ಸೋಮವಾರ, ಡಿಸೆಂಬರ್ 23, 2024
ಸೋಡಿಯಂ ಬಳಸಿ ಸ್ಫೋಟ, ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್; ಡ್ರೋಣ್ ಪ್ರತಾಪ್ ಅರೆಸ್ಟ್!-ಮುರುಡೇಶ್ವರ ದಲ್ಲಿ ನಾಲ್ವರು ವಿದ್ಯಾರ್ಥಿನಿಯರ ಸಾವು; ಮುಖ್ಯಶಿಕ್ಷಕರು ಸೇರಿ 7 ಮಂದಿ ವಶಕ್ಕೆ!-S M Krishna : ಒಕ್ಕಲಿಗ ಸಂಪ್ರದಾಯದಂತೆ ಸೋಮನಹಳ್ಳಿಯಲ್ಲಿಂದು ಅಂತ್ಯಸಂಸ್ಕಾರ; ಮದ್ದೂರು ಪಟ್ಟಣ ಸ್ವಯಂ ಪ್ರೇರಿತ ಬಂದ್‌ಗೆ ಕರೆ-Kurla: ನಿಯಂತ್ರಣ ತಪ್ಪಿ 22 ವಾಹನಗಳಿಗೆ ಡಿಕ್ಕಿ ಹೊಡೆದ ಬಸ್ – 7 ಮಂದಿ ಸಾವು, 49 ಮಂದಿಗೆ ಗಾಯ-ಹಿಂಸಾಚಾರಕ್ಕೆ ತಿರುಗಿದ ಪಂಚಮಸಾಲಿ ಹೋರಾಟ; ಸರ್ಕಾರದ ವಿರುದ್ಧ ಸಿಡಿದೆದ್ದ ಮೃತ್ಯುಂಜಯ ಸ್ವಾಮೀಜಿ-S M Krishna : ಮಾಜಿ ಮುಖ್ಯಮಂತ್ರಿ, ಹಿರಿಯ ರಾಜಕಾರಣಿ ಎಸ್‌ಎಂ ಕೃಷ್ಣ ವಿಧಿವಶ – ನಾಳೆ ಅಂತ್ಯಕ್ರಿಯೆ-ಡ್ರಗ್ಸ್‌ ಕೊಟ್ಟು ನರ್ಸ್ ಮೇಲೆ ಅತ್ಯಾಚಾರ, ವಿಡಿಯೊ ಚಿತ್ರೀಕರಿಸಿ ಬೆದರಿಕೆ; ಪ್ರಕರಣ ದಾಖಲು-ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಐವರು ಬಾಣಂತಿಯರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ ಪರಿಹಾರ ಘೋಷಣೆ-ರಾಜೇಂದರ್ ಮೇಘವಾರ್, ಪಾಕಿಸ್ತಾನದ ಮೊದಲ ಹಿಂದೂ ಪೊಲೀಸ್‌ ಅಧಿಕಾರಿ-Ind vs Aus: ಭಾರತಕ್ಕೆ 10 ವಿಕೆಟ್‌ ಹೀನಾಯ ಸೋಲು, 1031 ಎಸೆತಗಳಲ್ಲಿ ಪಂದ್ಯ ಮುಗಿಸಿದ ಆಸ್ಟ್ರೇಲಿಯಾ!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

ಫಸ್ಟ್‌ ನೈಟ್ ವೀಡಿಯೋ ಹಂಚಿಕೊಂಡ ದಂಪತಿ, ಇನ್ನು ಏನೇನೆಲ್ಲಾ ನೋಡ್ಬೇಕಪ್ಪಾ ಅಂತಿದ್ದಾರೆ ನೆಟ್ಟಿಗರು

Twitter
Facebook
LinkedIn
WhatsApp
ಫಸ್ಟ್‌ ನೈಟ್ ವೀಡಿಯೋ ಹಂಚಿಕೊಂಡ ದಂಪತಿ, ಇನ್ನು ಏನೇನೆಲ್ಲಾ ನೋಡ್ಬೇಕಪ್ಪಾ ಅಂತಿದ್ದಾರೆ ನೆಟ್ಟಿಗರು

ಭಾರತೀಯ ಸಂಪ್ರದಾಯದಲ್ಲಿ ಮದುವೆಯ ಆಚರಣೆಗಳು ತುಂಬಾ ಮಹತ್ವಪೂರ್ಣವಾಗಿದೆ. ಎಲ್ಲವನ್ನೂ ಶಾಸ್ತ್ರಬದ್ಧವಾಗಿ ಮಾಡಲಾಗುತ್ತದೆ. ನಿಶ್ಚಿತಾರ್ಥ, ಮೆಹಂದಿ, ಮದುವೆ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯುತ್ತದೆ. ಸಾಮಾನ್ಯವಾಗಿ ಮದುವೆಯಾದ ಬಳಿಕವೇ ಹುಡುಗ-ಹುಡುಗಿ ಒಂದಾಗುತ್ತಾರೆ. ಫಸ್ಟ್‌ ನೈಟ್ ಮಾಡಿಕೊಳ್ಳುತ್ತಾರೆ. ಅಲ್ಲಿಯವರೆಗಿನ ಎಲ್ಲಾ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆದರೂ ಮೊದಲ ರಾತ್ರಿ ಮಾತ್ರ ಗಂಡ-ಹೆಂಡತಿಯ ನಡುವಿನ ಖಾಸಗಿ ವಿಷಯ. ಆದರೆ ಇಲ್ಲೊಂದು ಜೋಡಿ ತಮ್ಮ ಫಸ್ಟ್‌ನೈಟ್‌ನ್ನು ಸಹ ಖುಲ್ಲಂಖುಲ್ಲಂ ಆಗಿ ಮಾಡಿಕೊಂಡಿದೆ. ಅಷ್ಟೂ ಸಾಲ್ದು ಅಂತ ದಂಪತಿ ತಮ್ಮ ಫಸ್ಟ್‌ ನೈಟ್ ವೀಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ.

ಪ್ರತಿಯೊಬ್ಬರೂ ಎಲ್ಲರೊಂದಿಗೆ ಮುಕ್ತವಾಗಿ ಮಾತನಾಡಿದರೂ ತಮ್ಮ ಖಾಸಗಿ ಜೀವನವನ್ನು (Personal life) ಗೌಪ್ಯವಾಗಿಡುತ್ತಾರೆ. ತಮ್ಮ ಜೀವನದ ಖಾಸಗಿ ವಿಚಾರಗಳನ್ನು ಯಾರೊಂದಿಗೂ ಹಂಚಿಕೊಳ್ಳಲು ಬಯಸುವುದಿಲ್ಲ. ಆದರೆ ಸೋಷಿಯಲ್ ಮೀಡಿಯಾಗಳ ಹಾವಳಿಯಿಂದ ಇತ್ತೀಚಿಗೆ ಎಲ್ಲರ ಜೀವನವೂ (Life) ಮುಕ್ತ ಮುಕ್ತ ಎಂಬಂತಾಗಿಬಿಟ್ಟಿದೆ. ಜೀವನದಲ್ಲಿ ನಡೆಯುವ ಎಲ್ಲಾ ಘಟನಾವಳಿಗಳು ಯಾವುದೇ ಮುಚ್ಚುಮರೆಯಿಲ್ಲದೆ ಸುಲಭವಾಗಿ ಇನ್ನೊಬ್ಬರಿಗೆ ತಿಳಿದುಬಿಡುತ್ತದೆ. ಸಾಮಾಜಿಕ ಜಾಲತಾಣ ಜಮಾನದಲ್ಲಿ ಇಂತಹ ಪ್ರಕರಣಗಳು ಸಾಮಾನ್ಯವಾಗಿಬಿಟ್ಟಿವೆ. ಇನ್ನೊಬ್ಬರಿಂದ ಖಾಸಗೀತನಕ್ಕೆ ಧಕ್ಕೆಯಾಗುವುದು ಬೇರೆ ವಿಚಾರ, ಆದ್ರೆ ತಮ್ಮ ಖಾಸಗಿತನಕ್ಕೆ ತಾವೇ ಧಕ್ಕೆ ತಂದುಕೊಳ್ಳುವುದೆಂದರೆ ? ಈ ಜೋಡಿ (Couple) ಮಾಡಿರುವುದು ಅದೇ ನೋಡಿ.

ಮೊದಲ ರಾತ್ರಿಯ ವಿಡಿಯೋ ಇನ್​ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡ ದಂಪತಿ
ಮೊದಲ ರಾತ್ರಿಯ ಕಲ್ಪನೆಯೇ ಮಧುರ. ಏಕೆಂದರೆ ಇದು ಎರಡು ದೇಹಗಳ ಜೊತೆಗೆ ಎರಡು ಮನಸ್ಸುಗಳು ಒಂದಾಗಿ ಬಾಳ ಪಯಣವನ್ನು ಒಟ್ಟಿಗೆ ಆರಂಭಿಸುವ ದಿನ. ಮೊದಲ ರಾತ್ರಿಯೆಂದರೆ (First night) ಅದೊಂದು ಖಾಸಗಿ ಕ್ಷಣ. ಆದರೆ, ಇಲ್ಲೊಂದು ಜೋಡಿ ತಮ್ಮ ಮೊದಲ ರಾತ್ರಿಯ ವಿಡಿಯೋವನ್ನು ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಳ್ಳುವ ಮೂಲಕ ನೆಟ್ಟಿಗರು ಹುಬ್ಬೇರಿಸಿರುವುದಲ್ಲದೆ ಆಕ್ರೋಶಕ್ಕೂ ಗುರಿಯಾಗಿದ್ದಾರೆ.

ಸೋಷಿಯಲ್​ ಮೀಡಿಯಾ ಜಗತ್ತನ್ನೇ ಆಳುತ್ತಿರುವ ಕಾಲವಿದು. ಇಲ್ಲಿ ಟ್ರೆಂಡ್ ಆಗಿ ಫೇಮಸ್ ಆಗಲು ಎಲ್ಲರೂ ಪ್ರಯತ್ನಿಸುತ್ತಾರೆ. ಡಾನ್ಸ್​ನಿಂದ ಹಿಡಿದು ಕುಟುಂಬದೊಂದಿಗೆ ವಿಡಿಯೋ ಚಿತ್ರೀಕರಿಸುವವರೆಗೆ ವಿವಿಧ ವಿಡಿಯೋಗಳನ್ನು ಅಪ್‌ಲೋಡ್ ಮಾಡುತ್ತಿರುತ್ತಾರೆ. ಇನ್ನೂ ಕೆಲವರು ತಮ್ಮ ಮುಜುಗರ ಉಂಟು ಮಾಡುವಂತಹ ವಿಡಿಯೋಗಳನ್ನು ಅಪ್​ಲೋಡ್​ ಮಾಡಿ ಲೈಕ್ಸ್ ಗಳಿಸುವುದೂ ಇದೆ. ಅದೇ ರೀತಿ ಆರುಶಿ ರಾಹುಲ್ ಅಫಿಶಿಯಲ್​ (arushirahulofficial) ಹೆಸರಿನ ಇನ್​ಸ್ಟಾಗ್ರಾಂ ಖಾತೆಯಲ್ಲಿ ಫಸ್ಟ್ ನೈಟ್ ವಿಡಿಯೋ ಪೋಸ್ಟ್​ ಮಾಡಲಾಗಿದೆ. 

ವಿಡಿಯೋದಲ್ಲಿ ನವವಿವಾಹಿತ ದಂಪತಿ, ತಮ್ಮ ಮೊದಲ ರಾತ್ರಿಯ ಖಾಸಗಿ ಕೋಣೆಯಲ್ಲಿರುವುದನ್ನು ಕಾಣಬಹುದು. ಮದುವೆ (Marriage) ಮುಗಿದ ನಂತರ ವಧು-ವರರು ತುಂಬಾ ಸಂತೋಷವಾಗಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಇಬ್ಬರು ಸಹ ಮದುವೆ ಉಡುಗೆಯನ್ನು ಧರಿಸಿದ್ದಾರೆ. ವಧು ಆಭರಣಗಳನ್ನು ಬಿಚ್ಚುತ್ತಿರುವುದು ಮತ್ತು ಆಕೆಯ ಪತಿ ಆಭರಣಗಳನ್ನು ಹಾಗೂ ಬಟ್ಟೆ ಬಿಚ್ಚಲು ಸಹಾಯ ಮಾಡುತ್ತಿರುವುದು ಮತ್ತು ಪರಸ್ಪರ ಚುಂಬಿಸುತ್ತಿರುವ ದೃಶ್ಯವಿದೆ. ನಾವು ಹೇಗೆ ನಮ್ಮ ಮೊದಲ ರಾತ್ರಿಯನ್ನು ಕಳೆದೆವು ಎಂದು ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ.

ಈ ವಿಡಿಯೋವನ್ನು ಜ.25ರಂದು ಪೋಸ್ಟ್​ ಮಾಡಲಾಗಿದ್ದು, ಇದೀಗ ಸಿಕ್ಕಾಪಟ್ಟೆ ವೈರಲ್​ ಆಗುತ್ತಿದೆ. ಸೋಷಿಯಲ್ ಮೀಡಿಯಾದಲ್ಲಿ ವೈರಲ್​ ಆಗಲು ಬಯಸಿದರೆ, ಮುಂದಿನ ಬಾರಿ ಇಡೀ ವಿಡಿಯೋವನ್ನು ಪೋಸ್ಟ್​ ಮಾಡಿ ಎಂದು ನೆಟ್ಟಿಗರೊಬ್ಬರು ಕಾಲೆಳೆದಿದ್ದಾರೆ. ಇದು ನಿಮ್ಮ ಖಾಸಗಿ ಕ್ಷಣ ಎಂಬುದು ನಿಮಗೆ ನೆನಪಿರಲಿ. ಇಂಥದ್ದನ್ನು ಜಾಲತಾಣದಲ್ಲಿ ಪೋಸ್ಟ್​ ಮಾಡುವ ಅಗತ್ಯವಿಲ್ಲ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು

ದೇಶದ ಪ್ರಮುಖ ಪ್ರತಿಭಾವಂತ ಯುವ ರಾಜಕೀಯ ಸಲಹ ಗಾರರು ಹಾಗೂ ತಂತ್ರ ಗಾರರು Twitter Facebook LinkedIn WhatsApp ನವದೆಹಲಿ: ಆಧುನಿಕ ಚುನಾವಣೆ ಮತ್ತು ರಾಜಕೀಯದಲ್ಲಿ ಚುನಾವಣಾ ಸಲಹೆ ನೀಡುವವರು ಹಾಗೂ ತಂತ್ರಗಾರರು(Political Strategist