ಮಂಗಳವಾರ, ಮೇ 21, 2024
2023 ಚುನಾವಣೆಯಲ್ಲಿ ಬಂಗೇರ ರವರನ್ನು ಸ್ಪರ್ಧಿಸುವಂತೆ ನಾನು ಹೇಳಿದರೂ, ಅವರ ಸ್ಪರ್ಧಿಸಲಿಲ್ಲ. ಸ್ಪರ್ಧಿಸುತ್ತಿದ್ದರೆ ಮಂತ್ರಿಯಾಗುತ್ತಿದ್ದರು-ಬಂಗೇರ ನುಡಿ ನಮನ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ಮಾತು-ತಮ್ಮ ತಮ್ಮ ಕ್ಷೇತ್ರಗಳಲ್ಲಿ ಲೀಡ್ ಕೊಡಿಸಿ. ಇಲ್ಲಾದ್ರೆ ಜಾಗ ಖಾಲಿ ಮಾಡಿ, ಹೊಸ ಮುಖಗಳನ್ನು ಬೆಳೆಸುತ್ತೇವೆ-ನಾಯಕರುಗಳಿಗೆ ಡಿಕೆ ಶಿವಕುಮಾರ್ ಖಡಕ್ ಎಚ್ಚರಿಕೆ-ದ್ವೇಷ ರಾಜಕಾರಣಕ್ಕೆ ಬೆಳ್ತಂಗಡಿಯಲ್ಲಿ ಅಖಾಡ ಸಿದ್ಧವಾಗಿದೆಯೇ? ಹರೀಶ್ ಪೂಂಜ V/S ರಕ್ಷಿತ್ ಶಿವರಾಂ..!-ಭಜರಂಗಿ ಸಿನೆಮಾದಲ್ಲಿ ನಟಿಸಿದ್ದ ನಟಿ ಪತಿಯಿಂದಲೇ ಭೀಕರ ಹತ್ಯೆ..!-ಪ್ರಜ್ವಲ್ ಪೆನ್ ಡ್ರೈವ್ ಪ್ರಕರಣ; ಸಚಿವರು ಅನಗತ್ಯವಾಗಿ ಹೇಳಿಕೆ ನೀಡದಂತೆ ಸಿದ್ದರಾಮಯ್ಯ ಸೂಚನೆ..!-ಶಿರಾಡಿ ಘಾಟಿಯಲ್ಲಿ ಭೀಕರ ಅಪಘಾತ; ತಾಯಿ -ಮಗ ಮೃತ್ಯು.!-ದೆಹಲಿ ಅಬಕಾರಿ ನೀತಿ ಹಗರಣ ಪ್ರಕರಣ; ದೆಹಲಿ ಮಾಜಿ ಉಪ ಮುಖ್ಯಮಂತ್ರಿ ಮನೀಷ್ ಸಿಸೋಡಿಯಾ ನ್ಯಾಯಾಂಗ ಬಂಧನ ವಿಸ್ತರಣೆ.!-ಟಿ-20 ವಿಶ್ವಕಪ್ ಟೂರ್ನಿಗೆ ಜೆರ್ಸಿ ಬಿಡುಗಡೆ ಮಾಡಿದ ಐರ್ಲೆಂಡ್ ತಂಡ..!-ಒಂದೇ ಕುಟುಂಬದ ಮೂವರು ನಿಗೂಢವಾಗಿ ನಾಪತ್ತೆ..!-ಹಾಜಬ್ಬರ ಶಾಲೆಯಲ್ಲಿ ದುರಂತ; ಶಾಲೆಯ ತಡೆಗೋಡೆ ಕುಸಿದು ವಿದ್ಯಾರ್ಥಿನಿ ದಾರುಣ ಸಾವು..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಬಟ್ಟೆ ಅಂಗಡಿಯಲ್ಲಿ ಬೆಂಕಿ ಅವಘಡ; 19 ವರ್ಷದ ಯುವಕನ ಸಜೀವ ದಹನ

Twitter
Facebook
LinkedIn
WhatsApp
ಇಂದು ಬೆಳಗ್ಗೆ ಅಗ್ನಿಶಾಮಕ ದಳದ ಸಿಬ್ಬಂದಿಗೆ ಅಂಗಡಿಯ 2ನೇ ಮಹಡಿಯಲ್ಲಿ ಸುಟ್ಟು ಕರಕಲಾದ ಆತನ ಶವ ಪತ್ತೆಯಾಗಿದೆ. ಗಾಂಧಿನಗರದ ಬಟ್ಟೆ ಮಾರುಕಟ್ಟೆಯ ಅಂಗಡಿಯೊಂದರಲ್ಲಿ ಸಂಭವಿಸಿದ ಈ ಬೆಂಕಿ ದುರಂತ ಈಗ ನಿಯಂತ್ರಣಕ್ಕೆ ಬಂದಿದೆ.
ಬಟ್ಟೆ ಅಂಗಡಿಯಲ್ಲಿ ಬೆಂಕಿ ಅವಘಡ; 19 ವರ್ಷದ ಯುವಕನ ಸಜೀವ ದಹನ

ನವದೆಹಲಿ: ನವದೆಹಲಿಯ ಗಾಂಧಿನಗರ ಮಾರುಕಟ್ಟೆಯ ಬೆಂಕಿ ಅವಘಡದಲ್ಲಿ (Fire Accident) 19 ವರ್ಷದ ಯುವಕ ಸಜೀವ ದಹನವಾಗಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಸಿಲುಕಿದ ಯುವಕ ಸುಟ್ಟು ಕರಕಲಾದ ಘಟನೆ ಇಂದು ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಮೃತಪಟ್ಟ ಯುವಕನನ್ನು ಶೆಹ್ನವಾಜ್ ಎಂದು ಗುರುತಿಸಲಾಗಿದ್ದು, ಅವರು ಬೆಂಕಿ ಹೊತ್ತಿಕೊಂಡ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದರು. ಈ ವೇಳೆ ಬೆಂಕಿಯ ಧಗೆಯಿಂದ ತಪ್ಪಿಸಿಕೊಳ್ಳಲಾಗದೆ ಅವರು ದುರಂತ ಅಂತ್ಯ ಕಂಡಿದ್ದಾರೆ.

ಬಟ್ಟೆ ಅಂಗಡಿಯಲ್ಲಿ ಬೆಂಕಿ ಅವಘಡ; 19 ವರ್ಷದ ಯುವಕನ ಸಜೀವ ದಹನ

ಅದೇ ಬಟ್ಟೆ ಅಂಗಡಿಯಲ್ಲಿ ಕಳೆದ 12 ವರ್ಷಗಳಿಂದ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುತ್ತಿರುವ ಹಾಗೂ ಮೃತ ಯುವಕನ ಅಣ್ಣನಾಗಿರುವ ಅಫ್ತಾಬ್ ನಿನ್ನೆ ಸಂಜೆ ತನ್ನ ಇತರ 4ರಿಂದ 5 ಉದ್ಯೋಗಿಗಳೊಂದಿಗೆ ಅಂಗಡಿಯತ್ತ ಬರುವಾಗ ಅಂಗಡಿಯೊಳಗೆ ಭಾರೀ ಪ್ರಮಾಣದ ಹೊಗೆ ಕಾಣಿಸಿಕೊಂಡಿದೆ. ಅವರು ಬೇರೆ ಅಂಗಡಿಗೆ ಹೋಗಿ ವಾಪಾಸ್ ಬರುವಷ್ಟರಲ್ಲಿ ಈ ದುರಂತ ಸಂಭವಿಸಿತ್ತು. ತಕ್ಷಣ ಅಕ್ಕಪಕ್ಕದವರಿಗೆ ವಿಷಯ ತಿಳಿಸಿ, ತನ್ನ ಮಾಲೀಕರಿಗೂ ಅವರು ಫೋನ್ ಮಾಡಿದ್ದರು.

ಅಫ್ತಾಬ್ ತಕ್ಷಣ ಮಾಲೀಕರಿಗೆ ಕರೆ ಮಾಡಿದ್ದರಿಂದ ಅವರು ಕೂಡ ಸ್ಥಳಕ್ಕೆ ಆಗಮಿಸಿದರು. ಆದರೆ, ತನ್ನ ಸಹೋದರ ಶೆಹ್ನವಾಜ್ ಅಂಗಡಿಯೊಳಗೆ ಸಿಕ್ಕಿಬಿದ್ದಿದ್ದಾನೆ ಎಂಬುದು ಅಫ್ತಾಬ್​ಗೆ ನಂತರ ಗೊತ್ತಾಯಿತು. ವರದಿಗಳ ಪ್ರಕಾರ, ಅವರಿಗೆ ಶೆಹ್ನವಾಜ್ ಒಳಗಿನಿಂದ ಬಾಗಿಲು ಬಡಿಯುವುದು ಕೇಳಿಸಿದೆ. ಆಗ ಅಲ್ಲಿದ್ದವರು ಶೆಹ್ನವಾಜ್‌ಗೆ ಮೇಲೆ ಓಡಿ ಹೋಗಲು ಹೇಳಿದರೂ ಆತನಿಗೆ ಅದು ಕೇಳಲಿಲ್ಲ. ಕೊನೆಗೆ ಅಲ್ಲಿದ್ದವರು ಸೇರಿ ಅಂಗಡಿಯ ಬೀಗ ಒಡೆಯಲು ಪ್ರಯತ್ನಿಸಿದರು. ಆದರೂ ಒಳಗೆ ಹೋಗಲು ಆಗಲಿಲ್ಲ.

ಕೊನೆಗೆ ಇಂದು ಬೆಳಗ್ಗೆ ಅಗ್ನಿಶಾಮಕ ದಳದ ಸಿಬ್ಬಂದಿಗೆ ಅಂಗಡಿಯ 2ನೇ ಮಹಡಿಯಲ್ಲಿ ಸುಟ್ಟು ಕರಕಲಾದ ಆತನ ಶವ ಪತ್ತೆಯಾಗಿದೆ. ಗಾಂಧಿನಗರದ ಬಟ್ಟೆ ಮಾರುಕಟ್ಟೆಯ ಅಂಗಡಿಯೊಂದರಲ್ಲಿ ಸಂಭವಿಸಿದ ಈ ಬೆಂಕಿ ದುರಂತ ಈಗ ನಿಯಂತ್ರಣಕ್ಕೆ ಬಂದಿದೆ ಎಂದು ಅಗ್ನಿಶಾಮಕ ದಳದ ಸಿಬ್ಬಂದಿ ತಿಳಿಸಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಪಾಣೆಮಂಗಳೂರು: ಬೈಕ್ ಮತ್ತು ರಿಕ್ಷಾ ಅಪಘಾತ; ರಿಕ್ಷಾದಲ್ಲಿದ್ದ ಪ್ರಯಾಣಿಕ ಸಾವು

ಪಾಣೆಮಂಗಳೂರು: ಬೈಕ್ ಮತ್ತು ರಿಕ್ಷಾ ಅಪಘಾತ; ರಿಕ್ಷಾದಲ್ಲಿದ್ದ ಪ್ರಯಾಣಿಕ ಸಾವು

ಪಾಣೆಮಂಗಳೂರು: ಬೈಕ್ ಮತ್ತು ರಿಕ್ಷಾ ಅಪಘಾತ; ರಿಕ್ಷಾದಲ್ಲಿದ್ದ ಪ್ರಯಾಣಿಕ ಸಾವು Twitter Facebook LinkedIn WhatsApp ಬಂಟ್ವಾಳ: ರಿಕ್ಷಾ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ರಿಕ್ಷಾ ಪಲ್ಟಿಯಾಗಿ ಪ್ರಯಾಣಿಕನೋರ್ವ ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ

ಪಡೀಲ್: ರಸ್ತೆ ಬದಿ ಬೈಕ್ ನಿಲ್ಲಿಸಿ ನಿಂತಿದ್ದ ವ್ಯಕ್ತಿಗೆ ಕಾರು ಡಿಕ್ಕಿ; ಕೇಬಲ್ ಟೆಕ್ನಿಶಿಯನ್ ಸಾವು.!

ಪಡೀಲ್: ರಸ್ತೆ ಬದಿ ಬೈಕ್ ನಿಲ್ಲಿಸಿ ನಿಂತಿದ್ದ ವ್ಯಕ್ತಿಗೆ ಕಾರು ಡಿಕ್ಕಿ; ಕೇಬಲ್ ಟೆಕ್ನಿಶಿಯನ್ ಸಾವು.!

ಪಡೀಲ್: ರಸ್ತೆ ಬದಿ ಬೈಕ್ ನಿಲ್ಲಿಸಿ ನಿಂತಿದ್ದ ವ್ಯಕ್ತಿಗೆ ಕಾರು ಡಿಕ್ಕಿ; ಕೇಬಲ್ ಟೆಕ್ನಿಶಿಯನ್ ಸಾವು.! Twitter Facebook LinkedIn WhatsApp ಮಂಗಳೂರು: ಕಾರು ಚಾಲಕನ ನಿರ್ಲಕ್ಷದ ಚಾಲನೆಗೆ ರಸ್ತೆ ಬದಿಯಲ್ಲಿ ಬೈಕ್ ನಿಲ್ಲಿಸಿ

ಅಂಕಣ