ಪ್ಲಾಸ್ಟಿಕ್ ಸರ್ಜರಿ ಮಾಡ್ಸಿ ಪಶ್ಚಾತ್ತಾಪ ಪಡುತ್ತಿರುವ ನಟಿ ನೀತು; ತಲೆ ನೋವು ಬಂದ್ರೂ ಮಾತ್ರೆ ನುಂಗಲಾಗದು
35ಕ್ಕೂ ಹೆಚ್ಚು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿರುವ ನಟಿ ನೀತು ಶೆಟ್ಟಿ ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡ ನಂತರ ಸಿನಿಮಾದಿಂದ ದೂರು ಉಳಿದುಬಿಟ್ಟಿದ್ದಾರೆ ಅನ್ನೋ ಮಾತು ಹರಿದಾಡುತ್ತಿತ್ತು. ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡರೆ ಆಫರ್‌ಗಳು ಹೆಚ್ಚಾಗುತ್ತದೆ, ತೆರೆ ಮೇಲೆ ಗೊಂಬೆ ರೀತಿ ಕಾಣಿಸಬಹುದು ಎಂದು ತಪ್ಪು ಕಲ್ಪನೆಯಲ್ಲಿರುವ ಯುವ ನಟಿಯರು ದುಡುಕಿ ತೆಗೆದುಕೊಳ್ಳುತ್ತಿರುವ ನಿರ್ಧಾರದ ಬಗ್ಗೆ ನೀತು ಮಾತನಾಡಿದ್ದಾರೆ.
ಪ್ಲಾಸ್ಟಿಕ್ ಸರ್ಜರಿ: ‘ನಾನು ಪ್ಲಾಸ್ಟಿಕ್ ಸರ್ಜರಿ ಮಾಡಿಸಿಕೊಂಡಿರುವೆ. ಈಗ ಹಿಂತಿರುಗಿ ನೋಡಿದಾಗ ಅನಿಸುತ್ತದೆ ಆಗ ನಾನು ಯಾರ ಮಾತುಗಳು ಕೇಳಬಾರದಿತ್ತು ಎಂದು. ಪೂಜಾರಿ ಸಿನಿಮಾದಲ್ಲಿ ನಾನು ಚೆನ್ನಾಗಿದ್ದೆ. ಎಲ್ಲರೂ ನನಗೆ ಹೇಳುವವರು ನೀತು ದಪ್ಪ ಇದ್ಯಾ ದಪ್ಪ ಇದ್ಯಾ ಅಂತ ಆದರೆ ನಾನು ದಪ್ಪ ಇರಲಿಲ್ಲ ನಾರ್ಮಲ್ ಆಗಿದ್ದೆ. ಬೇರೆ ಅವರ ಮಾತು ಕೇಳಿ ಛೀ ನಾನು ಚೆನ್ನಾಗಿಲ್ಲ ಅಂತ ಆ ಮನಸ್ಥಿತಿಯಲ್ಲಿ ಯಾರೋ ಹೇಳಿದನ್ನು ಕೇಳಿಸಿಕೊಂಡು ಸರ್ಜರಿ ಮಾಡಿಸಿಕೊಳ್ಳಲು ಮುಂದಾದೆ. ಸರ್ಜರಿ ನನಗೆ ಸೂಟ್ ಆಗಿಲ್ಲ. ಸರ್ಜರಿ ಆದ್ಮೇಲೆ ತುಂಬಾ ಔಷದಿಗಳನ್ನು ಕೊಡುತ್ತಾರೆ…ಕೂದಲು ಉದುರಬಾರದು ಅಂತ ಅದೆಲ್ಲಾ ನಮ್ಮ ದೇಹಕ್ಕೆ ಪ್ರೋಟೀನ್‌ಗಳು. ಕೊನೆಯಲ್ಲಿ ಹೇಗೆ ಆಯ್ತು ಅಂದ್ರೆ ತಲೆ ನೋವು ಬಂದ್ರೂ ಒಂದು ಮಾತ್ರೆ ತೆಗೆದುಕೊಳ್ಳಲು ಆಗುತ್ತಿರಲಿಲ್ಲ. ಮಾತ್ರೆ ಅಂದ್ರೆನೇ ನನಗೆ ವಾಂತಿ ಬರುವ ರೀತಿ ಆಗಿತ್ತು’ ಎಂದು ಜನಪ್ರಿಯ ರೇಡಿಯೋ ಸ್ಟೇಷನ್ ಸಂದರ್ಶನದಲ್ಲಿ ನೀತು ಮಾತನಾಡಿದ್ದಾರೆ.
‘ಜೀವನದಲ್ಲಿ ನಾನು ಕಲಿತ ಬಿಟರ್ ಪಾಠ, ಏನೆಂದರೆ ನಮ್ಮ ಬಗ್ಗೆ ನಮಗೆ ಕಾಳಜಿ ಇರಬೇಕು. ಯಾರೋ ಹೇಳಿದ್ದರು ಅಂತ ನಮ್ಮನ್ನು ನಾವು ದೂರ ಮಾಡಿಕೊಳ್ಳಬಾರದು. ಯಾರೋ ಬಂದು ಮೂಗು ಸರಿ ಇಲ್ಲ ಅಂದ್ರೆ ಸರ್ಜರಿ ಮಾಡಿಸುತ್ತೀವಾ? ಇಲ್ಲ ಮಾಡಿಸುತ್ತಿರಲಿಲ್ಲ. ದೇಹ ಸರಿ ಇಲ್ಲ ದಪ್ಪ ಇದ್ಯಾ ಅಂದ್ರು ಅಂತ ಮಾಡಿಸಿದೆ ನನಗೆ ನಾನೇ ಮೊದಲು ಬಾಡಿ ಶೇಮ್ ಮಾಡಿಕೊಂಡೆ. ನನ್ನ ದೇಹದ ಬಗ್ಗೆ ನನ್ನ ಆತ್ಮದ ಬಗ್ಗೆ ನನಗೆ ಮೊದಲು ಪ್ರೀತಿ ಇರಬೇಕು ಅನ್ನೋದು ಈಗ ಅರ್ಥವಾಗಿದೆ. ಬೇರೆ ಅವರಿಂದ ಅಲ್ಲ ನನ್ನ ಬಗ್ಗೆ ನಾನು ತಿಳಿದುಕೊಳ್ಳಲು ಇಷ್ಟ ಕಷ್ಟ ಪಡಬೇಕಿತ್ತು.’ಎಂದು ನೀತು ಹೇಳಿದ್ದಾರೆ.
‘ಗಾಳಿಪಟ ಸಿನಿಮಾದಲ್ಲಿ ನನ್ನ ಪಾತ್ರಕ್ಕೆ 4 ಕೆಜಿ ಜಾಸ್ತಿ ಇದ್ದಿದ್ರೆ ಅಥವಾ ಕಡಿಮೆ ಇದ್ದಿದ್ರೆ ವ್ಯತ್ಯಾಸ ಮಾಡುತ್ತಿರಲಿಲ್ಲ. ನಟನೆಯಲ್ಲಿ ಏನೂ ಬದಲಾವಣೆ ಅಗುತ್ತಿರಲಿಲ್ಲ. ಸಣ್ಣ ಆಗಿದ ತಕ್ಷಣ ನಾನು ತುಂಬಾ ಒಳ್ಳೆ ಪರ್ಫಾರ್ಮರ್ ಆಗುತ್ತೀನಾ? ಇಲ್ಲ. ಕೆಲವೊಂದು ಪಾತ್ರಗಳಿಗೆ ನಾವು ಸೂಟ್ ಆಗದೇ ಇರಬಹುದು ಕೆಲವೊಂದಕ್ಕೆ ಆಗಬಹುದು. ಸ್ಟುಡೆಂಟ್ ಪಾತ್ರ ಮಾಡುವಾಗ ತುಂಬಾ ಸಣ್ಣಗಿರುವವರು ಬೇಕು ಎನ್ನುತ್ತಾರೆ. ಬಾಡಿ ಶೇಮಿಂಗ್ ಮಾಡಬೇಡಿ ಕಲಾವಿದರನ್ನು ತೆಳ್ಳಗೆ ಬೆಳ್ಳಗೆ ಇದ್ದರೆ ಮಾತ್ರ ಇರಬೇಕು ಅಂದ್ರೆ ಬಂದಿಸಿದಂತೆ. ಹೆಣ್ಣು ಮಕ್ಕಳಿಗೆ ಇರುವ ಪಾತ್ರಗಳು ತುಂಬಾ ಕಡಿಮೆ ಸ್ಕೋಪ್‌ಗಳು ಕಡಿಮೆ ಇದೆ. ನಾನು ಅದ್ಭುತ ಕಲಾವಿದೆ ತುಂಬಾನೇ ಹೆಮ್ಮೆಯಿಂದ ಹೇಳಿಕೊಳ್ಳುವೆ. ಯಾವಾಗ ನಾನು ಪ್ರಾಮಾಣಿಕವಾಗಿ ಸರ್ಜರಿ ಮಾಡಿಸಿಕೊಂಡಿರುವ ವಿಚಾರ ಹೇಳುವುದಕ್ಕೆ ಶುರು ಮಾಡಿದೆ ಜನರಿಗೆ ನನ್ನ ಮೇಲೆ ಗೌರವ ಹೆಚ್ಚಾಯ್ತು ನನ್ನನ್ನು ಅರ್ಥ ಮಾಡಿಕೊಂಡರು ಅದರಿಂದ 35 ಸಿನಿಮಾಗಳನ್ನು ಮಾಡಿರುವೆ. ಬೇರೆ ನಟಿಯರಿಗೆ ಹೋಲಿಸಿದರೆ ಕಡಿಮೆ ಸಿನಿಮಾ ಇರಬಹುದು ಆದರೆ ನಾನು ಖುಷಿಯಾಗಿರುವೆ’ ಎಂದಿದ್ದಾರೆ ನೀತು.