ಮಂಗಳವಾರ, ಮೇ 21, 2024
2023 ಚುನಾವಣೆಯಲ್ಲಿ ಬಂಗೇರ ರವರನ್ನು ಸ್ಪರ್ಧಿಸುವಂತೆ ನಾನು ಹೇಳಿದರೂ, ಅವರ ಸ್ಪರ್ಧಿಸಲಿಲ್ಲ. ಸ್ಪರ್ಧಿಸುತ್ತಿದ್ದರೆ ಮಂತ್ರಿಯಾಗುತ್ತಿದ್ದರು-ಬಂಗೇರ ನುಡಿ ನಮನ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮಾತು-ತಮ್ಮ ತಮ್ಮ ಕ್ಷೇತ್ರಗಳಲ್ಲಿ ಲೀಡ್ ಕೊಡಿಸಿ. ಇಲ್ಲಾದ್ರೆ ಜಾಗ ಖಾಲಿ ಮಾಡಿ, ಹೊಸ ಮುಖಗಳನ್ನು ಬೆಳೆಸುತ್ತೇವೆ-ನಾಯಕರುಗಳಿಗೆ ಡಿಕೆ ಶಿವಕುಮಾರ್ ಖಡಕ್ ಎಚ್ಚರಿಕೆ-ದ್ವೇಷ ರಾಜಕಾರಣಕ್ಕೆ ಬೆಳ್ತಂಗಡಿಯಲ್ಲಿ ಅಖಾಡ ಸಿದ್ಧವಾಗಿದೆಯೇ? ಹರೀಶ್ ಪೂಂಜ V/S ರಕ್ಷಿತ್ ಶಿವರಾಂ..!-ಭಜರಂಗಿ ಸಿನೆಮಾದಲ್ಲಿ ನಟಿಸಿದ್ದ ನಟಿ ಪತಿಯಿಂದಲೇ ಭೀಕರ ಹತ್ಯೆ..!-ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣ; ಸಚಿವರು ಅನಗತ್ಯವಾಗಿ ಹೇಳಿಕೆ ನೀಡದಂತೆ ಸಿದ್ದರಾಮಯ್ಯ ಸೂಚನೆ..!-ಶಿರಾಡಿ ಘಾಟಿಯಲ್ಲಿ ಭೀಕರ ಅಪಘಾತ; ತಾಯಿ -ಮಗ ಮೃತ್ಯು.!-ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣ; ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ನ್ಯಾಯಾಂಗ ಬಂಧನ ವಿಸ್ತರಣೆ.!-ಟಿ-20 ವಿಶ್ವಕಪ್ ಟೂರ್ನಿಗೆ ಜೆರ್ಸಿ ಬಿಡುಗಡೆ ಮಾಡಿದ ಐರ್ಲೆಂಡ್ ತಂಡ..!-ಒಂದೇ ಕುಟುಂಬದ ಮೂವರು ನಿಗೂಢವಾಗಿ ನಾಪತ್ತೆ..!-ಹಾಜಬ್ಬರ ಶಾಲೆಯಲ್ಲಿ ದುರಂತ; ಶಾಲೆಯ ತಡೆಗೋಡೆ ಕುಸಿದು ವಿದ್ಯಾರ್ಥಿನಿ ದಾರುಣ ಸಾವು..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಬಿಜೆಪಿ-ಕಾಂಗ್ರೆಸ್ ಮುಕ್ತ ರಾಜಕೀಯ ಸ್ಥಿತಿಗಾಗಿ ಕೆಸಿಆರ್ ಜೊತೆ ಮೈತ್ರಿ: ಎಚ್‌ಡಿ ಕುಮಾರಸ್ವಾಮಿ

Twitter
Facebook
LinkedIn
WhatsApp
ಬಿಜೆಪಿ-ಕಾಂಗ್ರೆಸ್ ಮುಕ್ತ ರಾಜಕೀಯ ಸ್ಥಿತಿಗಾಗಿ ಕೆಸಿಆರ್ ಜೊತೆ ಮೈತ್ರಿ: ಎಚ್‌ಡಿ ಕುಮಾರಸ್ವಾಮಿ

ಹೈದರಾಬಾದ್: ಬಿಜೆಪಿ-ಕಾಂಗ್ರೆಸ್ ಮುಕ್ತ ರಾಜಕೀಯ ಸ್ಥಿತಿ ನಿರ್ಮಾಣಕ್ಕಾಗಿ ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಅವರ ಬಿಆರ್ ಎಸ್ ಪಕ್ಷದ ಜೊತೆ ಮೈತ್ರಿ ಮಾಡಿಕೊಂಡಿರುವುದಾಗಿ ಮಾಜಿ ಸಿಎಂ ಹಾಗೂ ಜೆಡಿಎಸ್ ಮುಖ್ಯಸ್ಥ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

 

ತಮ್ಮ ಪಕ್ಷದ ಎಲ್ಲ ಶಾಸಕರೊಂದಿಗೆ ಹೈದರಾಬಾದ್‌ಗೆ ತೆರಳಿದ್ದ ಅವರು, ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್‌) ಪಕ್ಷವನ್ನು ‘ಭಾರತ್‌ ರಾಷ್ಟ್ರ ಸಮಿತಿ’ ಎಂಬ ಹೆಸರಿನಡಿ ರಾಷ್ಟ್ರೀಯ ಪಕ್ಷವನ್ನಾಗಿ ಘೋಷಿಸಲು ಬುಧವಾರ ಅಲ್ಲಿ ನಡೆದ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಬೆಂಗಳೂರಿಗೆ ಹಿಂದಿರುಗುವ ಮುನ್ನ ಸುದ್ದಿಗಾರರ ಜತೆ ಅವರು ಮಾತನಾಡಿದ ಅವರು, ‘ಜೆಡಿಎಸ್‌ ಪಕ್ಷವು ತೆಲಂಗಾಣ ಮುಖ್ಯಮಂತ್ರಿ ಕೆ. ಚಂದ್ರಶೇಖರ ರಾವ್‌ ನೇತೃತ್ವದ ‘ಭಾರತ್‌ ರಾಷ್ಟ್ರ ಸಮಿತಿ’ (ಬಿಆರ್‌ಎಸ್‌) ಪಕ್ಷದ ಜತೆಗೂಡಿ ಮುಂದಿನ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಗಳನ್ನು ಎದುರಿಸಲಿದೆ ಎಂದು ಘೋಷಿಸಿದ್ದಾರೆ.

‘ಜೆಡಿಎಸ್‌ ಮತ್ತು ಬಿಆರ್‌ಎಸ್‌ ಮಿತ್ರಪಕ್ಷಗಳಾಗಿ ಕೆಲಸ ಮಾಡಲಿವೆ. ಜೆಡಿಎಸ್‌ ಮತ್ತು ಟಿಆರ್‌ಎಸ್‌ ಮೊದಲಿನಿಂದಲೂ ಸಹಜ ಮಿತ್ರ ಪಕ್ಷಗಳಾಗಿದ್ದವು. ಈಗ ಬಿಆರ್‌ಎಸ್‌ ರಾಷ್ಟ್ರೀಯ ಪಕ್ಷವಾಗಿ ಹೊರ ಹೊಮ್ಮಿರುವುದನ್ನು ಸ್ವಾಗತಿಸುತ್ತೇವೆ. ಚಂದ್ರಶೇಖರ ರಾವ್‌ ಅವರೊಂದಿಗೆ ಜತೆಗೂಡಿ ಕೆಲಸ ಮಾಡುತ್ತೇವೆ. 2023ರ ವಿಧಾನಸಭಾ ಚುನಾವಣೆ ಹಾಗೂ 2024ರ ಲೋಕಸಭಾ ಚುನಾವಣೆಯಲ್ಲಿ ಎರಡೂ ಪಕ್ಷಗಳು ಒಟ್ಟಾಗಿ ಕೆಲಸ ಮಾಡಲಿವೆ.

ಕೇರಳ, ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ ರಾಜ್ಯಗಳಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಮುಕ್ತ ರಾಜಕೀಯ ವಾತಾವರಣ ಇದೆ. ಅದೇ ಸ್ಥಿತಿಯನ್ನು ನಿರ್ಮಾಣ ಮಾಡಲು ನಾನು ಮತ್ತು ಚಂದ್ರಶೇಖರ ರಾವ್‌ ನಿರ್ಧರಿಸಿದ್ದೇವೆ’ ಎಂದು ಕುಮಾರಸ್ವಾಮಿ ಹೇಳಿದರು.

‘ಡಿಎಂಕೆ ನಾಯಕ, ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್‌ ಸೇರಿದಂತೆ ಇನ್ನೂ ಹಲವು ಪಕ್ಷಗಳ ನಾಯಕರು ಬಿಆರ್‌ಎಸ್‌ ಜತೆ ಕೈಜೋಡಿಸುವ ವಿಶ್ವಾಸವಿದೆ. ಕರ್ನಾಟಕದಲ್ಲಿ ಮುಂದಿನ ವಿಧಾನಸಭಾ ಚುನಾವಣೆ ಬಳಿಕ ಬಿಜೆಪಿ, ಕಾಂಗ್ರೆಸ್‌ ಹೊರತಾದ ಪೂರ್ಣ ಬಹುಮತದ ಸರ್ಕಾರದ ರಚನೆಯ ದಿಕ್ಕಿನಲ್ಲಿ ಜೆಡಿಎಸ್‌– ಬಿಆರ್‌ಎಸ್‌ ದೃಢವಾಗಿ ಕೆಲಸ ಮಾಡಲಿವೆ.

2023 ರ ಚುನಾವಣೆ ಫಲಿತಾಂಶ ಜೆಡಿಎಸ್ ಪರವಾಗಿ ಬಂದರೆ, ಅದು 2024ರ ಲೋಕಸಭೆ ಚುನಾವಣೆಗೆ ಹೊಸ ದಿಕ್ಸೂಚಿಯಾಗಲಿದೆ. ಕರ್ನಾಟಕವು ರಾಷ್ಟ್ರ ರಾಜಕಾರಣದಲ್ಲಿ ಪ್ರಬಲ ಶಕ್ತಿಯಾಗಿ ಹೊರಹೊಮ್ಮಲಿದೆ. ರಾಷ್ಟ್ರ ರಾಜಕಾರಣದಲ್ಲಿ ಪರ್ಯಾಯ ರಾಜಕೀಯ ಶಕ್ತಿಯ ಅಗತ್ಯ ಇತ್ತು. ಕೆಲವೇ ಪಕ್ಷಗಳ ರಾಜಕೀಯ ಏಕಸ್ವಾಮ್ಯಕ್ಕೆ ಅಂತ್ಯ ಹಾಡುವ ನಿಟ್ಟಿನಲ್ಲಿ ಹೊಸ ರಾಜಕೀಯ ಶಕ್ತಿ ಬೇಕಿತ್ತು. ಬಿಆರ್‌ಎಸ್‌ ಒಂದು ಪ್ರಬಲ ಪರ್ಯಾಯ ಎನ್ನುವುದು ತಮ್ಮ ಭಾವನೆ ಎಂದರು.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಪಾಣೆಮಂಗಳೂರು: ಬೈಕ್ ಮತ್ತು ರಿಕ್ಷಾ ಅಪಘಾತ; ರಿಕ್ಷಾದಲ್ಲಿದ್ದ ಪ್ರಯಾಣಿಕ ಸಾವು

ಪಾಣೆಮಂಗಳೂರು: ಬೈಕ್ ಮತ್ತು ರಿಕ್ಷಾ ಅಪಘಾತ; ರಿಕ್ಷಾದಲ್ಲಿದ್ದ ಪ್ರಯಾಣಿಕ ಸಾವು

ಪಾಣೆಮಂಗಳೂರು: ಬೈಕ್ ಮತ್ತು ರಿಕ್ಷಾ ಅಪಘಾತ; ರಿಕ್ಷಾದಲ್ಲಿದ್ದ ಪ್ರಯಾಣಿಕ ಸಾವು Twitter Facebook LinkedIn WhatsApp ಬಂಟ್ವಾಳ: ರಿಕ್ಷಾ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ರಿಕ್ಷಾ ಪಲ್ಟಿಯಾಗಿ ಪ್ರಯಾಣಿಕನೋರ್ವ ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ

ಪಡೀಲ್: ರಸ್ತೆ ಬದಿ ಬೈಕ್ ನಿಲ್ಲಿಸಿ ನಿಂತಿದ್ದ ವ್ಯಕ್ತಿಗೆ ಕಾರು ಡಿಕ್ಕಿ; ಕೇಬಲ್ ಟೆಕ್ನಿಶಿಯನ್ ಸಾವು.!

ಪಡೀಲ್: ರಸ್ತೆ ಬದಿ ಬೈಕ್ ನಿಲ್ಲಿಸಿ ನಿಂತಿದ್ದ ವ್ಯಕ್ತಿಗೆ ಕಾರು ಡಿಕ್ಕಿ; ಕೇಬಲ್ ಟೆಕ್ನಿಶಿಯನ್ ಸಾವು.!

ಪಡೀಲ್: ರಸ್ತೆ ಬದಿ ಬೈಕ್ ನಿಲ್ಲಿಸಿ ನಿಂತಿದ್ದ ವ್ಯಕ್ತಿಗೆ ಕಾರು ಡಿಕ್ಕಿ; ಕೇಬಲ್ ಟೆಕ್ನಿಶಿಯನ್ ಸಾವು.! Twitter Facebook LinkedIn WhatsApp ಮಂಗಳೂರು: ಕಾರು ಚಾಲಕನ ನಿರ್ಲಕ್ಷದ ಚಾಲನೆಗೆ ರಸ್ತೆ ಬದಿಯಲ್ಲಿ ಬೈಕ್ ನಿಲ್ಲಿಸಿ

ಅಂಕಣ