ಬುಧವಾರ, ಮೇ 15, 2024
8 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ: ಖಾಸಗಿ ಶಾಲೆಯ ಮಾಲೀಕನ ಬಂಧನ!-Breaking NEWS: ಲಾರಿಗೆ ಡಿಕ್ಕಿ ಹೊಡೆದು ಬಸ್‌ಗೆ ಬೆಂಕಿ; 6 ಮಂದಿ ಸಾವು-Rakhi Sawant: ಹೃದಯಾ ಸಮಸ್ಯೆಯಿಂದ ಆಸ್ಪತ್ರೆಗೆ ದಾಖಲಾದ ರಾಖಿ ಸಾವಂತ್; ಫೋಟೋ ವೈರಲ್!-Gold Rate: ನಿಮ್ಮ ನಗರದಲ್ಲಿ ಆಭರಣದ ಬೆಲೆ ಹೇಗಿದೆ.!-ಕುರ್ಕುರೆ ತರಲಿಲ್ಲ ಎಂದು ವಿಚ್ಛೇದನಕ್ಕೆ ಅರ್ಜಿ ಹಾಕಿದ ಪತ್ನಿ..!-ಹೆಚ್ ಡಿ ರೇವಣ್ಣಗೆ ಜಾಮೀನು ಸಿಕ್ಕಿದಕ್ಕೆ ನಾನಂತೂ ಖುಷಿ ಪಡಲ್ಲ, ಸಂಭ್ರಮಿಸುವ ಸಮಯವೂ ಇದಲ್ಲ; ಹೆಚ್ ಡಿ ಕುಮಾರಸ್ವಾಮಿ-ಮುಂಬೈ: ಬಿರುಗಾಳಿ ಮಳೆಗೆ ಜಾಹೀರಾತು ಫಲಕ ಕುಸಿದು 14 ಮಂದಿ ಸಾವು..!-ಪುತ್ತೂರು: ಪ್ರೇತ ಮದುವೆಗೆ ವರ ಬೇಕಾಗಿದ್ದಾನೆ; ಪತ್ರಿಕೆಯಲ್ಲಿ ಜಾಹೀರಾತು ಮೊರೆ ಹೋದ ಕುಟುಂಬಸ್ಥರು.!-ಪರಿಷತ್ ಚುನಾವಣೆಯಲ್ಲಿ ಪಕ್ಷೇತರ ಸ್ಪರ್ಧಿಸುವುದಾಗಿ ಘೋಷಿಸಿದ ರಘುಪತಿ ಭಟ್.!-ಕರಾವಳಿ ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು-ಮಿಂಚು ಮತ್ತು ಗಾಳಿಯೊಂದಿಗೆ ಮಳೆ ಮುನ್ಸೂಚನೆ..!
ಬ್ರೇಕಿಂಗ್ ನ್ಯೂಸ್
{"ticker_effect":"slide-v","autoplay":"true","speed":3000,"font_style":"normal"}

Select Lanuage:

ಪ್ರೀತಿಸಿ ಮದುವೆಯಾಗಿದ್ದ ಗೃಹಿಣಿ ಅನುಮಾನಾಸ್ಪದ ರೀತಿಯಲ್ಲಿ ಸಾವು

Twitter
Facebook
LinkedIn
WhatsApp
ಪ್ರೀತಿಸಿ ಮದುವೆಯಾಗಿದ್ದ ಗೃಹಿಣಿ ಅನುಮಾನಾಸ್ಪದ ರೀತಿಯಲ್ಲಿ ಸಾವು

ಬೆಂಗಳೂರು ಗ್ರಾಮಾಂತರ: ಮನೆಯಲ್ಲಿ ಸೂತಕದ ಛಾಯೆ ಆವರಿಸಿದೆ. ಸಂಬಂಧಿಕರು ನೀರವ ಮೌನಕ್ಕೆ ಜಾರಿದ್ದಾರೆ. ಗಂಡನ ಜೊತೆ ನೂರು ಕಾಲ ಬಾಳಬೇಕು ಎಂದು ಸಾಕಷ್ಟು ಕನಸುಗಳನ್ನ ಹೊತ್ತು ಪ್ರೀತಿಸಿದವನ ಜೊತೆ ಬಂದಿದ್ದ ಸುಂದರಿ, ಮದುವೆಯಾಗಿ ಮೂರು ವರ್ಷ ಕಳೆಯುವಷ್ಟರಲ್ಲೆ ದುರಂತ ಅಂತ್ಯ ಕಂಡಿದ್ದಾಳೆ. ಇಷ್ಟಪಟ್ಟವನ‌ ಜೊತೆ ಚೆನ್ನಾಗಿ ಬದುಕಿ ಬಾಳುತ್ತಾಳೆ ಅಂದುಕೊಂಡಿದ್ದ ಮಗಳು ಅಡ್ಡಲಾಗಿ ಮಲಗಿರೂದನ್ನ ಕಂಡು ತಲೆ ಮೇಲೆ ಬಂಡೆ ಬಿದ್ದಂತೆ ಹೆತ್ತವರು ನೀರವ ಮೌನಕ್ಕೆ ಶರಣಾಗಿದ್ದಾರೆ.

ಇಲ್ಲಿ ಈ ರೀತಿ ಚಕ್ಕ ವಯಸ್ಸಿಗೆ ಸಾವಿನ ಮನೆ‌ ಸೇರಿರುವ ಈಕೆಯ ಹೆಸರು ಮೇಘನಾ ಜಿಲ್ಲೆಯ ದೊಡ್ಡಬಳ್ಳಾಪುರ ತಾಲೂಕಿನ ಕಲ್ಲುಂಟೆ ಗ್ರಾಮದ‌ ನಿವಾಸಿ. ಒಬ್ಬಳೆ ಮಗಳಾಗಿದ್ದ ಕಾರಣ ಮನೆಯವರು ಮುದ್ದಾಗಿ‌ ಸಾಕಿದ್ದು ಬಿಇ ವಿದ್ಯಾಭ್ಯಾಸವನ್ನು ಮಾಡಿಸಿದ್ರು. ಆದ್ರೆ ಕಾಲೇಜಿಗೆ ಹೋಗುವ ವೇಳೆ ಪಕ್ಕದ‌ ಊರಿನ ನಾಗೇಶ್ ಎನ್ನುವ ಯುವಕನ ‌ಜೊತೆ ಈಕೆಗೆ ಪ್ರೆಮಾಂಕುರವಾಗಿದೆ. ಈ ವಿಚಾರ ಮನೆಯವರೆಗೂ ತಿಳಿದಿದೆ. ಹೀಗಾಗಿ ಮನೆಯವರು ಯುವತಿಗೆ ಬೇರೆ ಮದುವೆ ಮಾಡಲು ಮುಂದಾಗ್ತಿದ್ದಂತೆ ಇಬ್ಬರು ಮನೆ ಬಿಟ್ಟು ಹೋಗಿ ಮದುವೆಯಾಗಿ ಬಂದಿದ್ದರು.

ಮೊದಲಿಗೆ ವಿರೋಧ ವ್ಯಕ್ತಪಡಿಸಿದ್ದ ಮೇಘನಾ ಕುಟುಂಬಸ್ಥರು ನಂತರ ಒಂದೇ ಜಾತಿಯವರಾಗಿದ್ದ ಕಾರಣ ಒಂದಾಗಿದ್ದು ಇಬ್ಬರು ಸುಖವಾಗಿ ಬಾಳಲಿ ಎಂದು ಚಿನ್ನಾಭರಣಗಳನ್ನ ನೀಡಿದ್ದು, ಇಬ್ಬರು ಅನ್ನೊನ್ಯತೆಗೆ ಒಂದು ಮಗು ಸಹ ಆಗಿದೆ. ಆದರೆ ಮದುವೆಯಾಗಿ ಎರಡು ವರ್ಷ ಕಳೆಯುವಷ್ಡರಲ್ಲೆ ಇಬ್ಬರ ನಡುವೆ ಕಲಹ ಶುರುವಾಗಿದ್ದು ಕಳೆದ ರಾತ್ರಿ ಮನೆಯಲ್ಲಿ ಗಂಡ ಹೆಂಡತಿ ನಡುವೆ ಜಗಳ ನಡೆದಿದೆ. ಈ ವೇಳೆ ಜಗಳ ಮಾಡಿಕೊಂಡು ಕೋಣೆ ಒಳಗಡೆ‌ ಹೋದ ಮೇಘನಾ ಬೆಳಾಗಗುವಷ್ಡರಲ್ಲಿ ಹೆಣವಾಗಿ ಪತ್ತೆಯಾಗಿದ್ದು ಗಂಡನ ಮನೆಯವರೆ ಮೇಘನಾಳನ್ನ ಏನೋ ಮಾಡಿದ್ದಾರೆ ಎಂದು ಮೇಘನಾ ಕುಟುಂಬಸ್ಥರು ಆರೋಪಿಸಿದ್ದಾರೆ.

ಮದುವೆಯಾಗಿ ಮಗುವಾದ ನಂತರ ಮೇಘನಾ ಮತ್ತು ಗಂಡನ ನಡುವೆ ಕಲಹ ಶುರುವಾಗಿದ್ದು ಹಲವು ಭಾರಿ ಮನೆಯವರಿಗೆ ಮದುವೆ ವಿಚಾರದಲ್ಲಿ ನಿಮ್ಮ ಮಾತು ಕೇಳಬೇಕಿತ್ತು ಎಂದು ಹೇಳಿದ್ದಳಂತೆ. ಜತೆಗೆ ರಾತ್ರಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪಿದ್ದು, ಊರಿನವರು ಬೆಳಗ್ಗೆ ತರಾ ತುರಿಯಲ್ಲಿ ಮಣ್ಣು ಮಾಡಲು ನೋಡಿದ್ದಾರೆ. ಈ ವೇಳೆ ಪೊಲೀಸರು ಎಂಟ್ರಿಕೊಟ್ಟು ಮೃತದೇವನ್ನ ಶವಾಗಾರಕ್ಕೆ‌ ರವಾನಿಸಿ ಪರೀಕ್ಷೆ ಮಾಡಿಸಿದ್ದಾರೆ. ಇನ್ನು ಈ ಬಗ್ಗೆ ಗಂಡ ನಾಗೇಶನನ್ನ ಕೇಳಿದ್ರೆ ನಾವಿಬ್ಬರು ಪ್ರೀತಿಸಿ ಮದುವೆಯಾಗಿದ್ದು ಇಬ್ಬರು ಚೆನ್ನಾಗೆ ಸಂಸಾರ ಮಾಡ್ತಿದ್ವಿ. ರಾತ್ರಿ ಊಟ ಬಡಿಸುವ ವಿಚಾರಕ್ಕೆ ಸಣ್ಣ ಗಲಾಟೆಯಾಗಿ ನಾನು ಬೈದ್ದಿದ್ದ ಕಾರಣ ಆಕೆ‌ ಕೊಠಡಿ ಒಳಗಡೆ‌‌ ಹೋಗಿ ಬಾಗಿಲು ಹಾಕಿಕೊಂಡಿದ್ದಳು. ಹೀಗಾಗಿ ಮಧ್ಯರಾತ್ರಿ ಮಗು ಅಳುತ್ತಿದೆ ಎಂದು ಕೊಠಡಿ ಒಳಗೆ ಹೋಗಿ ನೋಡಿದಾಗ ಆಕೆ ನೇಣು ಹಾಕಿಕೊಂಡಿದ್ದಾಳು ಎಂದಿದ್ದಾನೆ.

ಒಟ್ಟಾರೆ ಗಂಡ ಹೆಂಡತಿ ಜಗಳ ಉಂಡು ಮಲಗುವವರೆಗೂ ಅನ್ನೂ ಮಾತಿದ್ರು ಉಂಡು ಮಲಗಿದ ಮೇಲೆ‌ ಪ್ರೀತಿಸಿ ಮದುವೆಯಾಗಿದ್ದ ಗೃಹಿಣಿ ನೇಣಿಗೆ ಶರಣಾಗಿರುವುದು ನಿಜಕ್ಕೂ ದುರಂತ. ಇನ್ನು ಈ ಬಗ್ಗೆ ಹೊಸಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದು ಸಂಪೂರ್ಣ ತನಿಖೆ ನಂತರ ಮೇಘನಾಳದ್ದು ಕೊಲೆಯೋ ಅಥವಾ ಆತ್ಮಹತ್ಯೆಯೋ ಅನ್ನೂದು ಬೆಳಕಿಗೆ ಬರಬೇಕಿದೆ.

ಇದಕ್ಕೆ ಸಂಬಂಧಿಸಿದ ಇತರ ಸುದ್ದಿಗಳು

ಕರಾವಳಿ