ಪ್ರಧಾನಿ ಮೋದಿ ವಿದ್ಯಾರ್ಹತೆ ಪ್ರಶ್ನಿಸಿದ ಕೇಜ್ರಿವಾಲ್ಗೆ ಶಾಕ್, 25 ಸಾವಿರ ರೂಪಾಯಿ ದಂಡ ವಿಧಿಸಿದ ಹೈಕೋರ್ಟ್!
ಅಹ್ಮದಾಬಾದ್: ಪ್ರಸಿದ್ಧ ವ್ಯಕ್ತಿಗಳ ಬಗ್ಗೆ ತಿಳಿದುಕೊಳ್ಳಲು ಆಸಕ್ತಿ ಉಳ್ಳವರು ಆರ್ಟಿಐ ಮೂಲಕ ಮಾಹಿತಿಯನ್ನು ಪಡೆದುಕೊಳ್ಳಬಹುದು. ಇದೇ ರೀತಿ ಪ್ರಧಾನಿ ನರೇಂದ್ರ ಮೋದಿಯವರ ಪದವಿ ಮತ್ತು ಸ್ನಾತಕೋತ್ತರ ಪದವಿ ಪ್ರಮಾಣಪತ್ರವನ್ನು ಪ್ರಧಾನ ಮಂತ್ರಿ ಕಚೇರಿ ನೀಡಬೇಕು ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಕೇಂದ್ರ ಮಾಹಿತಿ ಆಯೋಗಕ್ಕೆ ಅರ್ಜಿ ಸಲ್ಲಿಸಿದ್ದರು. ನಂತರ ಆಯೋಗ ಗುಜರಾತ್ ವಿವಿಗೆ ಮೋದಿ ಪದವಿ ಬಗ್ಗೆ ಕೇಜ್ರಿವಾಲ್ಗೆ ಮಾಹಿತಿ ನೀಡುವಂತೆ ಆದೇಶ ನೀಡಿತ್ತು. ಆದರೆ ಇದನ್ನು ಪ್ರಶ್ನಿಸಿದ್ದ ವಿವಿ ಹೈಕೋರ್ಟ್ಗೆ ಮೆಟ್ಟಿಲೇರಿತ್ತು.
ಇದೀಗ ಈ ಅರ್ಜಿ ಕುರಿತು ಗುಜರಾತ್ ಹೈಕೋರ್ಟ್ ತೀರ್ಪು ನೀಡಿದ್ದು, ಪ್ರಧಾನಿ ಮೋದಿ ತಮ್ಮ ಪದವಿ ಪ್ರಮಾಣ ಪತ್ರಗಳನ್ನು ಪ್ರಧಾನ ಮಂತ್ರಿ ಕಚೇರಿ ಒದಗಿಸುವ ಅಗತ್ಯವಿಲ್ಲ ಎಂದು ಹೇಳಿದೆ. ಆರ್ಟಿಐ ಅಡಿಯಲ್ಲಿ ಪ್ರಧಾನಿಯವರ ಶಿಕ್ಷಣದ ಬಗ್ಗೆ ಕೇಳುವುದು ಸೂಕ್ತವಲ್ಲ ಎಂದಿರುವ ಕೋರ್ಟ್, ಪಿಎಂ ಪದವಿ ಬಗ್ಗೆ ಮಾಹಿತಿ ಕೇಳಿ ಬೇಡಿಕೆಯಿಟ್ಟದ್ದ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ಗೆ 25 ಸಾವಿರ ದಂಡ ವಿಧಿಸಿದೆ.
ನನ್ನ ದೇಶದ ಪ್ರಧಾನಿಯ ವಿದ್ಯಾರ್ಹತೆ ತಿಳಿಯುವ ಹಕ್ಕೂ ಕೂಡ ಇಲ್ಲವೇ ಎಂದು ಗುಜರಾತ್ ಹೈಕೋರ್ಟ್ ಆದೇಶದ ಬಗ್ಗೆ ದೆಹಲಿ ಸಿಎಂ ಹಾಗೂ ಆಪ್ ಮುಖ್ಯಸ್ಥ ಅರವಿಂದ್ ಕೇಜ್ರಿವಾಲ್ ಪರೋಕ್ಷ ಕಿಡಿಕಾರಿದ್ದಾರೆ.
ಇದೀಗ ಕೋರ್ಟ್ ಆದೇಶಕ್ಕೆ ಪರೋಕ್ಷ ಕಿಡಿಕಾರಿರುವ ಅರವಿಂದ್ ಕೇಜ್ರಿವಾಲ್, ‘ಪ್ರಧಾನಿಯವರ ಶೈಕ್ಷಣಿಕ ಅರ್ಹತೆಯನ್ನು ತಿಳಿದುಕೊಳ್ಳುವ ಹಕ್ಕು ದೇಶಕ್ಕೆ ಇಲ್ಲವೇ ಎಂದು ಪ್ರಶ್ನಿಸಿದ್ದಾರೆ.
‘ಪ್ರಧಾನಿ ಎಷ್ಟು ಓದಿದ್ದಾರೆ ಎಂದು ತಿಳಿದುಕೊಳ್ಳುವ ಹಕ್ಕು ದೇಶಕ್ಕೆ ಇಲ್ಲವೇ? ಪದವಿಯನ್ನು ನ್ಯಾಯಾಲಯದಲ್ಲಿ ತೋರಿಸುವುದಕ್ಕೆ ಅವರು ಏಕೆ ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಪದವಿಯನ್ನು ನೋಡಲು ಬೇಡಿಕೆಯಿರುವವರಿಗೆ ದಂಡ ವಿಧಿಸಲಾಗುತ್ತದೆಯೇ? ಏನಾಗುತ್ತಿದೆ ಈ ದೇಶದಲ್ಲಿ?’ ‘ಅನಕ್ಷರಸ್ಥ ಅಥವಾ ಕಡಿಮೆ ವಿದ್ಯಾವಂತ ಪ್ರಧಾನಿ ದೇಶಕ್ಕೆ ತುಂಬಾ ಅಪಾಯಕಾರಿ’ ಎಂದು ಆಮ್ ಆದ್ಮಿ ಪಕ್ಷದ ಮುಖ್ಯಸ್ಥ ಕೇಜ್ರಿವಾಲ್ ಟ್ವೀಟ್ನಲ್ಲಿ ಆರೋಪಿಸಿದ್ದಾರೆ.