ಪುಲ್ವಾಮ ದಾಳಿ - ಕರಾಳ ಘಟನೆ! ಇಂದಿಗೆ 4 ವರ್ಷ
ಫೆಬ್ರವರಿ 14 ರಂದು ಜಗತ್ತು ಪ್ರೇಮಿಗಳ ದಿನವನ್ನು( Valentine’s Day) ಆಚರಿಸುತ್ತಿದ್ದಂತೆ ನಾಲ್ಕು ವರ್ಷದ ಹಿಂದೆ ಪುಲ್ವಾಮಾದಲ್ಲಿ(Pulwama Terror Attack) ಕರಾಳ ಘಟನೆಯೊಂದು ನಡೆದಿತ್ತು, ಅದೇ ಪುಲ್ವಾಮಾ ದಾಳಿ. ಭಾರತೀಯ ಭದ್ರತಾ ಪಡೆಗಳ ಮೇಲೆ ಇಲ್ಲಿಯವರೆಗೆ ನಡೆದ ಅತ್ಯಂತ ಭೀಕರ ದಾಳಿಗಳಲ್ಲಿ ಇದು ಒಂದಾಗಿದ್ದು, 40 ಸಿಆರ್‌ಪಿಎಫ್ ಯೋಧರು ಈ ದಾಳಿಗೆ ಬಲಿಯಾಗಿದ್ದರು. ನಾಲ್ಕು ವರ್ಷಗಳ ಹಿಂದೆ, 2019 ಫೆಬ್ರವರಿ 14 ರಂದು, 40 ಸಿಆರ್‌ಪಿಎಫ್ ಅಧಿಕಾರಿಗಳು ಪ್ರಾಣ ಕಳೆದುಕೊಂಡ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದಂತೆ ದೇಶಕ್ಕೆ ದೇಶವೇ ಸ್ತಬ್ದವಾಗಿತ್ತು.ಜೈಶ್-ಎ-ಮೊಹಮ್ಮದ್ ಆತ್ಮಹತ್ಯಾ ಬಾಂಬರ್ ಕೇಂದ್ರೀಯ ಮೀಸಲು ಪೊಲೀಸ್ ಪಡೆ (CRPF) ದ ಬೆಂಗಾವಲು ವಾಹನಕ್ಕೆ ಸ್ಫೋಟಕಗಳನ್ನು ತುಂಬಿದ ವಾಹನವನ್ನು ಡಿಕ್ಕಿ ಹೊಡೆದು ಈ ಕೃತ್ಯ ಎಸಗಿದ್ದನು.
ಜಮ್ಮು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಲೆಥ್‌ಪೋರಾ ಬಳಿಯ ಅವಾಂತಿಪೋರಾ ಸಮೀಪ ರಾಷ್ಟ್ರೀಯ ಹೆದ್ದಾರಿ 44ರಲ್ಲಿ 78 ಸೇನಾ ವಾಹನಗಳಲ್ಲಿ 2,500 ಸಿಆರ್‌ಪಿಎಫ್ ಯೋಧರನ್ನು ಕರೆದುಕೊಂಡು ಸಾಲಾಗಿ ಸಾಗುತ್ತಿದ್ದವು.
ಈ ವೇಳೆ 350 ಕೆಜಿ ಸ್ಫೋಟಕಗಳನ್ನು ಹೊತ್ತ ಮಹೀಂದ್ರಾ ಸ್ಕಾರ್ಪಿಯೋ ಎಸ್‌ಯುಪಿಯೊಂದು ನೇರವಾಗಿ ಸೇನಾ ವಾಹನಕ್ಕೆ ಡಿಕ್ಕಿ ಹೊಡೆಯಿತು (Pulwama Attack). ಪರಿಣಾಮ ಕ್ಷಣ ಮಾತ್ರದಲ್ಲೇ 76ನೇ ಬೆಟಾಲಿಯನ್‌ನ 40 ಯೋಧರು ಹುತಾತ್ಮರಾದರು.