ಪ್ರಿಯಕರನ ಖಾಸಗಿ ಫೋಟೋ ಹಂಚಿಕೊಂಡ ಮಲೈಕಾ..!
ಮುಂಬಯಿ: ಕಳೆದ ಕೆಲ ಸಮಯದಿಂದ ಬಾಲಿವುಡ್ ನಲ್ಲಿ ಟ್ರೆಂಡ್ ನಲ್ಲಿರುವ ಹಾಟ್ ಕಪಲ್ ಅರ್ಜುನ್ ಕಪೂರ್ ಹಾಗೂ ಮಲೈಕಾ ಆರೋರಾ ಮತ್ತೆ ಸುದ್ದಿಯಾಗಿದ್ದಾರೆ. ಈ ಬಾರಿ ನಟಿ ಮಲೈಕಾ ಟ್ರೋಲ್ ಆಗಿದ್ದಾರೆ.
ಇತ್ತೀಚೆಗೆ ಮಲೈಕಾ – ಅರ್ಜುನ್ ಏರ್ ಪೋರ್ಟ್ ವೊಂದರಲ್ಲಿ ಜೊತೆಯಾಗಿ ಕಾಣಿಸಿಕೊಂಡಿದ್ದು, ವೈರಲ್ ಆಗಿತ್ತು. “ನಾನೀಗ ಜೀವನದ ಮಹತ್ವದ ಘಟ್ಟದಲ್ಲಿದ್ದೇನೆ ಎಂದು ನನಗೆ ಅನ್ನಿಸುತ್ತದೆ. ಮುಂದಿನ 30 ವರ್ಷಗಳ ಕಾಲ ನಾನು ಈ ರೀತಿ ಕೆಲಸ ಮಾಡಲು ಬಯಸುತ್ತೇನೆ. ನಾನು ಹೊಸತನ್ನು ಅನ್ವೇಷಿಸಲು ಬಯಸುತ್ತೇನೆ. ಜೀವನದಲ್ಲಿ ಮುಂದೆ ಪ್ರಯಾಣಿಸಲು ಬಯಸುತ್ತೇನೆ. ನನ್ನ ಹಾಗೂ ಅರ್ಜುನ್ ನಡುವಿನ ಸಂಬಂಧವನ್ನು ನಾನು ಮುಂದಿನ ಹಂತಕ್ಕೆ ಕೊಂಡೊಯ್ಯಲು ನಾನು ಇಷ್ಟಪಡುತ್ತೇನೆ. ನಾವಿಬ್ಬರೂ ಇದಕ್ಕೆ ಸಿದ್ಧರಿದ್ದೇವೆ”ಎಂದು ಮಲೈಕಾ ಹೇಳಿದ್ದರು.
ಇದಾದ ಬಳಿಕ ಮಲೈಕಾ ಹಾಗೂ ಅರ್ಜುನ್ ಒಂದೇ ಏರ್ ಪೋರ್ಟ್ ನಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿರುವುದು ಇಬ್ಬರು ಮದುವೆಯಾಗಲು ಸಿದ್ದತೆಯನ್ನು ನಡೆಸುತ್ತಿದ್ದಾರೆ ಎನ್ನುವ ಹಾಟ್ ಗಾಸಿಪ್ ನ್ನು ಹಬ್ಬಿಸಿತ್ತು.
ಈ ನಡುವೆ ಬಾಲಿವುಡ್ ನ ಮುನ್ನಿ ಈಗ ತನ್ನ ಪ್ರಿಯಕರ ಅರ್ಜುನ್ ಕಪೂರ್ ಅವರ ಹಾಟ್ ಫೋಟೋವೊಂದನ್ನು ಸ್ಟೋರಿಯಲ್ಲಿ ಪೋಸ್ಟ್ ಮಾಡಿದ್ದು ವೈರಲ್ ಆಗಿದೆ.
ನಟ ಅರ್ಜುನ್ ಕಪೂರ್ ಮೈ ಮೇಲೆ ಏನು ಹಾಕದೆ,ಸೋಫದಲ್ಲಿ ತನ್ನ ಖಾಸಗಿ ಅಂಗಕ್ಕೆ ದಿಂಬುವೊಂದನ್ನು ಅಡ್ಡಯಿಟ್ಟು ಮೈಮುರಿಯುವ ಫೋಟೋವನ್ನು “My very own lazy boy” ಎಂದು ಬರೆದುಕೊಂಡು ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಮಲೈಕಾ ಪೋಸ್ಟ್ ಮಾಡಿದ್ದಾರೆ.
ಈ ಸ್ಟೋರಿಗೆ ಅನೇಕ ಮಂದಿ ನಟಿಯನ್ನು ಟ್ರೋಲ್ ಮಾಡಿದ್ದಾರೆ. , “ಅವಳು ಇದನ್ನು ನಮಗೆ ಏಕೆ ತೋರಿಸುತ್ತಿದ್ದಾಳೆ? ಈ ನಗ್ನ ಅರ್ಜುನನನ್ನು ನೋಡಲು ನಮಗೆ ಇಷ್ಟವಿಲ್ಲ” ಎಂದು ಒಬ್ಬರು ರೆಡ್ಡಿಟ್ ನಲ್ಲಿ ಬರೆದಿದ್ದಾರೆ. “ಈ ಫೋಟೋವನ್ನು ಅವರು ಪಬ್ಲಿಕ್ ಅಕೌಂಟ್ ನಲ್ಲಿ ಹಂಚಿಕೊಳ್ಳುವಾಗ ನಟಿ ಮದ್ಯ ಕುಡಿದಿದ್ದಳು ಇರಬೇಕು” ಎಂದು ಮತ್ತೊಬ್ಬರು ಬರೆದಿದ್ದಾರೆ. “ಇದು ಅಸಹ್ಯವೆಂದು” ಇನ್ನೊಬ್ಬರು ಬರೆದಿದ್ದಾರೆ.