ಫುಟ್ಬಾಲ್ ಜೊತೆಗೆ ಜೂಜಾಟ ಆಡುತ್ತಿರುವಾಗ ಪೊಲೀಸ್ ದಾಳಿ: ಪೊಲೀಸ್ ವಾಹನ ನೋಡಿ ಓಡುವಾಗ ಬಾವಿಗೆ ಬಿದ್ದು ಯುವಕ ಮೃತ್ಯು !
Twitter
Facebook
LinkedIn
WhatsApp

ಕಾಸರಗೋಡು: ಪೊಲೀಸರನ್ನು ನೋಡಿ ಭೀತಿಯಿಂದ ಓಡುವ ಭರದಲ್ಲಿ ಬಾವಿಗೆ ಬಿದ್ದು ಯುವಕನೊಬ್ಬ ಮೃತಪಟ್ಟಿರುವ ಘಟನೆ ಕಾಸರಗೋಡಿನ ಎನ್ನಪ್ಪರ ನಡೆದಿರುವುದು ವರದಿಯಾಗಿದೆ. ಕುಜಿಕ್ಕೋಲ್ ಮೂಲದ ವಿಷ್ಣು (24) ಮೃತ ಯುವಕ.
ಎನ್ನಪ್ಪರದಲ್ಲಿ ಶನಿವಾರ ರಾತ್ರಿ ( ಮೇ 6 ರಂದು) ರಾತ್ರಿ ಫುಟ್ ಬಾಲ್ ಆಡುತ್ತಿರುವಾಗ ಜೊತೆಗೆ ಜೂಜಾಟವನ್ನು ಆಡಿದ್ದಾರೆ. ಇದರಲ್ಲಿ ವಿಷ್ಣು ಅವರು ಕೂಡ ಭಾಗಿಯಾಗಿದ್ದಾರೆ. ಇದೇ ವೇಳೆ ಪೊಲೀಸರು ಅಲ್ಲಿಗೆ ಬಂದಿದ್ದಾರೆ. ಪೊಲೀಸರ ಏಕಾಏಕಿ ದಾಳಿಗೆ ಭೀತಿಯಿಂದ ಎಲ್ಲರೂ ಓಡಿದ್ದಾರೆ. ಪೊಲೀಸರನ್ನು ನೋಡಿ ಓಡುವಾಗ ಕತ್ತಲಿನಲ್ಲಿ ವಿಷ್ಣು ಬಾವಿಯೊಂದಕ್ಕೆ ಬಿದ್ದು ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ.