಕೊಂಡಿದೆ. ಅಕಾಡೆಮಿಕ್‌ ಆ್ಯಂಡ್‌ ರಿಸಚ್‌ರ್‍ ಎಕ್ಸಲೆನ್ಸ್‌ನಲ್ಲಿ 300ರಲ್ಲಿ 226.64, ಇಂಡಸ್ಟ್ರೀ ಇಂಟರ್‌ಫೇಸ್‌ ಆ್ಯಂಡ್‌ ಪ್ಲೇಸ್‌ಮೆಂಟ್‌ನಲ್ಲಿ 200/28.82, ಇನ್‌ಫ್ರಾಸ್ಟ್ರಕ್ಚರ್‌ ಆ್ಯಂಡ್‌ ಫ್ಯಾಸಿಲಿಟಿಸ್‌ನಲ್ಲಿ 200ರಲ್ಲಿ 182.28, ಗವರ್ನನ್ಸ್‌ ಆ್ಯಂಡ್‌ ಆಡ್ಮಿಷನ್ಸ್‌ನಲ್ಲಿ 150ರಲ್ಲಿ 71.66, ಔಟ್‌ರೀಚ್‌ನಲ್ಲಿ 150ರಲ್ಲಿ 30.83 ಅಂಕ ಪಡೆದಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!

ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.! Twitter Facebook LinkedIn WhatsApp ಪುತ್ತೂರು : ವರ (Groom) ಬೇಕು, ವಧು (Bride) ಬೇಕಾಗಿದ್ದಾರೆ ಎಂಬಂತಹ ಅನೇಕ ಜಾಹೀರಾತುಗಳನ್ನು ನೀವು ಪತ್ರಿಕೆಗಳಲ್ಲಿ

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!

ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.! Twitter Facebook LinkedIn WhatsApp ಉಡುಪಿ: ವಿಧಾನಪರಿಷತ್ತಿನ ಪದವೀಧರ, ಶಿಕ್ಷಕರ ಕೇತ್ರಗಳಿಗೆ ಜೂ. 3ರಂದು ನಡೆಯಲಿರುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ

ಅಂಕಣ