ಶುಕ್ರವಾರ, ಮೇ 17, 2024
ಅಮಿತ್ ಶಾ ಪ್ರಧಾನಿಯಾಗಲು ವೇದಿಕೆ ಸಜ್ಜಾಗಿದೆ; ಹೇಳಿಕೆ ಪುನರುಚ್ಚರಿಸಿದ ಕೇಜ್ರಿವಾಲ್..!-ಮನೆಯ ಬಾತ್ ರೂಂ ನಲ್ಲಿ ಕುತ್ತಿಗೆ ಕೊಯ್ದ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆ.!-ಪತ್ನಿಗೆ ವಿಡಿಯೋ ಕಾಲ್ ಮಾಡಿ ನೇಣು ಬಿಗಿದುಕೊಂಡಂತೆ ಹೆದರಿಸುವಾಗಲೇ ಪತಿ ಸಾವು..!-ಮೇ 31 ರಂದು ಕೇರಳಕ್ಕೆ ಪ್ರವೇಶಿಸಲಿದೆ ನೈರುತ್ಯ ಮುಂಗಾರು.!-ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೈದ ಸಚಿನ್ ತೆಂಡೂಲ್ಕರ್ ಸೆಕ್ಯುರಿಟಿ ಗಾರ್ಡ್.!-Gold Price: ಆಭರಣ ಪ್ರಿಯರಿಗೆ ಇಂದಿನ ಚಿನ್ನ - ಬೆಳ್ಳಿಯ ದರ ಹೇಗಿದೆ.!-ನಾನು ಎಂದಿಗೂ ಹಿಂದೂ ಅಥವಾ ಮುಸ್ಲಿಂ ಬಗ್ಗೆ ಮಾತನಾಡಿಲ್ಲ; ಪ್ರಧಾನಿ ಮೋದಿ-ಕಾಲೇಜು ಕಟ್ಟಡದಿಂದ ಹಾರಿ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ ..!-ಇಂದು ಬೆಂಗಳೂರಿಗೆ ಬರಬೇಕಿದ್ದ ಪ್ರಜ್ವಲ್ ರೇವಣ್ಣ ಪ್ಲೈಟ್ ಹತ್ತದೆ ಮತ್ತೆ ವಿದೇಶದಲ್ಲಿ; ಎಸ್ಐಟಿ ಮುಂದಿನ ನಡೆ ಏನು.?-ನಟಿ ವೈಷ್ಣವಿ ಗೌಡಗೆ ಟ್ರಾಫಿಕ್ ಪೊಲೀಸರಿಂದ ದಂಡ; ಮಂಗಳೂರಿನ ಜಯಪ್ರಕಾಶ್‌ ಎಕ್ಕೂರುರವರಿಂದ ದೂರು.!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಫ್ರಾನ್ಸ್ ಯಾಕೆ? ಭಾರತದ ಅಳಿಯ ಸಿಕ್ಕಿಲ್ವಾ? ನೆಟ್ಟಿಗನ ಪ್ರಶ್ನೆಗೆ ಮಹೀಂದ್ರ ಖಡಕ್ ಉತ್ತರ!

Twitter
Facebook
LinkedIn
WhatsApp
ಫ್ರಾನ್ಸ್ ಯಾಕೆ? ಭಾರತದ ಅಳಿಯ ಸಿಕ್ಕಿಲ್ವಾ? ನೆಟ್ಟಿಗನ ಪ್ರಶ್ನೆಗೆ ಮಹೀಂದ್ರ ಖಡಕ್ ಉತ್ತರ!

ಮುಂಬೈ(ನ.27): ಉದ್ಯಮಿ ಆನಂದ್ ಮಹೀಂದ್ರ ಪ್ರತಿ ಬಾರಿ ಟ್ವಿಟರ್ ಮೂಲಕ ಆಸಕ್ತಿಕರ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಹೀಗಾಗಿ ಆನಂದ್ ಮಹೀಂದ್ರ ಟ್ವೀಟ್ ಅತೀ ಹೆಚ್ಚಿನ ಲೈಕ್ಸ್ ಹಾಗೂ ಕಮೆಂಟ್ ಪಡೆಯುತ್ತವೆ. ಹೀಗೆ ಆನಂದ್ ಮಹೀಂದ್ರ ತಮ್ಮ ಅಳಿಯ ಉಚ್ಚಾರಣೆ ಕುರಿತು ಟ್ವೀಟ್ ಮಾಡಿದ್ದಾರೆ. ಫ್ರಾನ್ಸ್ ಅಳಿಯನ ಉಚ್ಚಾರಣೆ ಹೇಗೆ ಎಂದು ವಿವರಿಸಿದ ಆನಂದ್ ಮಹೀಂದ್ರ, ಪದಗಳ ಉಚ್ಚಾರಣೆಯನ್ನು ಹೇಳಿದ್ದಾರೆ. ಆದರೆ ಭಾರತದಲ್ಲಿ ಉಚ್ಚಾರಣೆ ಸರಳ ಹಾಗೂ ಸ್ಪಷ್ಟವಾಗಿದೆ. ಇದೇ ಕಾರಣಕ್ಕೆ ನನ್ನ ಭಾರತ್ ಮಹಾನ್ ಎಂದು ಆನಂದ್ ಮಹೀಂದ್ರ ಹೇಳಿದ್ದಾರೆ. ಆನಂದ್ ಮಹೀಂದ್ರ ಈ ಟ್ವೀಟ್ ಮಾಡಿದ ಬೆನ್ನಲ್ಲೇ ವಿಜಯ್ ಅನ್ನೋ ನೆಟ್ಟಿಗ ನಿಮಗೆ ಫ್ರಾನ್ಸ್ ಯಾಕೆ, ಭಾರತೀಯ ಅಳಿಯ ಯಾಕಿಲ್ಲ ಎಂದು ಪ್ರಶ್ನಿಸಿದ್ದಾನೆ. ನೆಟ್ಟಿಗನ ಪ್ರಶ್ನೆಗೆ ಅಷ್ಟೆ ತಾಳ್ಮೆಯಿಂದ ಆನಂದ್ ಮಹೀಂದ್ರ ಉತ್ತರಿಸಿದ್ದಾರೆ. ಮಕ್ಕಳಿಗೆ ಅವರ ಸಂಗಾತಿಯನ್ನು ಹುಡುಕವ ಸ್ವಾತಂತ್ರ್ಯವಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಕ್ವಾಸಾಂಗ್(croissant) ಪದ ಉಚ್ಚಾರಣೆ ಸುಲಭವಲ್ಲ. ಈ ಬ್ರೆಡ್ ಅತ್ಯಂತ ನೋವಿನ ಹಾಗೂ ತಲೆನೋವಿನಿಂದ ಕೂಡಿದೆ ಅನ್ನೋದನ್ನು ಫ್ರಾನ್ಸ್ ಅಳಿಯ ಒಪ್ಪಿಕೊಳ್ಳತ್ತಾರೆ. ಇದೇ ಕಾರಣಕ್ಕೆ ನಾವು ಭಾರತೀಯರು ಉಚ್ಚಾರಣೆಯನ್ನು ಸರಳ ಹಾಗೂ ಸ್ಪಷ್ಟವಾಗಿ ಮಾಡಿದ್ದಾರೆ. ಈ ರೀತಿಯ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ ನಮ್ಮದು ಎಂದಿದ್ದಾರೆ.

ಈ ಟ್ವೀಟ್‌ಗೆ ಪ್ರತಿಕ್ರಿಯಿಸಿದ ನೆಟ್ಟಿಗ ವಿಜಯ್, ಇದು ಅನಗತ್ಯ ಆದರೂ ಕೇಳುತ್ತೇನೆ, ನಿಮಗೆ ಭಾರತೀಯ ಅಳಿಯ ಯಾಕಿಲ್ಲ ಎಂದು ಪ್ರಶ್ನಿಸಿದ್ದಾರೆ. ಆನಂದ್ ಮಹೀಂದ್ರ ತಾಳ್ಮೆಯಿಂದಲೇ ಈತನ ಪ್ರಶ್ನೆಗೆ ಉತ್ತರಿಸಿದ್ದಾರೆ. ಮಕ್ಕಳಿಗೆ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವಿದೆ. ಯಾಕೆಂದರೆ ಅನಗತ್ಯವಾಗಿ ಅವರ ಸ್ವಾತಂತ್ರ್ಯದಲ್ಲಿ ಹಸ್ತಕ್ಷೇಪ ಮಾಡುವುದು ನನ್ನ ಕೆಲಸವಲ್ಲ. ಅವರು ಸ್ವತಂತ್ರವಾಗಿ ತಮ್ಮ ಬಾಳ ಸಂಗಾತಿಯನ್ನು ಆಯ್ಕೆಮಾಡಿಕೊಳ್ಳುತ್ತಾರೆ ಎಂದರೆ ನಾನು ಹೆಮ್ಮೆ ಪಡುತ್ತೇನೆ ಎಂದು ಆನಂದ್ ಮಹೀಂದ್ರ ಟ್ವೀಟ್ ಮಾಡಿದ್ದಾರೆ.

ಆನಂದ್ ಮಹೀಂದ್ರ ಪ್ರಸಕ್ತ ವಿದ್ಯಮಾನಗಳ ಕುರಿತು ಹಾಸ್ಯವಾಗಿ ಮನಮುಟ್ಟುವಂತೆ ಟ್ವೀಟ್ ಮಾಡುತ್ತಾರೆ. ಇತ್ತೀಚೆಗೆ ರಿಶಿ ಸುನಕ್ ಬ್ರಿಟನ್ ಪ್ರಧಾನಿಯಾಗಿ ಆಯ್ಕೆಯಾದ ಬೆನ್ನಲ್ಲೇ 200 ವರ್ಷ ಭಾರತ ಆಳಿದ ಬ್ರಿಟಿಷರಿಗೆ ಇದೀಗ ಭಾರತೀಯ ದೊರೆ ಎಂದು ಟ್ವೀಟ್ ಮಾಡಿದ್ದರು. 947ರಲ್ಲಿ ಭಾರತ ಸ್ವಾತಂತ್ರ್ಯ ಪಡೆದುಕೊಳ್ಳುತ್ತಿರುವ ಸಂದರ್ಭದಲ್ಲಿ ವಿನ್‌ಸ್ಟನ್‌ ಚರ್ಚಿಲ್‌ ‘ಎಲ್ಲ ಭಾರತೀಯ ನಾಯಕರು ದುರ್ಬಲ ಹಾಗೂ ಕಡಿಮೆ ಸಾಮರ್ಥ್ಯವುಳ್ಳವರು ಎಂದಿದ್ದರು. ಆದರೆ ಇಂದು ನಾವು ಸ್ವಾತಂತ್ರ್ಯ ಪಡೆದು 75 ವರ್ಷಗಳು ಕಳೆದ ಬೆನ್ನಲ್ಲೇ ಭಾರತೀಯ ಮೂಲದ ವ್ಯಕ್ತಿಯೊಬ್ಬ ಬ್ರಿಟನ್‌ನ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಳ್ಳುತ್ತಿರುವುದನ್ನು ನೋಡಲು ಸಿದ್ಧರಾಗಿದ್ದೇವೆ. ಜೀವನ ನಿಜಕ್ಕೂ ಸುಂದರವಾಗಿದೆ’ ಎಂದು ಟ್ವೀಟ್‌ ಮಾಡಿದ್ದಾರೆ.

ದು ಮೊಬೈಲ್‌ ಮದುವೆ ಮನೆ!
ಸೃಜನಶೀಲತೆಯನ್ನು ಸದಾ ಪ್ರೋತ್ಸಾಹಿಸುವ ಉದ್ಯಮಿ ಆನಂದ ಮಹೀಂದ್ರಾ, ಸರಕು ಸಾಗಾಣಿಕಾ ಕಂಟೇನರ್‌ನಲ್ಲಿ ಇಡೀ ಮದುವೆ ಮನೆಯನ್ನೇ ವಿನ್ಯಾಸಗೊಳಿಸಿರುವ ವಿಶಿಷ್ಟವಿಡಿಯೋವನ್ನು ಟ್ವೀಟ್‌ ಮಾಡಿದ್ದಾರೆ. ಈ ‘ಮೊಬೈಲ್‌ ಮದುವೆ ಮನೆ’ ಇಂಟರ್ನೆಟ್‌ನಲ್ಲಿ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ. 40 ಅಡಿ ಉದ್ದದ ಈ ಸಾಗಾಣಿಕಾ ಕಂಟೇನರ್‌ನಲ್ಲಿ ಮಡಚಬಹುದಾದ ಭಾಗಗಳಿವೆ. ಈ ಭಾಗಗಳನ್ನು ಬಿಚ್ಚಿ ಜೋಡಿಸಿದರೆ 1200 ಚದರ್‌ ಅಡಿಯ ವಿಸ್ತಾರದ ‘ಮದುವೆ ಮನೆ’ ಸಿದ್ಧವಾಗುತ್ತದೆ. ಬೇಕಾದಲ್ಲಿ ಕೊಂಡೊಯ್ಯಬಹುದಾದ ಈ ಮೊಬೈಲ್‌ ಮದುವೆ ಮನೆ, ಸುಮಾರು 200 ಕುರ್ಚಿಗಳ ಸಾಮರ್ಥ್ಯವನ್ನು ಹೊಂದಿದೆ. ಮಡಚಬಹುದಾದ ವಿನ್ಯಾಸವುಳ್ಳ ಇದರಲ್ಲಿ 2 ಎ.ಸಿ. ಕೂಡಾ ಜೋಡಿಸಲಾಗಿದೆ. ವಧು-ವರರಿಗೆ ಮದುವೆಗೆ ತಯಾರಾಗಲು ಪ್ರತ್ಯೇಕ ಕೋಣೆಗಳಿವೆ. ಮದುವೆ ಅಥವಾ ಸಮಾರಂಭಕ್ಕೆ ಕಲ್ಯಾಣ ಮಂಟಪ ಸಿಗದವರು ಇದನ್ನು ಬಳಸಿ ಸಮಾರಂಭ ಮಾಡಿಕೊಳ್ಳಬಹುದಾಗಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ಅಂಕಣ